

ಮೇಷ: ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ ಆಗಲಿದೆ. ಶುಭಸಂಖ್ಯೆ: 9
ವೃಷಭ: ಸಾಲ ಕೊಡಲು ಇಲ್ಲವೆ ಸಾಲ ಪಡೆಯಲು ಮುಂದಾಗದಿರಿ. ನಿಮ್ಮ ಆತ್ಮಸ್ಥೈರ್ಯ ಕುಗ್ಗುವಂತಹ ಸಾಧ್ಯತೆ ಇದೆ. ಶುಭಸಂಖ್ಯೆ: 6
ಮಿಥುನ: ಕುರುಡುಪ್ರೇಮಕ್ಕೆ ಹೊರಗಿನ ರೀತಿ ರಿವಾಜುಗಳ ಅಗತ್ಯವಿಲ್ಲ. ಈ ಬಗ್ಗೆ ಎಚ್ಚರ. ಕೆಲವರಿಗೆ ಕಂಕಣಭಾಗ್ಯವಿದೆ. ಶುಭಸಂಖ್ಯೆ: 3
ಕಟಕ: ಲಾಭಕ್ಕೆ ದಾರಿ ಮಾಡಿಕೊಡುವ ವಹಿವಾಟು, ವ್ಯಾಪಾರಗಳನ್ನು ಜಾಣ್ಮೆಯಿಂದ ನಡೆಸಿ. ಆಸ್ತಿ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2
ಸಿಂಹ: ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರ ಜಾಗೆ ಕಾಣಬೇಕು. ಕುಟುಂಬದ ಸದಸ್ಯರ ವಿಶ್ವಾಸವನ್ನು ಗಳಿಸಿ. ಶುಭಸಂಖ್ಯೆ: 5
ಕನ್ಯಾ: ಭೂಸಂಬಂಧಿ ವ್ಯವಹಾರ, ಮಧ್ಯಸ್ಥಿಕೆಗಳಲ್ಲಿ ಹೆಚ್ಚಿನ ಎಚ್ಚರ ಇರಲಿ. ಸೂಕ್ತ ವ್ಯಕ್ತಿಗಳ ಸಲಹೆಗಳನ್ನೂ ಸ್ವೀಕರಿಸಿ. ಶುಭಸಂಖ್ಯೆ: 8
ತುಲಾ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭ ಇದೆ. ಸೂಕ್ತ ದಾಖಲಾತಿಗಳೊಡನೆ ವ್ಯವಹರಿಸಿದರೆ ಉತ್ತಮ. ಶುಭಸಂಖ್ಯೆ: 7
ವೃಶ್ಚಿಕ: ನೆರೆಹೊರೆಯವರು ಸಣ್ಣಪುಟ್ಟ ವಿಷಯಗಳನ್ನೇ ದೊಡ್ಡದು ಮಾಡಿ ಜಗಳ ತೆಗೆದಾರು. ಕಂಡೂ ಕಾಣದಂತಿರಿ. ಶುಭಸಂಖ್ಯೆ: 4
ಧನುಸ್ಸು: ದೂರದ ಶತ್ರುಗಳ ತೊಂದರೆ ಇಲ್ಲ. ಹತ್ತಿರದವರೇ ಬೆನ್ನಿಗೆ ಚೂರಿ ಹಾಕಬಹುದು. ಅಪರಿಚಿತರಿಂದ ದೂರವಿರಿ. ಶುಭಸಂಖ್ಯೆ: 1
ಮಕರ: ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆಯಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಶುಭಸಂಖ್ಯೆ: 9
ಕುಂಭ: ಪ್ರವಾಸದಿಂದ ಮನಸ್ಸು ಉಲ್ಲಸಿತವಾಗುವುದು. ಹಿರಿಯರ ಜತೆ ಸ್ನೇಹದಿಂದ ವರ್ತಿಸಿ, ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 6
ಮೀನ: ವಿಶಿಷ್ಟ ಅನುಭವ ಲಭ್ಯವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಆದರೆ ವ್ಯವಹಾರದ ಲೆಕ್ಕ ಇಡಿ. ಶುಭಸಂಖ್ಯೆ: 3