

ಮೇಷ: ಈ ದಿನ ಮಿತ್ರರಲ್ಲಿ ಸ್ನೇಹ ವೃದ್ಧಿ. ಅನಿರೀಕ್ಷಿತವಾಗಿ ಲಾಭ. ದೂರ ಪ್ರಯಾಣ. ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ದಿನ. ಶತ್ರು ಬಾಧೆ. ಶುಭಸಂಖ್ಯೆ: 5
ವೃಷಭ: ಕಾರ್ಯಸಾಧನೆಗಾಗಿ ತಿರುಗಾಟ. ಅಡಕೆ ಮತ್ತು ಭತ್ತ ಬೆಳೆಗಾರರಿಗೆ ಲಾಭ. ಉದ್ಯೋಗದಲ್ಲಿ ಪ್ರಗತಿ. ಕುಟುಂಬದಲ್ಲಿ ನೆಮ್ಮದಿ. ಶುಭಸಂಖ್ಯೆ:6
ಮಿಥುನ: ಮಹಿಳಾ ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಕಿರುಕುಳ. ಸಾಲ ತೀರಿಸಲು ಆರ್ಥಿಕ ಮೂಲ ಪ್ರಾಪ್ತಿಯಾಗಿ ಸಮಾಧಾನ. ಶುಭಸಂಖ್ಯೆ: 2
ಕಟಕ: ಸರ್ಕಾರಿ ಕೆಲಸಗಳಲ್ಲಿ ಜಯ. ಸ್ತ್ರೀಯರಿಂದ ನೆರವು. ಸೌಂದರ್ಯ ವರ್ಧಕಗಳ ವ್ಯಾಪಾರಿಗಳಿಗೆ ಲಾಭ. ಮಾನಸಿಕ ಒತ್ತಡ. ಶುಭಸಂಖ್ಯೆ:7
ಸಿಂಹ: ವಾಹನದ ತೊಂದರೆ. ವ್ಯಾಪಾರದಲ್ಲಿ ನಷ್ಟ. ಶೇರು ಮಾರುಕಟ್ಟೆಯಲ್ಲಿ ಲಾಭ. ಸಂಧ್ಯಾಸಮಯದಲ್ಲಿ ಕುಲದೇವರನ್ನು ದರ್ಶಿಸಿ. ಶುಭಸಂಖ್ಯೆ: 3
ಕನ್ಯಾ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಆಟೋಮೊಬೈಲ್ಸ್ ವ್ಯಾಪಾರದಿಂದ ಸಂಪಾದನೆ. ಮೂಗಿನ ಮೇಲೆ ಕೋಪ ಬೇಡ. ಶುಭಸಂಖ್ಯೆ: 9
ತುಲಾ: ಭೂ ಸಂಬಂಧೀ ವ್ಯವಹಾರಗಳಲ್ಲಿ ವಿವಾದ. ಪರರ ಮಾತಿಗೆ ಕಿವಿ ಕೊಡಬೇಡಿ. ಶೈಕ್ಷಣಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ. ಶುಭಸಂಖ್ಯೆ: 4
ವೃಶ್ಚಿಕ: ಮೇಲಧಿಕಾರಿಗಳಿಂದ ಕಿರುಕುಳ . ಸ್ಥಾನಕ್ಕೆ ಚ್ಯುತಿ ಬರುವ ಸಾಧ್ಯತೆ. ಧನವ್ಯಯ, ಸಜ್ಜನ ವಿರೋಧ. ಅಲ್ಪ ಲಾಭ ಅಧಿಕ ಖರ್ಚು. ಶುಭಸಂಖ್ಯೆ:1
ಧನುಸ್ಸು: ಬಹು ನಿರೀಕ್ಷಿತ ವಿವಾಹ ಪ್ರಯತ್ನ. ಮನಸ್ಸಿನಲ್ಲಿ ಭಯಭೀತಿ. ಎಲ್ಲಿ ಹೋದರೂ ಅಶಾಂತಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು. ಶುಭಸಂಖ್ಯೆ:4
ಮಕರ: ಕೃಷಿ ಭೂಮಿ ಖರೀದಿಗೆ ನಿರ್ಧಾರ. ಶತ್ರುಗಳನ್ನು ಸದೆ ಬಡಿಯುವಿರಿ. ಉದ್ಯೋಗದಲ್ಲಿ ಬಡ್ತಿ. ಅನ್ಯರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ: 5
ಕುಂಭ: ವಿನಾಕಾರಣ ದ್ವೇಷ ಎದುರಿಸುವಿರಿ., ಮಾತಾಪಿತರ ಸೇವೆ ಮಾಡಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಪವಾದ ಭಯ. ಶುಭಸಂಖ್ಯೆ: 3
ಮೀನ: ನಿವೇಶನ ಖರೀದಿಗೆ ಅಡಚಣೆ. ವಿವಾಹಕ್ಕೆ ಸಂಬಂಧ ಕೂಡಿ ಬರಲಿದೆ. ಹಿತಶತ್ರುಗಳಿಂದ ತೊಂದರೆ. ಮಾನಸಿಕ ಬೇಸರ. ಶುಭಸಂಖ್ಯೆ:9