ಈ ರಾಶಿಯವರಿಗೆ ವ್ಯಾಪಾರ ವಹಿವಾಟುಗಳಲ್ಲಿ ಅದೃಷ್ಟವಿದೆ...

Nitya-Bhavishya-vvani-1-2-1
Published on

ಮೇಷ: ಒಗ್ಗಟ್ಟಿನಲ್ಲಿ ಗೆಲುವಿದೆ ಎಂದು ತಿಳಿದಿದ್ದರೂ ಒಂಟಿಯಾಗಿರುತ್ತೀರಿ. ಕಾರ್ಯವಿಧಾನ ಬದಲಿಸಿದರೆ ಜಯವಾಗಲಿದೆ. ಶುಭಸಂಖ್ಯೆ: 7

ವೃಷಭ: ನಿಮ್ಮ ನಡೆ-ನುಡಿಗಳು ಬಾಣದಂತೆ ನೇರ, ಸ್ಪಷ್ಟವಾಗಿರಲಿ. ಆದರೂ ವ್ಯಾವಹಾರಿಕವಾದ ಜಾಣ್ಮೆಯನ್ನು ಮಾತ್ರ ಬಿಡದಿರಿ. ಶುಭಸಂಖ್ಯೆ: 8

ಮಿಥುನ: ಯಾರ ಬಳಿಯಲ್ಲಾದರೂ ನೋವನ್ನು ಹಂಚಿಕೊಳ್ಳಬೇಕೆಂಬ ಹಂಬಲ ನಿಮಗಿದೆ. ವ್ಯಕ್ತಿಯನ್ನು ಎಚ್ಚರದಿಂದ ಆರಿಸಿ. ಶುಭಸಂಖ್ಯೆ: 5

ಕಟಕ: ವ್ಯಾಪಾರ ವಹಿವಾಟುಗಳ ವಿಚಾರದಲ್ಲಿ ನಿಮಗೆ ಅದೃಷ್ಟವೇ ಇದೆ. ಆದರೆ ಇಲೆಕ್ಟ್ರಾನಿಕ್ ವಸ್ತುಗಳಿಂದ ಸ್ವಲ್ಪ ದೂರವಿರಿ. ಶುಭಸಂಖ್ಯೆ: 4

ಸಿಂಹ: ನಿಮಗೆ ಗೊತ್ತಿಲ್ಲದೆಯೇ ದುಷ್ಟರು ಹತ್ತಿರ ಬಂದು ಸೇರಿಸಿಕೊಳ್ಳಬಹುದು. ಈ ಬಗ್ಗೆ ಸಾಧ್ಯದಷ್ಟು ಜಾಗ್ರತೆ ಇರಲಿ. ಶುಭಸಂಖ್ಯೆ: 1

ಕನ್ಯಾ: ಕೋಪವು ನಿಮ್ಮ ಮುಖ್ಯ ದೌರ್ಬಲ್ಯವಾಗಿದೆ. ಅದನ್ನು ನಿಯಂತ್ರಿಸಿ. ಸಿದ್ಧಿದಾತ್ರಿಯನ್ನು ಸ್ತುತಿಸಿ. ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 2

ತುಲಾ: ಹಿರಿಯರ ಆಸ್ತಿಯ ವಿಚಾರದಲ್ಲಿ ವಿವಾದ ನಿರ್ವಿುಸಿಕೊಳ್ಳಲು ಹೋಗದಿರಿ. ವ್ಯಾಜ್ಯವನ್ನು ತಡೆದರೆ ಒಳಿತಾಗಲಿದೆ. ಶುಭಸಂಖ್ಯೆ: 9

ವೃಶ್ಚಿಕ: ವಿವಿಧ ಬಗೆಯ ಚಿಂತೆಗಳು ಮೂಡುತ್ತವೆ. ಸೂಕ್ತ ಆಲೋಚನೆಯೊಂದಿಗೆ ಅವುಗಳನ್ನು ಬೇಗನೆ ನಿವಾರಿಸಿಕೊಳ್ಳಿ. ಶುಭಸಂಖ್ಯೆ: 3

ಧನಸ್ಸು: ಬಹಳ ಕಾಲದಿಂದ ಹಾಗೆಯೇ ಉಳಿದುಬಿಟ್ಟಿದ್ದ ಕಾರ್ಯವೊಂದು ಸಾಕಾರಗೊಳ್ಳುವ ಅಪರೂಪದ ಸಂದರ್ಭವು ಸೃಷ್ಟಿಯಾಗಲಿದೆ. ಶುಭಸಂಖ್ಯೆ: 6

ಮಕರ: ಮನೆಯಲ್ಲಿ ಏನೇ ಮನಸ್ತಾಪ ಉಂಟಾದರೂ ನೀವು ಮಾತ್ರ ಅಜಾತಶತ್ರುಗಳಾಗಿಯೇ ಇರಿ. ಇದರಿಂದ ನಿಮಗೆ ಲಾಭವಿದೆ. ಶುಭಸಂಖ್ಯೆ: 5

ಕುಂಭ: ಹರ್ಷದ ಸಮಾಚಾರವೊಂದನ್ನು ಕೇಳುವ ಅವಕಾಶ ಅಧಿಕವಾಗಿದೆ. ಮನದ ವಿಷಾದ ಕೂಡ ಬೇಗ ಕೊನೆಗೊಳ್ಳಲಿದೆ. ಶುಭಸಂಖ್ಯೆ: 8

ಮೀನ: ನಿಮ್ಮ ನಾಯಕತ್ವವನ್ನು ಸಹೋದ್ಯೋಗಿಗಳೆಲ್ಲ ಸ್ವಾಗತಿಸುತ್ತಾರೆ. ಆದರೂ ಈ ಸಂದರ್ಭದಲ್ಲಿ ಮೈಮರೆಯದಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net