ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು

Nitya Bhavisya Vijayavani
Published on

ಮೇಷ: ಸಾಲ ಮರುಪಾವತಿ ಮಾಡುವಿರಿ. ತಾಳ್ಮೆ ಅಗತ್ಯ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ. ಶುಭಸಂಖ್ಯೆ: 9

ವೃಷಭ: ಸ್ಥಳ ಬದಲಾವಣೆ. ದುರಭ್ಯಾಸಕ್ಕೆ ಖರ್ಚು. ಶರೀರದಲ್ಲಿ ಆಯಾಸ ಕಾಣಿಸುವುದು, ವೈದ್ಯರ ಸಲಹೆ ಪಡೆಯಿರಿ. ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ:1

ಮಿಥುನ:  ಯಂತ್ರೋಪಕರಣಗಳಿಂದ ಲಾಭ ಬರುವುದು. ವಿಪರೀತ ಹಣ ವ್ಯಯ ಮಾಡಬೇಡಿ. ಮನಕ್ಲೇಷ. ವಿದೇಶ ಪ್ರಯಾಣ. ವೈಮನಸ್ಸು. ಶುಭಸಂಖ್ಯೆ: 6

ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗುವುದು. ಆದಾಯಕ್ಕಿಂತ ಖರ್ಚು ಜಾಸ್ತಿ. ಸಜ್ಜನ ವಿರೋಧ. ಪರಸ್ತ್ರೀಯಿಂದ ತೊಂದರೆ. ಶುಭಸಂಖ್ಯೆ: 3

ಸಿಂಹ: ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ. ನೆಮ್ಮದಿ ಜೀವನ. ವಿಪರೀತ ಖರ್ಚು ಆಗುವುದಾದರೂ ಬಾಕಿ ವಸೂಲಿಯಾಗಿ ಸಂತಸ. ಶುಭಸಂಖ್ಯೆ:7

ಕನ್ಯಾ: ಗುರಿ ಸಾಧನೆಗೆ ಶ್ರಮ ಪಡುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಲಿದೆ. ಪಾಪಬುದ್ಧಿ ಒಳ್ಳೆಯದಲ್ಲ. ದುಃಖದಾಯಕ ಪ್ರಸಂಗಗಳು. ಶುಭಸಂಖ್ಯೆ:2

ತುಲಾ: ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಋಣಭಾದೆ ಕಾಡಲಿದೆ. ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಸಂಗಹಿಸುವಿರಿ. ಶುಭಸಂಖ್ಯೆ: 7

ವೃಶ್ಚಿಕ: ಮಾನಸಿಕ ವೇದನೆ. ಧನವ್ಯಯ. ಹಿತಶತ್ರುಗಳಿಂದ ತೊಂದರೆ. ಅನಾರೋಗ್ಯ ಕಾಡೀತು. ಪರಸ್ತ್ರೀಯಿಂದ ನಿಂದನೆ, ಹುಷಾರು. ಶುಭಸಂಖ್ಯೆ:7

ಧನುಸ್ಸು: ಕೆಲಸ ಕಾರ್ಯಗಳಲ್ಲಿ ಜಯವಾಗುವುದು. ಆರೋಗ್ಯದಲ್ಲಿ ಚೇತರಿಕೆ. ಸಮಾಜದಲ್ಲಿ ಗೌರವ. ಬಂಧು- ಬಾಂಧವರಿಂದ ಸಹಕಾರ. ಶುಭಸಂಖ್ಯೆ:4

ಮಕರ: ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ವಿವಾಹಕ್ಕೆ ಶುಭ ಸೂಚನೆ. ಶತ್ರು ಬಾಧೆ. ಸಲ್ಲದ ಅಪವಾದಕ್ಕೆ ತೆರೆ. ಕಾರ್ಯ ಬದಲಾವಣೆ. ಶುಭಸಂಖ್ಯೆ:2

ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ. ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ. ಮಾತಾಪಿತರಲ್ಲಿ ಪ್ರೀತಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:1

ಮೀನ: ಸಗಟು ವ್ಯಾಪಾರದಲ್ಲಿ ಲಾಭ. ದೂರ ದೂರಿನಿಂದ ಬಂಧುಗಳ ಆಗಮನ. ಉದರ ಸಂಬಂಧಿ ರೋಗಿಗಳು ಎಚ್ಚರದಿಂದಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net