ಈ ರಾಶಿಯವರಿಗಿಂದು ಸ್ತ್ರೀಯರು ಶತ್ರುಗಳಾಗುವರು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ಸಂಪಾದನೆ. ಸಂಗಾತಿಯೊಡನೆ ಉತ್ತಮ ಬಾಂಧವ್ಯ. ಆರ್ಥಿಕ ಸಹಾಯ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 5

ವೃಷಭ: ನೂತನ ಆಸ್ತಿ ಖರೀದಿಗೆ ನಿರ್ಧಾರ. ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಆಟೋ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 9

ಮಿಥುನ: ದುಶ್ಚಟಗಳಿಗೆ ಬಲಿ. ಸ್ನೇಹಿತರೊಂದಿಗೆ ವೈಮನಸ್ಯ. ಸ್ತ್ರೀ ಉದ್ಯೋಗಿಗಳು ಅಧಿಕಾರ ಚಲಾಯಿಸುವರು. ಅಣ್ಣನಿಂದ ಸಹಾಯ. ಶುಭಸಂಖ್ಯೆ: 1

ಕಟಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಮಾನಸಿಕ ನೆಮ್ಮದಿ. ಬಹುದಿನಗಳ ಕನಸು ನನಸು ಬಹು ನಿರೀಕ್ಷಿತ ಮಗಳ ಮದುವೆ ನಿಶ್ಚಯ. ಶುಭಸಂಖ್ಯೆ: 8

ಸಿಂಹ: ಲೇವಾದೇವಿ ವ್ಯವಹಾರದಲ್ಲಿ ನಷ್ಟವಾಗಲಿದೆ. ಸ್ತ್ರೀಯರು ಶತ್ರುಗಳಾಗುವರು. ಸ್ವಪ್ರಯತ್ನದಿಂದ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 4

ಕನ್ಯಾ: ಹೈನುಗಾರಿಕೆಯಲ್ಲಿ ಲಾಭದ ಪ್ರಮಾಣ ಕುಂಠಿತ. ವಿದೇಶದಿಂದ ಹೆಣ್ಣುಮಕ್ಕಳ ಆಗಮನ. ದೃಢನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 2

ತುಲಾ: ಹಣ್ಣು ಮತ್ತು ತರಕಾರಿ ವ್ಯಾಪಾರದಲ್ಲಿ ಅಧಿಕ ಲಾಭ. ರಫ್ತು ವ್ಯಾಪಾರದಲ್ಲಿ ಧನಾಗಮನ, ಅನುಕೂಲ. ಸಹೋದರರಿಂದ ನೋವು. ಶುಭಸಂಖ್ಯೆ: 6

ವೃಶ್ಚಿಕ: ಹೊಸದಾಗಿ ಪದವಿ ಪಡೆದವರಿಗೆ ಉದ್ಯೋಗ. ಸಾಲಗಾರರ ಕಾಟದಿಂದ ರಕ್ತದೊತ್ತಡ ಅಧಿಕ. ಬಂಧು ಬಾಂಧವರಿಂದ ನಷ್ಟ. ಶುಭಸಂಖ್ಯೆ: 1

ಧನುಸ್ಸು: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಅಪರಿಚಿತರಿಂದ ಮೋಸ. ಸಾಲದ ಚಿಂತೆ. ಕೋರ್ಟ್ ಮೆಟ್ಟಿಲೇರುವ ಸಂಭವ. ಶುಭಸಂಖ್ಯೆ: 6

ಮಕರ: ಅಮೂಲ್ಯ ವಸ್ತುವಿನ ಕಳ್ಳತನ. ಆಸ್ತಿಯಿಂದ ಧನಾಗಮನ. ಗುಪ್ತ ಇಚ್ಚೆಗಳಿಂದ ತೊಂದರೆ. ಸ್ತ್ರೀಯರಿಂದ ಮೋಸವಾದೀತು. ಶುಭಸಂಖ್ಯೆ: 9

ಕುಂಭ: ಸೇವಕರೇ ಶತ್ರು ಆಗುವರು. ಮೋಜು ಮಸ್ತಿಯಿಂದ ತೊಂದರೆ. ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ. ಶುಭಸಂಖ್ಯೆ: 5

ಮೀನ: ನವ ವಿವಾಹಿತರಿಗೆ ಸಂತಾನದ ಚಿಂತೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ. ದೂರ ಪ್ರಯಾಣದ ಸನ್ನಿವೇಶ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net