ಈ ರಾಶಿಯವರಿಗಿಂದು ಆಕಸ್ಮಿಕ ಧನ ನಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ತ್ರೀ ಸಂಬಂಧದ ವ್ಯವಹಾರಗಳಲ್ಲಿ ಎಚ್ಚರ. ಮಹಿಳೆಯರಿಗೆ ಆರೋಗ್ಯದಲ್ಲಿ ತೊಂದರೆ ಕಾಡಬಹುದು. ಬಂಧು ಮಿತ್ರರ ಸಮಾಗಮ. ಶುಭಸಂಖ್ಯೆ: 5

ವೃಷಭ: ಯತ್ನ ಕಾರ್ಯಗಳಲ್ಲಿ ವಿಘ್ನ. ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಏರುಪೇರು. ಶುಭಸಂಖ್ಯೆ: 7

ಮಿಥುನ: ಭೂಮಿಯಿಂದ ಲಾಭ ಬರುವುದು. ರಾಜಕಾರಣಿಗಳಿಗೆ ಅಧಿಕಾರ-ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಯೋಗ. ವಸ್ತ್ರ ಖರೀದಿ ಮಾಡುವಿರಿ. ಶುಭಸಂಖ್ಯೆ: 2

ಕಟಕ: ಸಲ್ಲದ ನಿಂದನೆ. ವಾಹನ ಅಪಘಾತ ಸಾಧ್ಯತೆ, ಎಚ್ಚರವಿರಲಿ. ಬಂಧುಗಳಲ್ಲಿ ಕಲಹ. ಮಹಿಳಾ ಉದ್ಯಮಿಗಳಿಗೆ ಆಕಸ್ಮಿಕ ಧನ ನಷ್ಟ. ಶುಭಸಂಖ್ಯೆ: 3

ಸಿಂಹ: ಯತ್ನ ಕಾರ್ಯಭಂಗ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮನಕ್ಲೇಷ. ನಂಬಿದ ಜನರಿಂದ ಅಶಾಂತಿ. ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 9

ಕನ್ಯಾ: ದೂರ ಪ್ರಯಾಣ. ಇಷ್ಟಾರ್ಥ ಸಿದ್ಧಿ. ತೀರ್ಥಕ್ಷೇತ್ರ ದರ್ಶನ. ಪತ್ರಿಕೋದ್ಯಮದಲ್ಲಿ ಇರುವವರಿಗೆ ಲಾಭ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ತುಲಾ: ಕುಟುಂಬದಲ್ಲಿ ಕಲಹ. ಮೋಜು ಮಸ್ತಿಗೆ ಅಧಿಕ ಖರ್ಚು ಮಾಡುವಿರಿ. ನೆಮ್ಮದಿ ಇಲ್ಲದ ಜೀವನ. ಅಪಕೀರ್ತಿ. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 4

ವೃಶ್ಚಿಕ: ರರಿಗೆ ವಂಚಿಸುವುದು ಒಳ್ಳೆಯದಲ್ಲ. ಸಾಲ ತೀರಿಸುವ ಸಾಧ್ಯತೆ. ಹೃದಯ ಸಂಬಂಧಿ ವೇದನೆ. ಕೋಪ ಜಾಸ್ತಿ, ಪಾಪಬುದ್ಧಿ ಒಳ್ಳೆಯದಲ್ಲ. ಶುಭಸಂಖ್ಯೆ: 8

ಧನುಸ್ಸು: ಆಧ್ಯಾತ್ಮಿಕ ಕ್ಷೇತ್ರದವರಿಗೆ ಮನಃಶಾಂತಿ. ಭಯಭೀತಿ ನಿವಾರಣೆ. ಗುರು ಹಿರಿಯರಲ್ಲಿ ಭಕ್ತಿ. ಮೋಸದಿಂದ ಸಂಪಾದನೆಗೆ ಯೋಚನೆ. ಶುಭಸಂಖ್ಯೆ:

5

ಮಕರ: ನಿಗದಿಯಾದ ವಿದೇಶ ಪ್ರಯಾಣ ರದ್ದು. ಉದ್ಯೋಗದಲ್ಲಿ ಬಡ್ತಿ. ಉನ್ನತ ಸ್ಥಾನ. ಭಾಗ್ಯವೃದ್ಧಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 6

ಕುಂಭ: ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ನಷ್ಟ. ಆಲಸ್ಯ ಮನೋಭಾವ. ಪುಷ್ಕಳ ಭೋಜನ. ಅನ್ಯ ಜನರಲ್ಲಿ ವೈಮನಸ್ಸು ಉಂಟಾದೀತು. ಶುಭಸಂಖ್ಯೆ: 2

ಮೀನ: ವಿವಾಹಯತ್ನ ವಿಫಲ. ಉದ್ಯೋಗಸ್ಥ ಮಹಿಳೆಯರಿಗೆ ನಾನಾ ತೊಂದರೆ. ನಂಬಿದವರಿಂದ ಮೋಸ. ಮಾನಸಿಕ ಅಶಾಂತಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net