More

    ನಾವು ಆತ್ಮಹತ್ಯೆ ಮಾಡಿಕೊಳ್ಳಹುದು: ಅಸ್ತಿಪಂಜರದ ಮನೆಯಲ್ಲಿ ಸಿಕ್ಕ ಹಾಳೆ ಇಂಜಿನಿಯರ್ ಪುತ್ರಿಯ ಕೈ ಬರಹ?

    ಚಿತ್ರದುರ್ಗ: ಐವರ ಅಸ್ಥಿಪಂಜರಗಳು ದೊರೆತ ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೈರಿಯೊಂದರ ಹಾಳೆಯಲ್ಲಿ ‘ನಾವು ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಬರೆದಿದ್ದ ಬರಹ ಪತ್ತೆ ಆಗಿದೆ.

    ಅನಾರೋಗ್ಯದ ಸಂಬಂಧ ಕುಟುಂಬಸ್ಥರು ಚಿಕಿತ್ಸೆ ಪಡೆದ ಮಾಹಿತಿಗಳಿರುವ ಫೈಲ್‌ನ ಮಧ್ಯದಲ್ಲಿ ಆ ಹಾಳೆ ಪತ್ತೆಯಾಗಿದೆ. ಅದರಲ್ಲಿದ್ದ ಆತ್ಮಹತ್ಯೆ ಕುರಿತಾದ ಕೈ ಬರಹದ ಸಾಲು ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿ ಪುತ್ರಿ ತ್ರಿವೇಣಿ ಅವರದ್ದಿರಬಹುದು ಎಂದು ಪೊಲೀಸರು ಸಂದೇಹಿಸಿದ್ದಾರೆ.

    ಇದೇ ಹಾಳೆಯಲ್ಲಿ ದಿನಾಂಕ, ಸಹಿ ಇಲ್ಲದ ಬರಹವಿದೆ. ಅದರಲ್ಲಿ ಇಬ್ಬರ ಹೆಸರಿದೆ. ಇಬ್ಬರ ಕುರಿತು ವಿಚಾರಣೆ ನಡೆಸಿದಾಗ ಮಹತ್ವದ ಸುಳಿವೇನೂ ಸಿಕ್ಕಿಲ್ಲ. ಆದರಿದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿರಬಹುದು ಎನ್ನಲಾಗಿದೆ. ಐವರ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಗೆ ಕಾಯುತ್ತಿರುವ ಪೊಲೀಸರಿಗೆ ಇದೀಗ ಸಿಕ್ಕ ಮಾಹಿತಿ ಆತ್ಮಹತ್ಯೆಯ ಸಂಶಯಕ್ಕೆ ಪುಷ್ಟಿ ನೀಡಲಿದೆಯೇ? ಎಂಬ ಪ್ರಶ್ನೆಗಳು ಎದುರಾಗಿವೆ.

    ಲಭ್ಯ ಮಾಹಿತೆಯಂತೆ ಅಸ್ಥಿ ಪಂಜರಗಳ ಮೇಲೆ ಗಾಯದ ಗುರುತುಗಳು ಇರಲಿಲ್ಲ. ಕಾಲಿಗೆ ಹಗ್ಗ ಬಿಗಿದಿರಲಿಲ್ಲ. ಗೋಡೆ ಮೇಲಿವೆ ಎನ್ನಲಾದ ಹಸ್ತ ಗುರುತುಗಳ ಕುರಿತು ಎಫ್‌ಎಸ್‌ಎಲ್ ತಜ್ಞರ ಜತೆ ಚರ್ಚಿಸಲಾಗುವುದು. ತಜ್ಞರ ಅಂತಿಮ ವರದಿ ಕೈ ಸೇರಿದರೆ ನಿಜಾಂಶ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದಾರೆ.

    ಮನೆ ಆವರಣದಲ್ಲಿ ಶೋಧ
    ಎಫ್‌ಎಸ್‌ಎಲ್ ತಂಡ ಮಂಗಳವಾರ ಮನೆ ಆವರಣದಲ್ಲಿದ್ದ ಗಿಡಗಂಟೆ ತೆರವು ಗೊಳಿಸಿ ಸುಳಿವುಗಳಿಗಾಗಿ ತಡಕಾಡಿತು. ಎಫ್‌ಎಸ್‌ಎಲ್ ತಜ್ಞರು ಈಗಾಗಲೇ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದು ಅವುಗಳಲ್ಲಿರುವ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿಡಿಆರ್ ಸಂಗ್ರಹ ಅಸಾಧ್ಯ. ಪೋನ್‌ಗಳಲ್ಲಿರುವ ಮಾಹಿತಿ ಪರಿಶೀಲಿಸಬೇಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.

    2 ದಿನಗಳಲ್ಲಿ ಶವಪರೀಕ್ಷೆ ವರದಿ
    ಪೋಸ್ಟ್ ಮಾರ್ಟಮ್ ವರದಿಯನ್ನು ಒಂದೆರೆಡು ದಿನಗಳಲ್ಲಿ ಪೊಲೀಸರಿಗೆ ಸಲ್ಲಿಸಲಾಗುವುದು. ಈ ವೇಳೆ ಎಫ್‌ಎಸ್‌ಎಲ್ ವರದಿ ಬರದಿದ್ದರೆ ಬಂದಿಲ್ಲ ಎಂದು ನಮೂದಿಸಲಾಗುವುದು.ಎಫ್‌ಎಸ್‌ಎಲ್ ವರದಿ ಬಂದರೆ ಅಂತಿಮ ವರದಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಕೇಸ್​: ಜನಕ್ಕೆ ಗೊತ್ತಿದ್ದು ಬಾಬುರೆಡ್ಡಿ ಮಾತ್ರ, ಕುಟುಂಬದ ನಡೆ ಬೇಸರ ತರಿಸಿತ್ತು

    ನಾರಾಯಣಗೌಡ ಬಂಧನ ಪ್ರಕರಣ: ಜ.6ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts