More

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಚೆನ್ನೈ: ದೀಪಾವಳಿ ಸನಿಹದಲ್ಲಿರುವಾಗಲೇ ಮದ್ರಾಸ್ ಹೈಕೋರ್ಟ್​ನ ನ್ಯಾಯಮೂರ್ತಿ ವಿ.ಪಾರ್ಥಿಬನ್​ ಅವರು ಉಲ್ಲೇಖಿಸಿದ ‘ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ’ ಎಂಬ ಐತಿಹಾಸಿಕ ಆಬ್ಸರ್ವೇಶನ್ ದೇಶದ ಗಮನಸೆಳೆದಿದೆ. ಕುತೂಹಲ ಕೆರಳಿಸಿದ ಉದ್ಯೋಗ ನೇಮಕಾತಿ ವಿವಾದ ಪ್ರಕರಣದ ತೀರ್ಪಿನಲ್ಲಿ ಇದು ಉಲ್ಲೇಖವಾಗಿದೆ.

    ಎ.ಬಾಲಾಜಿ ವರ್ಸಸ್ ದ ಚೇರ್ಮನ್ ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸಸ್ ರಿಕ್ರೂಟ್​ಮೆಂಟ್ ಬೋರ್ಡ್​ ಚೆನ್ನೈ ಪ್ರಕರಣ ಇದಾಗಿದ್ದು, ಸೆಪ್ಟೆಂಬರ್ 5 ರಂದು 30 ಪುಟಗಳ ಆದೇಶವನ್ನು ಕೋರ್ಟ್ ನೀಡಿದೆ. ಎ.ಬಾಲಾಜಿ ಗ್ರೇಡ್​ 2 ಪೊಲೀಸ್ ಕಾನ್​​ಸ್ಟೆಬಲ್ ಹುದ್ದೆಗೆ ನೇಮಕ ಬಯಸಿದ್ದರು. ಅಗತ್ಯ ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾದಾಗ್ಯೂ, ಪಟಾಕಿ ಸಿಡಿಸುವ ವಿಚಾರ ಅಪರಾಧವೆಂದು ಪರಿಗಣಿಸಲ್ಪಟ್ಟಿರುವ ಐಪಿಸಿ ಸೆಕ್ಷನ್ 285ರ ಬಗ್ಗೆ ಕೊಟ್ಟ ವಿಶ್ಲೇಷಣಾತ್ಮಕ ವಿವರಣೆಯ ಕಾರಣಕ್ಕೆ ಉದ್ಯೋಗ ನಿರಾಕರಿಸಿತ್ತು ನೇಮಕ ಮಂಡಳಿ.

    ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ಸಕಾರಣವಿಲ್ಲದೆ ಉದ್ಯೋಗ ನಿರಾಕರಿಸಿದ್ದನ್ನು ಪ್ರಶ್ನಿಸಿ ಎ. ಬಾಲಾಜಿ ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಂತರದಲ್ಲಿ ಕೋರ್ಟ್, ನೇಮಕ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ನೇಮಕ ಪ್ರಕ್ರಿಯೆಯಲ್ಲಿ ವಿಕ್ಟೋರಿಯನ್ ಕಾಲದ ಮಾನದಂಡ ಮತ್ತು ಉಟೋಪಿಯನ್​ ನಿರೀಕ್ಷೆಗಳನ್ನು ಇರಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಛಾಟಿ ಬೀಸಿದೆ. ಅಲ್ಲದೆ, ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ. ಅದು ನಮ್ಮ ಸಂಸ್ಕೃತಿಯಲ್ಲಿ ಬೇರೂರಿದೆ ಎಂಬುದನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಆದೇಶದಲ್ಲಿ ಕೋರ್ಟ್​ ಸ್ಪಷ್ಟವಾಗಿ ಹೇಳಿದೆ. ಮಾಹಿತಿ – ಒಪಿಇಂಡಿಯಾ (ಏಜೆನ್ಸೀಸ್)

    ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್​ಪಿಎಫ್ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts