

ಮೇಷ: ನಿಮ್ಮಕಾರ್ಯಕ್ಷೇತ್ರದಲ್ಲಿ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವುದು. ಕ್ರಯ ವಿಕ್ರಯಗಳಿಂದ ನಿರೀಕ್ಷಿತ ಲಾಭ ಬರಲಿದೆ. ಶುಭಸಂಖ್ಯೆ: 5
ವೃಷಭ: ಕಾರ್ಯಗಳಲ್ಲಿ ಅಡ್ಡಿ ಆತಂಕ. ಗೆಳೆಯರ ಸಹಾಯ. ತಾಳ್ಮೆ ಅಗತ್ಯ. ಅತಿಯಾದ ಉದರನೋವು. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3
ಮಿಥುನ: ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಆಪ್ತರೊಂದಿಗೆ ಮದುವೆಯ ಮಾತುಕತೆ. ದೃಷ್ಟಿ ದೋಷದಿಂದ ತೊಂದರೆ. ಶುಭಸಂಖ್ಯೆ: 5
ಕಟಕ: ವಸ್ತ್ರ ವ್ಯಾಪಾರಿಗಳಿಗೆ ಲಾಭವಾಗುವುದು. ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ. ಕೋರ್ಟ್ ವ್ಯವಹಾರಗಳಲ್ಲಿ ಅಪಜಯವಾದೀತು. ಶುಭಸಂಖ್ಯೆ: 8
ಸಿಂಹ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ. ಪರಸ್ಥಳವಾಸ ಮಾಡಬೇಕಾಗುವುದು. ವ್ಯಾಪಾರಕ್ಕೆ ಹಿರಿಯರ ಸಹಾಯ. ಶುಭಸಂಖ್ಯೆ: 9
ಕನ್ಯಾ: ಯಂತ್ರೋಪಕರಣದಿಂದ ಲಾಭ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 2
ತುಲಾ: ಬೇಜವಾಬ್ದಾರಿಯಿಂದ ಸಂಕಷ್ಟ. ಅತಿ ಒಳ್ಳೆಯತನ ದಿಂದ ತೊಂದರೆಗೆ ಸಿಲುಕಿ ಹಾಕಿಕೊಳ್ಳುವಿರಿ. ಹೊಸ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ: 7
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ. ದೇವತಾ ಕಾರ್ಯ ನಡೆಸುವಿರಿ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಸ್ತ್ರೀಯರಿಗೆ ಧನ ಲಾಭ. ಶುಭಸಂಖ್ಯೆ: 3
ಧನಸ್ಸು: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ವಿನಾಕಾರಣ ಉದ್ಯೋಗ ಸ್ಥಳದಲ್ಲಿ ನಿಷ್ಠುರ. ನಿರೀಕ್ಷಿತ ಆದಾಯ. ಶುಭಸಂಖ್ಯೆ: 1
ಮಕರ: ಸಲ್ಲದ ಅಪವಾದ. ಆರ್ಥಿಕ ಪರಿಸ್ಥಿತಿ ಏರುಪೇರು. ಎಲ್ಲ ಕೆಲಸ ಕಾರ್ಯಗಳಲ್ಲಿ ವಿಘ್ನ. ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ: 4
ಕುಂಭ: ಭೂ ಸಂಬಂಧೀ ವ್ಯವಹಾರದಲ್ಲಿ ಲಾಭ, ಪೀಠೋಪ ಕರಣ ವ್ಯಾಪಾರದಲ್ಲಿ ಸಾಮಾನ್ಯ ವರಮಾನ. ಅಲೆದಾಟ. ಮಿತ್ರರಲ್ಲಿ ಕಿರಿಕಿರಿ. ಶುಭಸಂಖ್ಯೆ: 5
ಮೀನ: ಮಹಿಳೆಯರಿಗೆ ಆತ್ಮವಿಶ್ವಾಸ ವೃದ್ಧಿ. ನಿಮ್ಮ ಸಹವರ್ತಿಗಳು ಬೆಂಬಲಕ್ಕೆ ಬರುವರು. ಭತ್ತ ಕೃಷಿಯಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 4