ಈ ರಾಶಿಯವರಿಗಿಂದು ಉದರ ಶೂಲೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ರಕ್ಷಣಾ ಇಲಾಖೆಯವರಿಗೆ ಒತ್ತಡದ ಸ್ಥಿತಿ. ಸೇವಾ ಕ್ಷೇತ್ರದವರಿಗೆ ಉನ್ನತ ಸ್ಥಾನಮಾನ. ಹಣಕಾಸಿನ ಸಂಸ್ಥೆಯವರಿಗೆ ಲಾಭ. ಶುಭಸಂಖ್ಯೆ: 5

ವೃಷಭ: ರೇಷ್ಮೆ ನೇಕಾರರಿಗೆ ಉತ್ತಮ ಬೇಡಿಕೆ ಬರಲಿದೆ. ರಾಜಕೀಯ ಪ್ರವೇಶಿಸಲು ಇದು ಸಕಾಲ. ವಾಹನ ಅಪಘಾತ ಸಾಧ್ಯತೆ ಇದೆ ಎಚ್ಚರ. ಶುಭಸಂಖ್ಯೆ: 9

ಮಿಥುನ: ಆಮದು ಮತ್ತು ರಫ್ತು ವ್ಯಾಪಾರದಲ್ಲಿ ಲಾಭ. ಪಾರಂಪರಿಕ ವೃತ್ತಿಯ ಕಡೆ ಗಮನ ಹರಿಸುವಿರಿ. ವಿವಾಹಕ್ಕೆ ಯೋಗ ಕೂಡಿ ಬರಲಿದೆ. ಶುಭಸಂಖ್ಯೆ: 5

ಕಟಕ: ವಿವಾಹ ಪ್ರಯತ್ನದಲ್ಲಿ ತೊಂದರೆ. ಲೋಹದ ವಸ್ತುಗಳ ಕುರಿತು ಎಚ್ಚರ ಅಗತ್ಯ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 7

ಸಿಂಹ: ಮಹಿಳೆಯರಿಗೆ ಶೀತಬಾಧೆ. ಕಮಿಷನ್ ವ್ಯವಹಾರದಿಂದ ಹೆಚ್ಚು ಆದಾಯ. ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆಯಾದೀತು. ಶುಭಸಂಖ್ಯೆ: 3

ಕನ್ಯಾ: ಷೇರಿನ ವ್ಯವಹಾರದಲ್ಲಿ ಲಾಭ. ತಾಂತ್ರಿಕ ಪರಿಣಿತರಿಗೆ ಉನ್ನತಿ. ತಂದೆ ತಾಯಿಯ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಬೇಕು. ಶುಭಸಂಖ್ಯೆ: 6

ತುಲಾ: ಶಿಕ್ಷಕ ವೃತ್ತಿಯವರಿಗೆ, ಲೇಖಕರಿಗೆ ಸನ್ಮಾನ, ಗೌರವ. ಶಾರೀರಿಕ ಪೀಡೆ. ಮೀನು ಮಾರಾಟ ಮಾಡುವವರಿಗೆ ಉತ್ತಮ ಲಾಭ. ಶುಭಸಂಖ್ಯೆ: 9

ವೃಶ್ಚಿಕ: ಕೌನ್ಸ್ಸೆಲಿಂಗ್ ವೃತ್ತಿಯಲ್ಲಿ ನಿರೀಕ್ಷಿತ ಆದಾಯ ಬರುವುದು. ಸಹನೆ ಇದ್ದಷ್ಟು ಜಯ ನಿಮ್ಮ ಕಡೆಗೆ. ಲೇವಾದೇವಿಯಲ್ಲಿ ಮಿಶ್ರ ಫಲ. ಶುಭಸಂಖ್ಯೆ: 3

ಧನುಸ್ಸು: ಪೂಜಾ ಸಾಮಗ್ರಿ ವ್ಯಾಪಾರದಲ್ಲಿ ಉತ್ತಮ ಆದಾಯ. ಶಾಂತಿಯ ಅಗತ್ಯವಿದೆ. ಕಚೇರಿಯಲ್ಲಿ ಪರರಿಂದ ಕಿರಿಕಿರಿ ಆಗಬಹುದು. ಶುಭಸಂಖ್ಯೆ: 9

ಮಕರ: ಮನೋ ವೈದ್ಯರಿಗೆ ಕೀರ್ತಿ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಕಾರ್ಯದ ಒತ್ತಡ. ದೋಷ ಪರಿಹಾರಕ್ಕೆ ದತ್ತಾತ್ರೇಯನನ್ನು ಆರಾಧಿಸಿ. ಶುಭಸಂಖ್ಯೆ: 4

ಕುಂಭ: ಕೃಷಿಕರಿಗೆ ಖರೀದಿಯಲ್ಲಿ ಮೋಸವಾದೀತು. ಮಗಳಿಗೆ ವಿವಾಹಯೋಗ. ಉದರ ಶೂಲೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 4

ಮೀನ: ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಪ್ರಾಪ್ತಿ. ಅಧಿಕಾರಿಗಳಿಂದ ಕಿರುಕುಳ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net