ಈ ರಾಶಿಯವರಿಗಿಂದು ವ್ಯವಹಾರದಲ್ಲಿ ಕಾರ್ಯಸಿದ್ಧಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಂತ್ರಿಕ-ಟ್ರಾವೆಲ್ಸ್ ವೃತ್ತಿಪರರಿಗೆ ಲಾಭ. ಚಿಕ್ಕಪ್ಪನಿಂದ ಸಮಸ್ಯೆಯಾದೀತು. ನರ ದೌರ್ಬಲ್ಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5

ವೃಷಭ: ಧನ ಲಾಭ. ನವದಂಪತಿಗಳಿಗೆ ಶುಭ ಸುದ್ದಿ. ಕೆಟ್ಟ ದೃಷ್ಟಿಯಿಂದ ಅನಾಹುತ. ಐಟಿ ವೃತ್ತಿ ಕ್ಷೇತ್ರ ಬದಲಾಯಿಸುವ ಆಲೋಚನೆ. ಶುಭಸಂಖ್ಯೆ: 3

ಮಿಥುನ: ಉದ್ಯಮ, ವ್ಯಾಪಾರದಲ್ಲಿ ನಷ್ಟ. ಮಗಳ ಭವಿಷ್ಯದ ಬಗ್ಗೆ ಆತಂಕ. ರೇಷ್ಮೆ ಬೆಳೆಗಾರರಿಗೆ ನಷ್ಟ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 1

ಕಟಕ: ಹೈನುಗಾರಿಕೆ, ಕೋಳಿ ಸಾಕಣೆಯಲ್ಲಿ ಲಾಭ. ಚುಚ್ಚು ಮಾತುಗಳಿಂದ ಕುಟುಂಬ ಕಲಹ. ಹೊಸ ವ್ಯವಹಾರ ಆರಂಭಕ್ಕೆ ಯೋಚನೆ. ಶುಭಸಂಖ್ಯೆ: 7

ಸಿಂಹ: ರಿಯಲ್ ಎಸ್ಟೇಟ್​ನವರಿಗೆ ಲಾಭ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅನುಕೂಲ. ಉಷ್ಣಬಾಧೆ. ಪಾಲುದಾರಿಕೆಯಿಂದ ದೂರವಾದೀರಿ. ಶುಭಸಂಖ್ಯೆ: 8

ಕನ್ಯಾ: ಮೋಜು-ಮಸ್ತಿಗಾಗಿ ಹಣ ಪೋಲು. ಅಕ್ರಮ ಸಂಪಾದನೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಗೃಹಾರಂಭಕ್ಕೆ ಚಾಲನೆ. ಅನಾರೋಗ್ಯ. ಶುಭಸಂಖ್ಯೆ: 3

ತುಲಾ: ಅಪರಿಚಿತರಿಂದ ಮೋಸ. ಧನ ನಷ್ಟ ಸಾಧ್ಯತೆ. ಮಕ್ಕಳಿಂದ ನೋವು ಉಂಟಾಗಬಹುದು. ವಿಜ್ಞಾನಿಗಳು, ವೈದ್ಯರಿಗೆ ವಿಶೇಷ ದಿನ. ಶುಭಸಂಖ್ಯೆ: 4

ವೃಶ್ಚಿಕ: ನಿರೀಕ್ಷಿತ ಲಾಭ. ಪಿತ್ರಾರ್ಜಿತ ಆಸ್ತಿ ವಿವಾದ. ಶತ್ರುಗಳಿಂದ ಭೀತಿ. ಸೈಟ್ ಖರೀದಿಸಲು ನಿರ್ಧಾರ. ಮಹಿಳೆಯರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ. ಪಕ್ಕದವರಿಂದ ಕಿರಿಕಿರಿ. ಗೌರವಕ್ಕೆ ಧಕ್ಕೆ. ಸಂಗಾತಿ ಯೊಂದಿಗೆೆ ವಿಹಾರ ಹೋಗುವಿರಿ. ಶುಭಸಂಖ್ಯೆ: 7

ಮಕರ: ನೆರೆಹೊರೆಯವರಿಂದ ಸಹಾಯ. ಬ್ಯಾಂಕ್ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಸ್ವಂತ ಉದ್ಯಮದಲ್ಲಿ ಮಹತ್ವದ ಬದಲಾವಣೆ. ಶುಭಸಂಖ್ಯೆ: 1

ಕುಂಭ: ವಿದ್ಯಾಭ್ಯಾಸಕ್ಕೋಸ್ಕರ ವಿದೇಶ ಪ್ರಯಾಣ. ಮಾತಿನಿಂದ ಶತ್ರುತ್ವ. ಗೌರವ, ಸನ್ಮಾನಗಳಿಗೆ ವಿಘ್ನ. ವಾಹನ ಚಾಲಕರಿಗೆ ತೊಂದರೆ. ಶುಭಸಂಖ್ಯೆ: 9

ಮೀನ: ಹೊಸದಾದ ಉದ್ಯಮದಲ್ಲಿ ನಷ್ಟ. ಆದಾಯಕ್ಕಿಂತ ಖರ್ಚು ಹೆಚ್ಚು. ಸ್ವಗ್ರಾಮದಿಂದ ಅತಿಥಿಗಳ ಆಗಮನ. ನಿದ್ರೆಯಲ್ಲಿ ಕೆಟ್ಟ ಕನಸು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net