ಈ ರಾಶಿಯವರಿಗಿಂದು ವೈರಾಗ್ಯ ಮನೋಭಾವ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ಮಹಿಳಾ ಪೊಲೀಸ್ ಸಿಬ್ಬಂದಿಗೆ ಒತ್ತಡ. ನಿರ್ಧಾರಗಳಿಗೆ ಬದ್ಧರಾಗಿರಿ. ಶುಭಸಂಖ್ಯೆ: 3

ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯವಾಗುವುದು. ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ: 5

ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಮಹಿಳೆಯರಿಗೆ ಶುಭ. ನಿಂತ ಕಾರ್ಯಗಳು ಮುಂದುವರಿಯುವವು. ಶುಭಸಂಖ್ಯೆ: 7

ಕಟಕ: ಸರ್ಕಾರಿ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು. ಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 5

ಸಿಂಹ: ಕೃಷಿಕರಿಗೆ ಧನಲಾಭ. ಗ್ರಂಥ ರಚನೆಯಲ್ಲಿ ಆಸಕ್ತಿ ತಾಳುವಿರಿ. ಭೂಮಿ ಖರೀದಿಸುವ ಯೋಗ. ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ಕನ್ಯಾ: ಜೇನು ಕೃಷಿಯಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ. ಅಧಿಕ ಪ್ರಯಾಣ ಬೇಡ. ಕೆಲಸದ ಒತ್ತಡದಿಂದ ಆಯಾಸ. ಶುಭಸಂಖ್ಯೆ: 9

ತುಲಾ: ಹಿರಿಯರಿಗೆ ಅಪಘಾತ ಸಂಭವ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶಿಕ್ಷಕರಿಗೆ ಶುಭ. ಕುಲದೇವರ ಸ್ಮರಣೆಯಿಂದ ಸಮಾಧಾನ. ಶುಭಸಂಖ್ಯೆ: 9

ವೃಶ್ಚಿಕ: ದಿನಸಿ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅನಾಸಕ್ತಿ. ವೈರಾಗ್ಯ ಮನೋಭಾವ ಕಾಡುವುದು. ಶುಭಸಂಖ್ಯೆ: 4

ಧನುಸ್ಸು:ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಬಂಧುಗಳೊಂದಿಗೆ ಜಗಳ. ಮನಸ್ಸಿನಲ್ಲಿ ಅಶಾಂತಿ. ಸಮಾಜದಲ್ಲಿ ಅಪಕೀರ್ತಿ. ಶುಭಸಂಖ್ಯೆ: 7

ಮಕರ: ದಾಂಪತ್ಯದಲ್ಲಿ ವಿರಸ. ಸಹೋದರರೊಂದಿಗೆ ವಾಗ್ವಾದ. ಭೂಮಿ ವ್ಯಾಜ್ಯದಲ್ಲಿ ಸೋಲು. ವ್ಯಾಪಾರದಲ್ಲಿ ನಷ್ಟವಾಗುವುದು. ಶುಭಸಂಖ್ಯೆ: 2

ಕುಂಭ: ಅಧಿಕಾರಿ ವರ್ಗದಿಂದ ತೊಂದರೆ ಅನುಭವಿಸುವಿರಿ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಕೌಟುಂಬಿಕ ಖರ್ಚು ಹೆಚ್ಚುವುದು. ಶುಭಸಂಖ್ಯೆ: 6

ಮೀನ: ಶತ್ರುನಾಶ. ಹೃದಯ ಸಂಬಂಧಿ ತೊಂದರೆ. ಒತ್ತಡದ ಬದುಕಿನಿಂದ ಹೊರಬನ್ನಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net