ಈ ರಾಶಿಯ ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯಮಿಗಳಿಗೆ ಆರ್ಥಿಕ ಪರಿಸ್ಥಿತಿ ಸದ್ಯ ನಿರಾಳ. ದೂರದ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಶುಭಸಂಖ್ಯೆ: 9

ವೃಷಭ: ಐಟಿ ಉದ್ಯೋಗಸ್ಥರಿಗೆ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ವೃತ್ತಿಪರಿಣತರಿಗೆ ಅವಕಾಶ. ಲೇವಾದೇವಿಯಲ್ಲಿ ನಷ್ಟ. ಶುಭಸಂಖ್ಯೆ: 9

ಮಿಥುನ: ವಿವಾಹ ಪ್ರಕ್ರಿಯೆ ತ್ವರಿತಗೊಳಿಸುವಿರಿ. ಕಲಾವಿದರಿಗೆ ಸಮಾಧಾನ ನೀಡುವ ಬೆಳವಣಿಗೆ. ವ್ಯವಹಾರ ಸಂಬಂಧ ಗಣ್ಯರ ಭೇಟಿ. ಶುಭಸಂಖ್ಯೆ: 5

ಕಟಕ: ಖಾಸಗಿ ಉದ್ಯೋಗಿಗಳಿಗೆ ವರ್ಗಾವಣೆ. ಚಾರಿತ್ರ್ಯವಂತ ರಿಗೆ ಕಳಂಕದ ಭೀತಿ. ಮಹಿಳೆಯರ ಸ್ವಉದ್ಯೋಗ ಯೋಜನೆ ಉತ್ಪನ್ನಗಳಿಂದ ಲಾಭ. ಶುಭಸಂಖ್ಯೆ: 4

ಸಿಂಹ: ಉದ್ಯೋಗಸ್ಥರಿಗೆ ತಂಡದ ನೇತೃತ್ವದ ಜವಾಬ್ದಾರಿ. ಸಮವಸ್ತ್ರ ಒದಗಿಸುವ ವ್ಯಾಪಾರದಲ್ಲಿ ಲಾಭ. ಮನೆಯಲ್ಲಿ ದೇವತಾ ಕಾರ್ಯ. ಶುಭಸಂಖ್ಯೆ: 1

ಕನ್ಯಾ: ಕಾರ್ಯಕ್ಷೇತ್ರಕ್ಕೆ ಒಗ್ಗಿಕೊಂಡ ಸಮಾಧಾನ. ಕಾರ್ಯನಿಷ್ಠೆಗೆ ಮಾಲೀಕರಿಂದ ಶ್ಲಾಘನೆ. ಅವಿವಾಹಿತರಿಗೆ ಸಂಗಾತಿ ದೊರೆತು ಸಂತಸ. ಶುಭಸಂಖ್ಯೆ: 1

ತುಲಾ: ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಲೇವಾದೇವಿಯಿಂದ ದೂರವಿರಿ. ಶುಭಸಂಖ್ಯೆ: 4

ವೃಶ್ಚಿಕ: ಕಲಾವಿದರ ಸ್ಥಾನ ಗೌರವಕ್ಕೆ ಹಾನಿ. ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ ಕಾಡಲಿದೆ. ರಾಜಕಾರಣಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ. ಶುಭಸಂಖ್ಯೆ: 6

ಧನಸ್ಸು: ಕಚೇರಿಯ ವೈವಿಧಿ್ಯಕರಣ ಕಾರ್ಯ ಅಂತಿಮ ಹಂತಕ್ಕೆ. ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು. ವ್ಯವಹಾರ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 7

ಮಕರ: ಬಂಧುವರ್ಗದಲ್ಲಿ ಶುಭ ಸಮಾರಂಭ. ಉದ್ಯಮಿಗಳು ನಷ್ಟದಿಂದ ಬಚಾವಾಗುವಿರಿ. ಗೃಹೋಪಯೋಗಿ ಸಾಧನಗಳ ಖರೀದಿ. ಶುಭಸಂಖ್ಯೆ: 3

ಕುಂಭ: ಸರ್ಕಾರಿ ನೌಕರರಿಗೆ ಕಿರಿಕಿರಿ. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಲಾಭ. ಸಂಗೀತ, ಸಾಹಿತ್ಯ ನೃತ್ಯ ಕಲಾಭ್ಯಾಸಿಗಳಿಗೆ ಸಂತಸ. ಶುಭಸಂಖ್ಯೆ: 9

ಮೀನ: ಕಚೇರಿಯಲ್ಲಿ ಮೇಲಿನವರಿಂದ ಶ್ಲಾಘನೆ. ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಯಶಸ್ವಿ. ಉದ್ಯಮದಲ್ಲಿ ಚೇತರಿಕೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net