ಈ ರಾಶಿಯವರಿಗಿಂದು ವಾಹನ ಖರೀದಿ ಸಾಧ್ಯತೆ, ಭೋಗ ವಸ್ತುಗಳ ಪ್ರಾಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಋಣ ಬಾಧೆ. ವ್ಯರ್ಥ ಧನಹಾನಿ. ಮಾನಸಿಕ ಚಿಂತೆ. ಶುಭಸಂಖ್ಯೆ: 5

ವೃಷಭ: ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ನವರಿಗೆ ಅಧಿಕ ಪ್ರಮಾಣದಲ್ಲಿ ಲಾಭ. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7

ಮಿಥುನ: ವಾಹನ ಖರೀದಿ ಸಾಧ್ಯತೆ, ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿ ರೋಗ. ಸಾಲ ಮಾಡಬೇಕಾಗಬಹುದು. ಶುಭಸಂಖ್ಯೆ: 4

ಕಟಕ: ಆತ್ಮೀಯರಲ್ಲಿ ಕಲಹ. ಮಾತಿನ ಚಕಮಕಿ, ಶರೀರದಲ್ಲಿ ಆಯಾಸ. ಉದರ ಬಾಧೆ ಕಾಡಲಿದೆ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 6

ಸಿಂಹ: ದೃಷ್ಟಿ ದೋಷದಿಂದ ತೊಂದರೆ. ಸರ್ಪ ಭಯವಿದೆ. ದೂರ ಪ್ರಯಾಣ. ಬಾಕಿ ವಸೂಲಿ. ಕೀಲುಗಳಲ್ಲಿ ನೋವು ಉಂಟಾಗಬಹುದು. ಶುಭಸಂಖ್ಯೆ: 8

ಕನ್ಯಾ: ಮನಸ್ಸಿನಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 8

ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಬೇಕು. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 1

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾದೀತು. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕುಲದೇವರ ದರ್ಶನ ಮಾಡಿ. ಶುಭಸಂಖ್ಯೆ: 6

ಧನಸ್ಸು: ಮಿತ್ರರು ಸಿಗುವರು. ತೀರ್ಥ ಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಯ ಭೇಟಿಯಾಗುವುದು. ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ: 2

ಮಕರ: ಶುಭಸುದ್ದಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಕೋಪ ಜಾಸ್ತಿ. ಶುಭಸಂಖ್ಯೆ: 9

ಕುಂಭ: ಸ್ತ್ರೀಯರಿಗೆ ಲಾಭ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ತೊಂದರೆ. ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿ ಫಲವಿಲ್ಲ. ಶುಭಸಂಖ್ಯೆ: 7

ಮೀನ: ಸಂಕಷ್ಟ ಹೆಚ್ಚಾದೀತು. ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಅನ್ಯರಲ್ಲಿ ಮನಸ್ತಾಪ. ಅನಗತ್ಯ ಹಸ್ತಕ್ಷೇಪ ಮಾಡುವಿರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net