

ಮೇಷ: ಹಿತಶತ್ರುಗಳ ತೊಂದರೆಯಿಂದ ಸ್ವಂತ ಕೆಲಸ ವಿಳಂಬ. ಕಾಲುಗಂಟುಗಳ ಶಸ್ತ್ರ ಚಿಕಿತ್ಸೆಗೆ ವೈದ್ಯರ ಸಲಹೆ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 2
ವೃಷಭ: ನೂತನ ಕಾರು ಖರೀದಿಗೆ ನಿರ್ಧಾರ. ಆಯುರ್ವೆದ ಔಷಧಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಆಸ್ತಿ ವಿಚಾರದಲ್ಲಿ ರ್ತಾಕ ಅಂತ್ಯ. ಶುಭಸಂಖ್ಯೆ: 9
ಮಿಥುನ: ಖರೀದಿಯಲ್ಲಿ ಮೋಸ ಸಾಧ್ಯತೆ. ಹೋಟೆಲ್ ಮಾಲೀಕರಿಗೆ ಕೆಲಸಗಾರರ ಅಭಾವ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1
ಕಟಕ: ಬ್ಯಾಂಕಿನ ವ್ಯವಹಾರದಲ್ಲಿ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಕೆ. ಕೇಂದ್ರ ಸರ್ಕಾರದ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 8
ಸಿಂಹ: ದೃಷ್ಟಿ ದೋಷದಿಂದ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಸ್ನೇಹಿತರೊಂದಿಗೆ ಪ್ರಯಾಣ. ರೇಷ್ಮೆ, ಜೇನು ಬೆಳೆಗಾರರಿಗೆ ಲಾಭ. ಕೀಲು ನೋವು. ಶುಭಸಂಖ್ಯೆ: 9
ಕನ್ಯಾ: ಮಗನ ವಿವಾಹ ವಿಷಯದಲ್ಲಿ ಸಮಸ್ಯೆ. ಚಾಲಕರು ದಂಡ ಕಟ್ಟುವ ಸಾಧ್ಯತೆ. ಆರಕ್ಷಕ ವೃತ್ತಿಯವರಿಗೆ ವರ್ಗಾವಣೆಯಾದೀತು. ಶುಭಸಂಖ್ಯೆ: 7
ತುಲಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವಿರಿ. ವಿಚ್ಛೇದನದ ಪ್ರಕರಣದಲ್ಲಿ ಜಯ. ದಿನದ ಅಂತ್ಯದಲ್ಲಿ ಸಂತೋಷ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಟೆನ್ನಿಸ್ ಮತ್ತು ಕ್ರಿಕೆಟ್ ಆಟಗಾರರಿಗೆ ವಿಶೇಷ ಸೌಲಭ್ಯ. ಕಲಾವಿದರಿಗೆ ಹೆಚ್ಚಿನ ಧನಲಾಭ. ಶುಭಸಂಖ್ಯೆ: 1
ಧನಸ್ಸು: ಸ್ನೇಹಿತೆಯ ಭೇಟಿ. ನಂಬಿದವರಿಂದ ಮೋಸ. ಪ್ರಭಾವಿ ರಾಜಕಾರಣಿಗಳ ಭೇಟಿಯಿಂದ ಅನುಕೂಲ. ಬೆಳ್ಳಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಮಕರ: ಷೇರು ವ್ಯವಹಾರದಲ್ಲಿ ಹಣ ಕಳೆದುಕೊಳ್ಳುವಿರಿ. ಹೈನೋತ್ಪನ್ನ ವ್ಯಾಪಾರದಲ್ಲಿ ಲಾಭ. ಆಸ್ತಿ ನೋಂದಣಿಗೆ ಅಡೆತಡೆ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 1
ಕುಂಭ: ಮಕ್ಕಳ ವಿಷಯದಲ್ಲಿ ತಾಳ್ಮೆ ಬೇಕು. ಮಾತಿನಲ್ಲಿ ನಿಯಂತ್ರಣವಿರಲಿ. ಉದ್ಯೋಗ ಬದಲಾವಣೆಗೆ ಮನಸ್ಸು. ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ: 6
ಮೀನ: ಹಣದ ಸಂಕಷ್ಟಗಳು ಹೆಚ್ಚಾಗುವವು. ಔಷದ ವ್ಯಾಪಾರ ದಲ್ಲಿ ನಷ್ಟ. ಸ್ನೇಹಿತರ ಅನಗತ್ಯ ಹಸ್ತಕ್ಷೇಪದಿಂದ ಕುಟುಂಬ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 5