ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ಫ್ರಾಂಚೈಸಿ ತೆರೆ ಎಳೆದಿದ್ದು, ಸ್ಫೋಟಕ ಆಟಗಾರ ರಜತ್ ಪಾಟಿದಾರ್ಗೆ ಕ್ಯಾಪ್ಟನ್ಸಿ ಪಟ್ಟವನ್ನು ನೀಡಿದೆ. ಇನ್ಣೂ ಈ ಮೊದಲು ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್ಸಿಬಿ (RCB) ನಾಯಕನಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತಾದರಾದರೂ ಫ್ರಾಂಚೈಸಿ ಅಂತಿಮವಾಗಿ ರಜತ್ಗೆ ಕ್ಯಾಪ್ಟನ್ಸಿಯನ್ನು ನೀಡುವ ಮೂಲಕ ಆರ್ಸಿಬಿ ತಂಡವನ್ನು ಮುನ್ನಡೆಸುವವರು ಯಾರು ಎಂಬುದನ್ನು ಸ್ಪಷ್ಟಪಡಿಸಿದೆ.
ಇನ್ನೂ ರಜತ್ ಪಾಟಿದಾರ್ರನ್ನು ನಾಯಕನನ್ನಾಗಿ ನೇಮಿಸಿರುವ ಕುರಿತು ಮಾತನಾಡಿರುವ ಆರ್ಸಿಬಿ (RCB) ತಂಡದ ನಿರ್ದೇಶಕ ಮೋ ಬೊಬಾಟ್ ವಿರಾಟ್ ನಾಯಕತ್ವದ ಪಟ್ಟಕ್ಕೆ ಒಂದು ಆಪ್ಷನ್ ಆಗಿದ್ದರು ಎಂದು ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಬೊಬಾಟ್, ನಾಯಕತ್ವದ ವಿಚಾರಕ್ಕೆ ಬರುವುದಾದರೆ ವಿರಾಟ್ ನಮಗೆ ಆಪ್ಷನ್ ಆಗಿದ್ದರು ಅಷ್ಟೇ. ಮೊದಲಿಗೆ ಬಹತೇಕ ಜನರು ವಿರಾಟ್ಗೆ ನಾಯಕತ್ವ ಪಟ್ಟ ವಹಿಸಲಾಗುವುದು ಎಂದು ಭಾವಿಸಿ ಆತನ ಕಡೆಗೆ ವಾಲಿದ್ದರು. ಆದರೆ, ವಿರಾಟ್ಗೆ ಯಾವುದೇ ನಾಯಕತ್ವದ ಪಟ್ಟ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.
“We’re lucky to have somebody high potential like Rajat as captain, but also someone of the calibre of Virat. Because Virat himself leads in every way, with his runs, professionalism and energy, and that is great for Rajat to lean on.”
Mo Bobat and Andy Flower weigh in on… pic.twitter.com/kwUI3NydSq
— Royal Challengers Bengaluru (@RCBTweets) February 13, 2025
ನಾವೆಲ್ಲರೂ ನೋಡಿದಂತೆ, ನಾಯಕತ್ವವು ಅವರ ಅತ್ಯಂತ ಪ್ರಬಲ ಪ್ರವೃತ್ತಿಗಳಲ್ಲಿ ಒಂದಾಗಿದೆ. ಅದು ಅವರಿಗೆ ಸ್ವಾಭಾವಿಕವಾಗಿ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಏನೇ ಆಗಿರಲಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ. ರಜತ್ ಬಗ್ಗೆಯೂ ಅಭಿಮಾನಿಗಳಲ್ಲಿ ಕ್ರೇಜ್ ಇರುವುದನ್ನು ನಾವು ನೋಡಿದ್ದೇವೆ.
ನಾನು ಹಾಗೂ ಕೋಚ್ ಆ್ಯಂಡಿ ಫ್ಲವರ್ ನಾಯಕನ ಆಯ್ಕೆ ವಿಚಾರವಾಗಿ ತುಂಬಾ ಯೋಚಿಸಿದೆವು. ವಿರಾಟ್ ಜೊತೆ ಈ ಬಗ್ಗೆ ಚರ್ಚಿಸಿದಾಗ ಅವರು ರಜತ್ ಹೆಸರು ಹೇಳುತ್ತಿದ್ದಂತೆ ತುಂಬಾ ಖುಷಿಪಟ್ಟರು. ಈ ಸ್ಥಾನಕ್ಕೆ ರಜತ್ ಎಷ್ಟು ಅರ್ಹರು ಎಂಬುದು ನಮಗೆ ತುಂಬಾ ಚೆನ್ನಾಗಿ ತಿಳಿದಿದೆ. ವಿರಾಟ್ ತಂಡದಲ್ಲಿರುವುದರಿಂದ ರಜತ್ ಸುರಕ್ಷಿತ ಕೈಗಳಲ್ಲಿ ಇದ್ದಾರೆ ಎಂದು ಆರ್ಸಿಬಿ (RCB) ತಂಡದ ನಿರ್ದೇಶಕ ಮೋ ಬೊಬಾಟ್ ಹೇಳಿದ್ದಾರೆ.
ಡಾಲಿ Dhananjay ಮದುವೆಗೆ ವಿಭಿನ್ನವಾಗಿ ಶುಭಕೋರಿದ ಅಂಚೆ ಇಲಾಖೆ; ನಿಮ್ಮ ಪ್ರೀತಿಗೆ ಶರಣು ಎಂದ ಮಧುಮಗ
ಶಿಕ್ಷಕಿ ಎದುರೇ ಕೇಕ್ ಕತ್ತರಿಸಿ ತರಗತಿಯಲ್ಲೇ Beer ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ತನಿಖೆಗೆ ಆದೇಶ, ವಿಡಿಯೋ ವೈರಲ್