

ಮೇಷ: ತಾಯಿಯೊಂದಿಗೆ ಕಲಹ. ಪುಸ್ತಕ ಪ್ರಕಾಶಕರಿಗೆ ಶುಭ ಸಮಯ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ಶುಭಸಂಖ್ಯೆ: 9
ವೃಷಭ: ದಾಂಪತ್ಯದಲ್ಲಿ ಅಪನಂಬಿಕೆ ಹೆಚ್ಚಾಗಲಿದೆ. ಸ್ವಂತ ವ್ಯವಹಾರದಲ್ಲಿ ಲಾಭವಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಬಡ್ತಿ. ಶುಭಸಂಖ್ಯೆ: 9
ಮಿಥುನ: ಮಕ್ಕಳ ಆಟಿಕೆ ತಯಾರಿಕರಿಗೆ ನಷ್ಟವಾಗುವ ಸಾಧ್ಯತೆ. ಕ್ರೀಡಾ ವಸ್ತುಗಳ ಮಾರಾಟಸ್ಥರಿಗೆ ಆದಾಯ. ಸಾಂಸಾರಿಕ ಕಲಹ ತಪ್ಪಿಸಿ. ಶುಭಸಂಖ್ಯೆ: 5
ಕಟಕ: ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಆದಾಯ. ಕೃಷಿ ವಿದ್ಯಾರ್ಥಿಗಳಿಗೆ ಪ್ರಗತಿ. ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 1
ಸಿಂಹ: ಪುಸ್ತಕ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ಹೊಸ ಜವಾಬ್ದಾರಿಯಿಂದ ನೆಮ್ಮದಿ ಭಂಗವಾದೀತು. ಲಾಯರ್ಗಳಿಗೆ ಶುಭದಿನ. ಶುಭಸಂಖ್ಯೆ: 1
ಕನ್ಯಾ: ಆಭರಣ ವ್ಯಾಪಾರದಲ್ಲಿ ನಷ್ಟವಾಗಬಹುದು. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಮುಂಬಡ್ತಿ. ಕೃಷಿಕರಿಗೆ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 7
ತುಲಾ: ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ. ಕೃಷಿ ಸಂಬಂಧಿತ ವ್ಯವಹಾರದಲ್ಲಿ ಹಿನ್ನಡೆಯಾದೀತು. ಹಣ ಹೂಡಿಕೆಯಲ್ಲಿ ವಿಶೇಷ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ಟ್ರಾವೆಲ್ಸ್ ಏಜೆನ್ಸಿಯವರಿಗೆ ಅನಿರೀಕ್ಷಿತ ಲಾಭ. ಅಧಿಕಾರಿಗಳ ಸಲಹೆ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ವೈದ್ಯರಿಗೆ ಅಧಿಕ ಒತ್ತಡ. ಶುಭಸಂಖ್ಯೆ: 2
ಧನಸ್ಸು: ಇಂಜಿನಿಯರ್ಗಳಿಗೆ ನಿರೀಕ್ಷಿತ ಲಾಭವಿಲ್ಲ. ಹೊಸ ವೃತ್ತಿಯಲ್ಲಿ ಸಹನೆಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಧನ ನಷ್ಟ. ಶುಭಸಂಖ್ಯೆ: 9
ಮಕರ: ಗೃಹ ನಿರ್ಮಾಣದ ಆಸೆ ಈಡೇರಲಿದೆ. ಬಟ್ಟೆ ವ್ಯಾಪಾರಿಗಳಿಗೆ ಲಾಭ. ಬಹುಕಾಲದಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 7
ಕುಂಭ: ಹೋಟೆಲ್ ಉದ್ಯಮದಲ್ಲಿ ನಿರೀಕ್ಷಿತ ಲಾಭ. ಸಾಮಾಜಿಕ ಕಾರ್ಯಗಳತ್ತ ಆಸಕ್ತಿ ತಾಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 1
ಮೀನ: ರೇಷ್ಮೆ ವ್ಯಾಪಾರಿಗಳಿಗೆ ನಷ್ಟ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಯಕ್ಷಗಾನ ಹಾಗೂ ನಾಟಕ ಕಲಾವಿದರಿಗೆ ಶುಭ ಫಲ. ಶುಭಸಂಖ್ಯೆ: 3