

ಮೇಷ: ನಿಮ್ಮ ಕನಸಿನ ಅನೇಕ ಯೋಜನೆಗಳನ್ನು
ಸಾಕಾರಗೊಳಿಸುವುದರ ಕಡೆಗೆ ಹೆಚ್ಚು ಪರಿಶ್ರಮ
ಹಾಕಿ. ಸಿದ್ಧಿಯಾಗಲು ಸಾಧ್ಯ. ಶುಭಸಂಖ್ಯೆ: 3
ವೃಷಭ: ಮಾರುತಿರಾಯನನ್ನು ಧ್ಯಾನಿಸಿ. ಕಾರ್ಯಸಿದ್ಧಿಗೆ
ಹೊಸದಾದ ದಾರಿಯೊಂದು ಬಹಳ
ಬೇಗನೆ ಗೋಚರವಾಗಲಿದೆ. ಶುಭಸಂಖ್ಯೆ: 2
ಮಿಥುನ: ಸಮಸ್ಯೆಯ ಒಂದೇ ಬದಿಯನ್ನು ಪರಿಶೀಲನೆ
ಮಾಡುತ್ತ ಆಯಾಸಗೊಂಡಿದ್ದೀರಿ. ಬದಲಾಗಿ.
ನಿಮ್ಮ ಪಾಲಿಗೇ ಗೆಲುವಿದೆ. ಶುಭಸಂಖ್ಯೆ: 5
ಕಟಕ: ರಾಜಕೀಯ ರಂಗದಲ್ಲಿ ಈಗಾಗಲೇ ಒಂದು
ಹಂತದ ಸ್ಥಾನಮಾನ ಗಳಿಸಿದ್ದರೆ ವಿಶಿಷ್ಟ
ಅಧಿಕಾರ ಪ್ರಾಪ್ತವಾಗಲಿದೆ. ಶುಭಸಂಖ್ಯೆ: 4
ಸಿಂಹ: ಇತರರ ಬಳಿ ನಿಮ್ಮ ಕಷ್ಟವನ್ನು ತೋಡಿಕೊಳ್ಳುವ
ಮುಗ್ಧತೆ ಬೇಡ. ನೀವೇ ಅದನ್ನು ಸುಲಭವಾಗಿ
ಪರಿಹಾರ ಮಾಡಿಕೊಳ್ಳಲಿದ್ದೀರಿ. ಶುಭಸಂಖ್ಯೆ: 9
ಕನ್ಯಾ: ಮಾತುಗಳಿಂದ ಸಮಸ್ಯೆ ಬಗೆಹರಿಸಲಾಗದು. ಆ
ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಮಸ್ಯೆ ನೀಗಿ
ಯಶಸ್ಸು ಕೂಡ ದೊರೆಯಲಿದೆ. ಶುಭಸಂಖ್ಯೆ: 8
ತುಲಾ: ಸಹೋದ್ಯೋಗಿಗಳ ಬಗ್ಗೆ ಎಚ್ಚರವಾಗಿರಬೇಕು.
ನೀವು ಒಳ್ಳೆಯವರೇ ಆದರೂ ಕೂಡ ಅವರ
ಕಿಲಾಡಿತನದ ಬಗ್ಗೆ ಎಚ್ಚರ. ಶುಭಸಂಖ್ಯೆ: 1
ವೃಶ್ಚಿಕ: ಹಲವು ಬಗೆಯ ನೋವುಗಳಿಂದ ಬೇಗನೆ
ಪಾರಾಗಲು ನಿಮ್ಮೊಳಗಿನ ಆನಂದಮಯ
ಮನಃಸ್ಥಿತಿ ಜಾಗ್ರತವಾಗಲಿ. ಶುಭಸಂಖ್ಯೆ: 7
ಧನುಸ್ಸು: ಯಾರ ಜತೆಗೆ ಶತ್ರುತ್ವ ಬೇಡ. ಮೈತ್ರಿ
ಮಾಡಿಕೊಳ್ಳುವುದೂ ಬೇಡ. ಅಂತಿಮ
ನಿರ್ಧಾರಕ್ಕೆ ಸೂಕ್ಷ್ಮ ನಡೆ ಇರಲಿ. ಶುಭಸಂಖ್ಯೆ: 6
ಮಕರ: ಭಕ್ತಿಪೂರ್ವಕವಾಗಿ ಶ್ರೀಹರಿಯನ್ನು
ಸ್ತುತಿಸುತ್ತೀರಿ. ಮರಳಿ ಸಿಗಬೇಕಾದ ಹಣ
ಸರಳವಾಗಿ ಹಿಂದಕ್ಕೆ ಬರಲಿದೆ. ಶುಭಸಂಖ್ಯೆ: 3
ಕುಂಭ: ಅಲ್ಪಸ್ವಲ್ಪ ಲಾಭದ ಬಗೆಗಿನ ಅತೃಪ್ತಿಯಿಂದ
ದೊಡ್ಡ ಮಟ್ಟದ ಬಂಡವಾಳ ಹೂಡಿ ನಷ್ಟ
ಮಾಡಿಕೊಳ್ಳದಿರಿ. ಜಾಗ್ರತೆ. ಶುಭಸಂಖ್ಯೆ: 5
ಮೀನ: ಸಂಘಟನಾ ಚತುರತೆಯಿಂದ ಜನಪ್ರಿಯತೆ
ಪಡೆದಿದ್ದರೂ ಹಿತಶತ್ರುಗಳ ಕಡೆಗೆ ಮಾತ್ರ
ಒಂದು ಕಣ್ಣು ಇಟ್ಟಿರಲೇಬೇಕು. ಶುಭಸಂಖ್ಯೆ: 2