ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ನಷ್ಟ ಕಡಿಮೆಯಾಗಲಿದೆ. ಮಾಡಿದ ಸಾಲವನ್ನು ತೀರಿಸುವ ಚಿಂತೆ. ರಾಜಕೀಯ ರಂಗದವರಿಗೆ ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 5

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸ್ವಂತ ವ್ಯಾಪಾರದಲ್ಲಿ ಹಿನ್ನಡೆ. ಮಕ್ಕಳಿಗಾಗಿ ಅಧಿಕ ಖರ್ಚು. ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 9

ಮಿಥುನ: ವಾಣಿಜ್ಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯ. ದೈಹಿಕ ಅಸಮತೋಲನದಿಂದ ಸಮಸ್ಯೆ. ಶುಭಸಂಖ್ಯೆ: 6

ಕಟಕ: ಅಧಿಕ ಒತ್ತಡದಿಂದ ಮಾನಸಿಕ ಅಸಮತೋಲನ. ಅಲಂಕಾರಿಕ ವಸ್ತುಗಳಿಂದ ಸಮಸ್ಯೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 2

ಸಿಂಹ: ಆತ್ಮವಿಶ್ವಾಸದಿಂದ ಜಯ ದೊರೆಯಲಿದೆ. ಅನಗತ್ಯ ತಿರುಗಾಟ ಮಾಡಬೇಕಾಗುವುದು. ನೆರೆಹೊರೆಯವರಿಂದ ಸಹಾಯ. ಶುಭಸಂಖ್ಯೆ: 8

ಕನ್ಯಾ: ಆರ್ಥಿಕ ಸಹಾಯ ಸಿಗಲಿದೆ. ಕಲಾವಿದರಿಗೆ, ಮಾತಿನಿಂದ ಸಮಸ್ಯೆಯಾಗಲಿದೆ. ಪತ್ರಕರ್ತರಿಗೆ ಪ್ರಯಾಣದಲ್ಲಿ ಅಡ್ಡಿ ಆತಂಕ. ಶುಭಸಂಖ್ಯೆ: 7

ತುಲಾ: ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ಹಿನ್ನಡೆಯಾಗಿ ಬೇಸರ. ಅಧಿಕಾರಿಗಳಿಂದ ಭರವಸೆ ಸಿಗಲಿದೆ. ದುಶ್ಚಟಗಳಿಂದ ಸಮಸ್ಯೆಗಳು. ಶುಭಸಂಖ್ಯೆ: 3

ವೃಶ್ಚಿಕ: ಸಂಗಾತಿಯಿಂದ ಲಾಭ. ಸ್ತ್ರೀಯರಿಗೆ ಕೆಟ್ಟ ಆಲೋಚನೆಗಳು ಬಂದಾವು. ಐಟಿ ಕ್ಷೇತ್ರದ ಉದ್ಯೋಗಿ ಗಳಿಗೆ ಕಾರ್ಯದಲ್ಲಿ ಅನುಕೂಲ. ಶುಭಸಂಖ್ಯೆ: 9

ಧನುಸ್ಸು: ವಿದೇಶ ಪ್ರಯಾಣದಲ್ಲಿ ನಿರೀಕ್ಷಿತ ಸಹಕಾರ ಸಿಗಲಿದೆ. ವ್ಯಾಪಾರಕ್ಕೆ ತಂದೆಯಿಂದ ನೆರವು. ಉದ್ಯೋಗ ಬದಲಾವಣೆಯ ಸಾಧ್ಯತೆ. ಶುಭಸಂಖ್ಯೆ: 6

ಮಕರ: ಕೃಷಿ ಮಹಿಳೆಯರಿಗೆ ವಿಶೇಷ ಲಾಭ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು. ಶುಭಸಂಖ್ಯೆ: 4

ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕ ದೌರ್ಬಲ್ಯ ಕಾಡುವುದು. ಮನೆಯಲ್ಲಿ ನೆಮ್ಮದಿಯ ಕೊರತೆ. ಕೃಷಿಕರಿಗೆ ಕೆಲಸದಲ್ಲಿ ಅನನುಕೂಲ. ಶುಭಸಂಖ್ಯೆ: 8

ಮೀನ: ದುರ್ವಾರ್ತೆ ಕೇಳಬೇಕಾಗುವುದು. ದಾಂಪತ್ಯ ಜೀವನದಲ್ಲಿ ವ್ಯತ್ಯಾಸ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶ ದೊರೆಯುವುದಿಲ್ಲ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net