ಈ ರಾಶಿಯ ವ್ಯಾಪಾರಸ್ಥರಿಗಿಂದು ಉತ್ತಮ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಹಾರದಲ್ಲಿ ಕಾಳಜಿ ವಹಿಸಿ. ಮಂಡಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸ್ವಂತ ಉದ್ದಿಮೆದಾರರಿಗೆ ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ. ಶುಭಸಂಖ್ಯೆ: 5

ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ. ಬಂಧುಗಳೊಂದಿಗೆ ವೈಮನಸ್ಸು. ಶುಭ ಫಲಿತಾಂಶ ನೋಡಬಹುದು. ನಿವೇಶನ ಖರೀದಿಗೆ ಅಡ್ಡಿ. ಶುಭಸಂಖ್ಯೆ: 9

ಮಿಥುನ: ಕುಟುಂಬದಲ್ಲಿ ಸಂತೋಷ. ಸರ್ಕಾರಿ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಕ್ಷೇಮ. ಇಂದು ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ: 1

ಕಟಕ: ಬೆಲೆಬಾಳುವ ವಸ್ತು ಕಳೆದುಕೊಳ್ಳುವಿರಿ. ಪ್ರಯಾಣ ದಲ್ಲಿ ಹುಷಾರು. ಜಲಸಂಬಂಧಿ ವಿಚಾರದಲ್ಲಿ ಎಚ್ಚರ. ಕೃಷಿಯಲ್ಲಿ ತೊಂದರೆ. ಶುಭಸಂಖ್ಯೆ: 7

ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ. ಪದವಿ ಪ್ರಾಪ್ತಿಯಲ್ಲಿ ಕಾಟ. ಶುಭಸಂಖ್ಯೆ: 7

ಕನ್ಯಾ: ಸೇವಿಸುವ ಆಹಾರದಲ್ಲಿ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಅಶುಭ ಫಲ. ಹಣಕಾಸಿನ ವಿಷಯದಲ್ಲಿ ತೊಂದರೆಯಾಗಬಹುದು. ಶುಭಸಂಖ್ಯೆ: 3

ತುಲಾ: ಕಬ್ಬಿಣದ ವ್ಯಾಪಾರದಲ್ಲಿ ಹಾನಿಯಾಗುವುದು. ಮಗಳ ಮದುವೆಯ ಕುರಿತು ಅನವಶ್ಯಕ ಚಿಂತೆ. ಕೌಟುಂಬಿಕ ಕಲಹ ಸಾಧ್ಯತೆ. ಶುಭಸಂಖ್ಯೆ: 8

ವೃಶ್ಚಿಕ: ಕಾಲಿನ ಸಮಸ್ಯೆ. ಕಾಡಲಿದೆ ಶಿಕ್ಷಕ ವೃತ್ತಿಯಲ್ಲಿ ಏರುಪೇರು. ವಾಣಿಜ್ಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ಎಚ್ಚರ. ಶುಭಸಂಖ್ಯೆ: 6

ಧನುಸ್ಸು: ಭೂ ವ್ಯವಹಾರದಲ್ಲಿ ವಿವಾದ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ. ಪತಿ ಪತ್ನಿಯರಲ್ಲಿ ವಿರಸ. ಗೃಹ ನಿರ್ವಣದಲ್ಲಿ ಸ್ನೇಹಿತರ ಸಹಕಾರ. ಶುಭಸಂಖ್ಯೆ: 3

ಮಕರ: ದೂರದೂರಿನಿಂದ ನೆಂಟರ ಆಗಮನ. ವೃತ್ತಿಯಲ್ಲಿ ಅಧಿಕ ಶ್ರಮ. ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರಿಗೆ ವಿಘ್ನ. ಶುಭಸಂಖ್ಯೆ: 4

ಕುಂಭ: ಪ್ರವೇಶ ಪರೀಕ್ಷೆಯಲ್ಲಿ ವಿಫಲ. ಪಿತ್ರಾರ್ಜಿತ ಆಸ್ತಿ ವಿವಾದದಿಂದ ಕುಟುಂಬದಲ್ಲಿ ಏರುಪೇರು ಆದೀತು. ಕೆಲಸಗಳಲ್ಲಿ ಅನುಕೂಲ. ಶುಭಸಂಖ್ಯೆ: 9

ಮೀನ: ಪ್ರವಾಸ ಮಾಡಬೇಕಾಗಬಹುದು. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಸಾಕು ಪ್ರಾಣಿಗಳಿಂದ ಕಿರಿಕಿರಿ. ಕೌಟುಂಬಿಕವಾಗಿ ಚಿಂತನೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net