More

    ಆಸೀಸ್‌ಗೆ ಮಣಿದ ಭಾರತದ ಮಹಿಳೆಯರು: ಜೆಮೀಮಾ-ಪೂಜಾ ಹೋರಾಟ ವ್ಯರ್ಥ

    ಮುಂಬೈ: ಜೆಮೀಮಾ ರೋಡ್ರಿಗಸ್ (82 ರನ್, 77 ಎಸೆತ, 7 ಬೌಂಡರಿ) ಮತ್ತು ಪೂಜಾ ವಸ್ತಾಕರ್ (62*ರನ್, 46 ಎಸೆತ, 7 ಬೌಂಡರಿ, 2 ಸಿಕ್ಸರ್) ಹೋರಾಟಯುತ ಅರ್ಧಶತಕದಾಟದ ನಡುವೆಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 6 ವಿಕೆಟ್‌ಗಳಿಂದ ಶರಣಾಗಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ 3 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ, ಜೆಮೀಮಾ-ಪೂಜಾ 8ನೇ ವಿಕೆಟ್‌ಗೆ 68 ರನ್ ಸೇರಿಸಿದ ಬಲದಿಂದ 8 ವಿಕೆಟ್‌ಗೆ 282 ರನ್ ಪೇರಿಸಿತು. ಪ್ರತಿಯಾಗಿ ೆಬ್ ಲಿಚ್‌ಫೀಲ್ಡ್ (78) ಮತ್ತು ಎಲ್ಲಿಸ್ ಪೆರ‌್ರಿ (75) 2ನೇ ವಿಕೆಟ್‌ಗೆ 148 ರನ್ ಜತೆಯಾಟವಾಡಿದ ನೆರವಿನಿಂದ ಆಸ್ಟ್ರೇಲಿಯಾ ತಂಡ 46.3 ಓವರ್‌ಗಳಲ್ಲಿ 4 ವಿಕೆಟ್‌ಗೆ 285 ರನ್ ಗಳಿಸಿ ಜಯದ ಕೇಕೆ ಹಾಕಿತು.

    ಭಾರತ: 8 ವಿಕೆಟ್‌ಗೆ 282 (ಯಸ್ತಿಕಾ 49, ಶೆಾಲಿ 1, ರಿಚಾ 21, ಹರ್ಮಾನ್‌ಪ್ರೀತ್ 9, ಜೆಮೀಮಾ 82, ದೀಪ್ತಿ 21, ಅಮನ್‌ಜೋತ್ 20, ಪೂಜಾ 62*, ಗಾರ್ಡ್‌ನರ್ 63ಕ್ಕೆ 2, ವಾರೆಹಾಂ 55ಕ್ಕೆ 2). ಆಸ್ಟ್ರೇಲಿಯಾ: 46.3 ಓವರ್‌ಗಳಲ್ಲಿ 4 ವಿಕೆಟ್‌ಗೆ 285 (ಅಲಿಸ್ಸಾ 0, ಲಿಚ್‌ಫೀಲ್ಡ್ 78, ಎಲ್ಲಿಸ್ ಪೆರ‌್ರಿ 75, ಬೆತ್ ಮೂನಿ 42, ತಹ್ಲಿಯಾ 68*, ರೇಣುಕಾ 30ಕ್ಕೆ 1, ಪೂಜಾ 41ಕ್ಕೆ 1, ಸ್ನೇಹಾ 54ಕ್ಕೆ 1, ದೀಪ್ತಿ 55ಕ್ಕೆ 1).

    ಎರಡನೇ ಏಕದಿನ ಪಂದ್ಯ
    ಯಾವಾಗ: ಡಿಸೆಂಬರ್ 30
    ಎಲ್ಲಿ: ವಾಂಖೆಡೆ, ಮುಂಬೈ
    ಆರಂಭ: ಮಧ್ಯಾಹ್ನ 1.30

    ಸೈಕಾ ಇಶಾಕ್ ಪದಾರ್ಪಣೆ
    ಬಂಗಾಳದ ಎಡಗೈ ಸ್ಪಿನ್ನರ್ ಸೈಕಾ ಇಶಾಕ್ ಚೊಚ್ಚಲ ಏಕದಿನ ಪಂದ್ಯ ಆಡಿದರು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕನ್ನಡತಿ ಶ್ರೇಯಾಂಕಾ ಪಾಟೀಲ್ ಏಕದಿನ ತಂಡದಲ್ಲಿ ಪದಾರ್ಪಣೆ ಅವಕಾಶ ಲಭಿಸಲಿಲ್ಲ.

    ಸ್ಮತಿ ಮಂದನಾ ಗೈರು
    ಎಡಗೈ ಆರಂಭಿಕ ಬ್ಯಾಟುಗಾರ್ತಿ ಹಾಗೂ ಉಪನಾಯಕಿ ಸ್ಮತಿ ಮಂದನಾ ಅನಾರೋಗ್ಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದರು. ಅವರ ಗೈರಿನಲ್ಲಿ ಯಸ್ತಿಕಾ ಭಾಟಿಯಾ ಇನಿಂಗ್ಸ್ ಆರಂಭಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts