

ಮೇಷ: ಕುಟುಂಬದಲ್ಲಿ ಶುಭಕಾರ್ಯದಿಂದ ಸಂತಸ. ಪೋಷಕರ ಆರೋಗ್ಯಕಾಳಜಿ ವಹಿಸಿ. ಮಕ್ಕಳಿಗೆ ಹೊಸದನ್ನು ಕಲಿಯುವ ಅವಕಾಶ. ಶುಭಸಂಖ್ಯೆ:1
ವೃಷಭ: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಶಿಕ್ಷಣ ಕ್ಷೇತ್ರದವರಿಗೆ ಬಡ್ತಿ. ಆರೋಗ್ಯದಲ್ಲಿ ಎಚ್ಚರಿಕೆ. ಚಿನ್ನ ವ್ಯಾಪಾರಿಗಳಿಗೆ ಮೋಸ. ಶುಭಸಂಖ್ಯೆ:5
ಮಿಥುನ: ಭೂಮಿ ಖರೀದಿಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮಾತಿನಿಂದ ಕುಟುಂಬದಲ್ಲಿ ತೊಂದರೆ. ಶುಭಸಂಖ್ಯೆ:2
ಕಟಕ: ವಾದ ವಿವಾದ ಉಂಟಾದೀತು. ವಿವಾಹದಲ್ಲಿ ಅಶುಭ. ಬಂಧುಗಳೊಡನೆ ಭಿನ್ನಾಭಿಪ್ರಾಯ. ಸಾಹಿತಿ, ವಿಮರ್ಶಕರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಸಿಂಹ: ಕ್ರೀಡಾಪಟುಗಳಿಗೆ ಪ್ರಖ್ಯಾತಿ ಮತ್ತು ಧನ ಲಾಭ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಅನಿರೀಕ್ಷಿತವಾಗಿ ಬಂಧುಗಳ ಆಗಮನ. ಶುಭಸಂಖ್ಯೆ: 7
ಕನ್ಯಾ: ಬಂಧು ಮಿತ್ರರ ಸಹಕಾರ. ಹೂಡಿಕೆಯಲ್ಲಿ ಲಾಭ. ವ್ಯಸನಗಳಿಂದ ಹಣ ಕಳೆದುಕೊಳ್ಳುವಿರಿ. ಜಲ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 4
ತುಲಾ: ಖಾಸಗಿ ಕೆಲಸದಲ್ಲಿ ಬಡ್ತಿ. ಆಕಸ್ಮಿಕ ಧನಲಾಭ. ಸಂಗಾತಿ ವರ್ಗದವರಿಂದ ಸಹಾಯ. ಸಗಟು ವ್ಯಾಪಾರಿಗಳಿಗೆ ಲಾಭ ಬರುವುದು. ಶುಭಸಂಖ್ಯೆ: 3
ವೃಶ್ಚಿಕ: ವೈದ್ಯರ ಸಲಹೆ ಪಡೆಯಿರಿ. ಪೆಟ್ಟಾಗುವ ಸಾಧ್ಯತೆ ಯಿದೆ. ಯಂತ್ರೋಪಕರಣದಿಂದ ಕಷ್ಟ. ನಿರ್ಧಾರ ಕೈಗೊಳ್ಳುವಾಗ ದೃಢತೆ ಇರಲಿ. ಶುಭಸಂಖ್ಯೆ: 5
ಧನುಸ್ಸು: ಭೂ ವ್ಯವಹಾರದಲ್ಲಿ ತೊಂದರೆಯಾಗಬಹುದು. ಕಟ್ಟಡ ನಿರ್ಮಾಣ ವೃತ್ತಿಯವರಿಗೆ ತೊಂದರೆ. ವಿದ್ಯಾರ್ಥಿಗಳ ಶ್ರಮಕ್ಕೆ ಪ್ರತಿಫಲ. ಶುಭಸಂಖ್ಯೆ: 7
ಮಕರ: ವಕೀಲಿ ವೃತ್ತಿಯಲ್ಲಿ ಅಡೆತಡೆ. ಖರೀದಿಯಲ್ಲಿ ಮೋಸವಾದೀತು. ಹಣಕಾಸಿನ ತೊಂದರೆ. ಮಗಳ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 7
ಕುಂಭ: ಸಾರ್ವಜನಿಕ ಮನ್ನಣೆ. ಪ್ರಯಾಣದಿಂದ ಆರೋಗ್ಯ ಸಮಸ್ಯೆ. ಮನೆಯ ಹಿರಿಯರೊಂದಿಗೆ ಜಗಳ. ಸ್ನೇಹಿತರು ಶತ್ರುವಾದಾರು. ಶುಭಸಂಖ್ಯೆ:3
ಮೀನ: ವ್ಯಾಪಾರದ ಹೂಡಿಕೆಯಲ್ಲಿ ಹಾನಿ. ವಕೀಲರಿಗೆ ಜಯ. ಗಾಯಕರಿಗೆ ಆಕಸ್ಮಿಕ ಧನಪ್ರಾಪ್ತಿ. ಕೆಲಸಗಾರರಿಂದ ಒತ್ತಡ ಸಾಧ್ಯತೆ. ಶುಭಸಂಖ್ಯೆ: 9