More

    ಸಿದ್ದರಾಮಯ್ಯ ಅವರೇ ಸರಿಯಾಗಿ ವಿಡಿಯೋ ನೋಡಿ: ಸಿಎಂ ಸಿದ್ದು ಆರೋಪಕ್ಕೆ ಅಸ್ಸಾಂ ಸಿಎಂ ತಿರುಗೇಟು

    ದೀಸ್ಪುರ್​: ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆಯನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಅಸ್ಸಾಂ ಸಿಎಂ ಹಿಮಂತ್​ ಬಿಸ್ವಾ ಶರ್ಮ ಅವರು ಖಡಕ್​ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಅವರೇ 50 ಸಾವಿರವಲ್ಲ 500 ಕಿ.ಮೀ ಪ್ರಯಾಣದುದ್ದಕ್ಕೂ ಒಂದೇ ಒಂದು ಸ್ಥಳದಲ್ಲಿ 2 ಸಾವಿರ ಮಂದಿಯು ಕೂಡ ರಾಹುಲ್​ರನ್ನು ನೋಡಲು ಬರಲಿಲ್ಲ. ನೀವು ಪೋಸ್ಟ್​ ಮಾಡಿರುವ ವಿಡಿಯೋವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ ಮತ್ತು ಅಲ್ಲಿರುವ ಜನಸಂಖ್ಯೆಯನ್ನು ಎಣಿಸಿ. ಅಸ್ಸಾಂ ಮಂದಿ ರಾಮನ ಜತೆಗಿರುತ್ತಾರೆ ಹೊರತು ರಾವಣನ ಜತೆಗಲ್ಲ ಎಂದು ಎಕ್ಸ್​ ಖಾತೆಯ ಮೂಲಕ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಏನು ಹೇಳಿದ್ದರು?
    ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಭಾರತ್​ ಜೋಡೋ ನ್ಯಾಯ ಯಾತ್ರೆಯನ್ನು ಪೊಲೀಸರು ತಡೆಯುತ್ತಿರುವ ವಿಡಿಯೋಗಳನ್ನು ಪೋಸ್ಟ್​ ಮಾಡಿ, ಯಾತ್ರೆಯನ್ನು ಹತ್ತಿಕ್ಕಲು ಸಿಎಂ ಹಿಮಂತ್​ ಬಿಸ್ವಾ ಶರ್ಮ ತೀವ್ರ ಕ್ರಮ ತೆಗೆದುಕೊಂಡಿರುವುದನ್ನು ನೋಡಿದರೆ, ಅವರಲ್ಲಿ ಯಾತ್ರೆಯ ಮೇಲೆ ಎಷ್ಟು ಭಯವಿದೆ ಎಂಬುದು ಬಹಿರಂಗವಾಗುತ್ತದೆ. ಯಾತ್ರಿಕರ ಮೇಲಿನ ದಾಳಿ, ಎಫ್​ಐಆರ್​ ದಾಖಲು ಮತ್ತು ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸುವುದನ್ನು ನೋಡಿದರೆ, ಬಿಸ್ವಾರ ಹತಾಶೆ ಹೆಚ್ಚಾಗಿರುವುದು ಕಾಣಿಸುತ್ತದೆ.

    ರಾಹುಲ್​ ಗಾಂಧಿ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಯಾತ್ರಿಗಳನ್ನು ಗುವಾಹಟಿ ಗಡಿಯಲ್ಲೇ ತಡೆದು ನಿಲ್ಲಿಸಲಾಗಿದೆ. ರಾಹುಲ್​ ಅವರನ್ನು ಬಂಧಿಸಲು ರಾಜ್ಯದ ಸಂಪನ್ಮೂಲಗಳನ್ನು ಬಳಸುವ ಹಿಮಂತ್​ ಬಿಸ್ವಾ ಅವರ ಯೋಜನೆಯು ರಾಹುಲ್ ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ನ್ಯಾಯಕ್ಕಾಗಿ ನಮ್ಮ ಯಾತ್ರೆಯು ಮುಂದುವರಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಂತ್​ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts