More

    ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್​ಪಿಎಫ್ ಬಲೆಗೆ

    ನವದೆಹಲಿ: ಐಆರ್​ಸಿಟಿಸಿ ವೆಬ್​ಸೈಟ್​ಗೆ ವಿವಿಧ ಲಾಗಿನ್ ಐಡಿಗಳ ಮೂಲಕ ಲಾಗಿನ್ ಆಗಿ ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡಿ ಕೊಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಸರದಾರರು ಆರ್​ಪಿಎಫ್​ ಬಲೆಗೆ ಬಿದ್ದಿದ್ದಾರೆ. ಕರೊನಾ ವೈರಸ್​ ಸೋಂಕಿನ ಅವಧಿಯಲ್ಲಿ ರೈಲ್ವೆ ಪ್ರಯಾಣದ ಟಿಕೆಟ್ ಕನ್​ಫರ್ಮ್ ಮಾಡುವ ದಂಧೆಗೆ ಈ ಅಕ್ರಮ ಸಾಫ್ಟ್​ವೇರ್​ ‘ರಿಯಲ್ ಮ್ಯಾಂಗೋ’ ಬಳಸುತ್ತಿದ್ದರು. ಈ ಅಕ್ರಮ ಸಂಬಂಧ ಇದುವರೆಗೆ ಅಕ್ರಮ ಸಾಫ್ಟ್​ವೇರ್ ಡೆವಲಪರ್ ಸೇರಿ 50 ಜನರನ್ನು ಆರ್​ಪಿಎಫ್ ಬಂಧಿಸಿದೆ.

    ಈ ಸಾಫ್ಟ್​​ವೇರ್ ಕ್ಯಾಪ್ಚಾವನ್ನು ಬೈಪಾಸ್ ಮಾಡಿ ನೇರವಾಗಿ ಬ್ಯಾಂಕ್ ಒಟಿಪಿಗೆ ತೆರಳಿ ಟಿಕೆಟ್ ಬುಕ್ಕಿಂಗ್ ಮಾಡುತ್ತಿತ್ತು. ಇದಕ್ಕಾಗಿ ಆ್ಯಪ್​ನ ಸಾಫ್ಟ್​ವೇರನ್ನು ಐಆರ್​ಸಿಟಿಸಿಯ ವಿವಿಧ ಲಾಗಿನ್ ಐಡಿಗೆ ಜೋಡಿಸಲಾಗಿತ್ತು. ಐದು ಸ್ತರದ ವ್ಯವಸ್ಥೆ ಚಾಲ್ತಿಯಲ್ಲಿದ್ದು, ಸಿಸ್ಟಮ್ ಅಡ್ಮಿನ್ ಬಿಟ್​ ಕಾಯಿನ್ ಮೂಲಕ ಪಾವತಿ ಪಡೆಯುತ್ತಿದ್ದ ಎಂದು ಆರ್​ಪಿಎಫ್​ ಡಿಜಿ ಅರುಣ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಗಿಣಿ-ಸಂಜನಾರನ್ನು ಒಟ್ಟಿಗೇ ವಿಚಾರಣೆ ಮಾಡಲು ಸಾಧ್ಯವೇ ಇಲ್ಲ !; ಮಹಿಳಾ ಅಧಿಕಾರಿಗಳೂ ಬೇರೆ

    ಅಕ್ರಮ ಸಾಫ್ಟ್​ವೇರ್ ಬಳಸಿಕೊಂಡು ಈ ವಂಚಕರು 5 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟಿಕೆಟ್​ಗಳನ್ನು ಬ್ಲಾಕ್ ಮಾಡಿದ್ದರು. ಈ ಸಾಫ್ಟ್​ವೇರ್​ ಆ್ಯಪ್ ಬಗ್ಗೆ ಯೂಟ್ಯೂಬ್​ನಲ್ಲಿ ಮೊದಲ ಬಾರಿಗೆ ಜಾಹೀರಾತು ಬಂದಾಗ ರೈಲ್ವೆ ಇಲಾಖೆಯ ಗಮನಕ್ಕೆ ಬಂದಿತ್ತು. ಇದಕ್ಕೆ ಆರಂಭದಲ್ಲಿ ರೇರ್ ಮ್ಯಾಂಗೋ ಎಂಬ ಹೆಸರಿತ್ತು. ಬಳಿಕ ರಿಯಲ್ ಮ್ಯಾಂಗೋ ಎಂದು ಬದಲಾಯಿಸಲಾಗಿದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

    ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts