

ಮೇಷ: ಧನ ನಷ್ಟವಾಗಬಹುದು. ಮನಕ್ಲೇಷ. ಅಮೂಲ್ಯ ವಸ್ತುಗಳ ಕಳವು. ಮಾತಿನ ಚಕಮಕಿ. ಚೋರ ಭೀತಿ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 9
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ವ್ಯತ್ಯಯ. ಸಂಜೆ ಹೊತ್ತಿಗೆ ಸಮಾಧಾನ. ಶುಭಸಂಖ್ಯೆ: 6
ಮಿಥುನ: ಧನಲಾಭವಾಗಲಿದೆ. ವಾಹನ ಅಥವಾ ಸ್ಥಿರಾಸ್ತಿ ಖರೀದಿ ಯೋಗ. ಹಿರಿಯರಿಂದ ಉಪದೇಶವನ್ನು ಆತ್ಮೀಯ ಭಾವದಲ್ಲಿ ಆಲಿಸಿ. ಶುಭಸಂಖ್ಯೆ: 9
ಕಟಕ: ಗಣಕ ಯಂತ್ರದಿಂದ ಲಾಭ ಬರುವುದು. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ನಿರೀಕ್ಷೆಗಿಂತ ಹೆಚ್ಚು ಹಣ ಖರ್ಚಾಗಿ ಕಷ್ಟ. ಶುಭಸಂಖ್ಯೆ: 1
ಸಿಂಹ: ಮೇಲಧಿಕಾರಿಗಳಿಂದ ತೊಂದರೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಆರೋಗ್ಯದತ್ತ ಗಮನವಿಡಿ. ಸಾಲ ಮರುಪಾವತಿ. ಶುಭಸಂಖ್ಯೆ: 7
ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜತೆಯಲ್ಲಿ ಕಲಹ, ಸಮಾಧಾನ ಚಿತ್ತ ಅತಿಮುಖ್ಯ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4
ತುಲಾ: ಮಾನಸಿಕ ವೇದನೆ ಉಂಟಾಗುವುದು. ಅಗ್ನಿಭಯ ವಿದೆ. ಅಶಾಂತಿಯ ವಾತಾವರಣ. ಕುಲದೇವರನ್ನು ಭಕ್ತಿಯಿಂದ ಪೂಜಿಸಿ. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಆದೀತು. ಮಾತಿನ ಚಕಮಕಿ. ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ ಉಂಟಾಗುವುದು. ಶುಭಸಂಖ್ಯೆ: 7
ಧನುಸ್ಸು: ಹೊಸ ಯೋಜನೆಗಳನ್ನು ಪ್ರಾರಂಭ ಮಾಡಲು ಇದು ಸಕಾಲ. ವ್ಯವಸಾಯದಲ್ಲಿ ಲಾಭವಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಶುಭಸಂಖ್ಯೆ: 9
ಮಕರ: ಬಂಗಾರ ಪ್ರಾಪ್ತಿ ಯೋಗವಿದೆ. ಗುರುಹಿರಿಯರ ದರ್ಶನ ಮಾಡುವಿರಿ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಶುಭಸಂಖ್ಯೆ: 5
ಕುಂಭ: ಅನಗತ್ಯವಾಗಿ ಅಲೆದಾಟ ಮಾಡಬೇಕಾದೀತು. ಸಕಾಲಕ್ಕೆ ಊಟ ಮಾಡಲೂ ಆಗದಷ್ಟು ಒತ್ತಡ. ವಿವಿಧ ಕಾರಣಕ್ಕಾಗಿ ಧನ ನಷ್ಟ. ಶುಭಸಂಖ್ಯೆ: 2
ಮೀನ: ಶರೀರದಲ್ಲಿ ತಳಮಳದ ಅನುಭವ. ವೈದ್ಯರ ಭೇಟಿ ಮಾಡುವುದು ಸೂಕ್ತ. ಅತಿಯಾದ ನೋವು ಆದೀತು. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 1