ಮನೆಯಿಂದ ಹೊರಗಡಿ ಇಡುವಾಗ ಈ ರಾಶಿಯವರು ಎಚ್ಚರದಿಂದ ಇರಿ!

Nitya-Bhavishya-vvani-1-2-1
Published on

ಮೇಷ: ನಿಮ್ಮ ದಾರಿಗೆ ಹೊಸ ವಿಚಾರಗಳು ಅನಿರೀಕ್ಷಿತ ತೊಡಕಾಗಲಿವೆ. ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಶುಭಸಂಖ್ಯೆ: 6

ವೃಷಭ: ಉನ್ನತ ವಿದ್ಯಾಭ್ಯಾಸಕ್ಕೆ ಅನಿರೀಕ್ಷಿತ ಸಹಕಾರ ಲಭ್ಯ. ಕೆಲವರಿಗೆ ಮಾತ್ರ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ. ಶುಭಸಂಖ್ಯೆ: 9

ಮಿಥುನ: ಮನೆಯಿಂದ ಹೊರಡುವಾಗ ನರಸಿಂಹನನ್ನು ಸ್ಮರಿಸಿ. ಏನೇನೋ ಚಿಂತಿಸುತ್ತ ವಾಹನ ಚಾಲನೆ ಮಾಡದಿರಿ. ಶುಭಸಂಖ್ಯೆ: 3

ಕಟಕ: ಮುಖ್ಯ ಸಂದರ್ಭಗಳಲ್ಲಿ ಕಾಗದಪತ್ರವನ್ನು ಓದಿಯೇ ಸಹಿ ಮಾಡಿ. ಅಪವಾದ ಬರಬಹುದು. ಎಚ್ಚರ. ಶುಭಸಂಖ್ಯೆ: 2

ಸಿಂಹಾ: ನೀವು ಧೈರ್ಯಶಾಲಿಯಾದರೂ ಹೊಸ ಜವಾಬ್ದಾರಿಯಿಂದ ಪಾರಾಗಲು ಯತ್ನಿಸುವಿರಿ. ಹಾಗೆ ಮಾಡದಿದ್ದರೇ ಲಾಭ. ಶುಭಸಂಖ್ಯೆ: 4

ಕನ್ಯಾ: ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಖರ್ಚು ಬರಬಹುದು. ವ್ಯಾಪಾರದಲ್ಲಿ ಕೊಂಚಮಟ್ಟಿನ ಕಿರಿಕಿರಿಯುಂಟಾಗಲಿದೆ. ಶುಭಸಂಖ್ಯೆ: 8

ತುಲಾ: ಅರ್ಧಕ್ಕೇ ಒಂದು ಕೆಲಸ ಬಿಟ್ಟು ಮತ್ತೊಂದರ ಆರಂಭ ಬೇಡ. ಸಾಲ ಕೊಟ್ಟವರು ಬೇಗ ಹಣ ಮರಳಿಸಿ ಎಂದಾರು. ಶುಭಸಂಖ್ಯೆ: 5

ವೃಶ್ಚಿಕ: ಮನೆಯ ಬದಲಾವಣೆ ಮಾಡಲು ಆಲೋಚಿಸುವಿರಿ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು. ಶುಭಸಂಖ್ಯೆ: 1

ಧನುಸ್ಸು: ನಿಮ್ಮ ಕಾರ್ಯವೈಖರಿಗೆ ಇತರರು ಬೇಸರ ವ್ಯಕ್ತಪಡಿಸಿಯಾರು. ಚಿಂತಿಸದಿರಿ. ಮೌನವಾಗಿ ಶಿವಧ್ಯಾನ ಮಾಡಿ. ಶುಭಸಂಖ್ಯೆ: 7

ಮಕರ: ಮಕ್ಕಳಿಂದ ಕೆಲಸಗಳಲ್ಲಿ ತೊಂದರೆ. ಆಕಸ್ಮಿಕ ಪ್ರಯಾಣ ಮಾಡಬೇಕಾದೀತು. ನೆಂಟರ ಕಿರಿಕಿರಿ ಸಹಿಸಿಕೊಳ್ಳಿ. ಶುಭಸಂಖ್ಯೆ: 6

ಕುಂಭ: ಹೊಸ ಚಿಂತನೆ ಸಾಕಾರಗೊಳ್ಳಲಿದೆ. ಹಣಕಾಸಿನ ಸ್ಥಿತಿ ಸುಧಾರಣೆ. ಆತ್ಮೀಯರ ಸಲಹೆಗಳನ್ನು ಪಾಲಿಸಿ. ಶುಭಸಂಖ್ಯೆ: 9

ಮೀನ: ಮನೆಯಲ್ಲಿ ಮತ್ತು ಕಚೇರಿಯಲ್ಲಿ ನೆಮ್ಮದಿಯ ವಾತಾವರಣವಿದೆ. ಹೊಸ ಜವಾಬ್ದಾರಿ ಹೊರಲು ಸಿದ್ಧರಾಗಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net