ನಿತ್ಯಭವಿಷ್ಯ: ಈ ರಾಶಿಯವರಿಗಿಂದು ತಾಯಿಯಿಂದ ಹಣದ ಸಹಾಯ

Nitya Bhavisya Vijayavani
Published on

ಮೇಷ: ಕಾರ್ಯಗಳಲ್ಲಿ ವಿಘ್ನ. ಅಪರಿಚಿತದಿಂದ ಮೋಸ. ಅತಿಯಾದ ಆತ್ಮವಿಶ್ವಾಸದಿಂದ ನಷ್ಟ. ನ್ಯಾಯಾ ಲಯದ ವಿವಾದಗಳಲ್ಲಿ ಜಯ. ಶುಭಸಂಖ್ಯೆ: 9

ವೃಷಭ: ಆದಾಯ ಕಡಿಮೆ ಅಧಿಕ ಖರ್ಚು. ಮಗಳ ವಿವಾಹದ ಚಿಂತೆ. ಸಾಲದಿಂದಾಗಿ ಶತ್ರು ಬಾಧೆ. ಹಣ್ಣು ಮಾರುವವರಿಗೆ ಅಧಿಕ ಲಾಭ. ಶುಭಸಂಖ್ಯೆ:1

ಮಿಥುನ: ಮರಳು ಸಿಮೆಂಟ್​ನಿಂದ ದ್ರವ್ಯಲಾಭ. ಪ್ರಿಯ ಜನರ ಭೇಟಿ. ಸರ್ಕಾರಿ ಕಾರ್ಯಗಳಲ್ಲಿ ಜಯ. ತಾಯಿಯಿಂದ ಹಣದ ಸಹಾಯ. ಶುಭಸಂಖ್ಯೆ:4

ಕಟಕ: ಕಟ್ಟಡಗಳ ಮಾರಾಟದಲ್ಲಿ ಅಧಿಕ ಲಾಭ. ಮಿತ್ರರಲ್ಲಿ ದ್ವೇಷ. ಅಕಾಲ ಭೋಜನ. ಸ್ನೇಹಿತನ ಸಹಾಯದಿಂದ ಋಣವಿಮೋಚನೆ. ಶುಭಸಂಖ್ಯೆ: 8

ಸಿಂಹ: ಸರ್ಕಾರಿ ಕಾರ್ಯಗಳಲ್ಲಿ ಮುನ್ನಡೆ. ಅಧಿಕಾರ- ಪ್ರಾಪ್ತಿಯಲ್ಲಿ ತಡೆ. ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿ. ತೀರ್ಥಯಾತೆ್ರ ಮಾಡುವಿರಿ. ಶುಭಸಂಖ್ಯೆ: 3

ಕನ್ಯಾ: ಸ್ಥಿರಾಸ್ತಿ ಸಂಪಾದನೆ. ದುಷ್ಟ ಜನರಿಂದ ದೂರವಿರಿ. ಸಾಲ ಕೊಟ್ಟು ಮಾತು ಕೇಳುವ ಪರಿಸ್ಥಿತಿ. ಆಮದು, ರಫ್ತು ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:4

ತುಲಾ: ವಿವಾಹ ಯೋಗ ಕೂಡಿ ಬರಲಿದೆ. ನೂತನ ವ್ಯಾಪಾರಗಳಲ್ಲಿ ಲಾಭ. ಮನಃಶಾಂತಿಗೆ ಮಗನಿಂದ ತೊಂದರೆ. ದಂಡ ಕಟ್ಟುವಿರಿ. ಶುಭಸಂಖ್ಯೆ:4

ವೃಶ್ಚಿಕ: ಮಿತ್ರರಲ್ಲಿ ಕಲಹ. ಸಂಗಾತಿಯೊಂದಿಗೆ ಚಕಮಕಿ. ಬಂಧುಗಳೇ ಶತ್ರುಗಳಾದಾರು. ಹೋಟೆಲ್ ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 6

ಧನುಸ್ಸು: ಹಣದ ಅಡಚಣೆ ಪರಿಹಾರವಾಗಲಿದೆ. ದಾಂಪತ್ಯದಲ್ಲಿ ವಿರಸ. ಮನೆ ಬದಲಾವಣೆಗೆ ನಿರ್ಧಾರ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9

ಮಕರ: ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ಕಾರ್ಯಸಿದ್ಧಿ. ಆರೋಗ್ಯದ ಸಮಸ್ಯೆ ಉಲ್ಬಣ. ಆರ್ಥಿಕ ಪರಿಸ್ಥಿತಿ ಚೇತರಿಕೆ, ಶುಭಸಂಖ್ಯೆ:1

ಕುಂಭ: ಗುರುಹಿರಿಯರ ಭೇಟಿ. ಕಲಾವಿದರಿಗೆ, ಕಾರ್ಯಸಾಧನೆ. ವ್ಯಸನದಿಂದ ನಷ್ಟ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 7

ಮೀನ: ದುರ್ಬಲರಿಗೆ ಸಹಾಯ ಮಾಡುವಿರಿ. ಧನ ನಷ್ಟ. ನಂಬಿಕೆ ದ್ರೋಹ. ತಾಳ್ಮೆ ಅಗತ್ಯ. ಗೃಹ ನಿರ್ಮಾಣ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net