ಈ ರಾಶಿಯವರಿಗೆ ಇಂದು ಧನಾತ್ಮಕ ಚಿಂತನೆಯಿಂದ ಯಶಸ್ಸು, ಧನಲಾಭವಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಸ್ನೇಹಿತರಿಗೆ ಸಹಾಯ ಮಾಡುವಿರಿ. ವಿನಾಕಾರಣ ನಿಷ್ಠುರ ಉಂಟಾಗಬಹುದು. ಶುಭಸಂಖ್ಯೆ: 9

ವೃಷಭ: ವಿದೇಶ ಪ್ರಯಾಣ ಸಂಭವ. ಅಮೂಲ್ಯ ವಸ್ತುಗಳ ಖರೀದಿ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಕುಟುಂಬದಲ್ಲಿ ಪ್ರೀತಿ. ಶುಭಸಂಖ್ಯೆ: 8

ಮಿಥುನ: ಮಾತಿನಲ್ಲಿ ಹಿಡಿತವಿರಲಿ. ಕಾರ್ಯಸಾಧನೆಗಾಗಿ ತಿರುಗಾಟ. ತೀರ್ಥಯಾತ್ರೆ, ದೇಗುಲ ದರ್ಶನ. ವ್ಯಾಸಂಗಕ್ಕೆ ತೊಂದರೆ. ಶುಭಸಂಖ್ಯೆ:1

ಕಟಕ: ನಿರೀಕ್ಷಿತ ಆದಾಯ. ಶುಭ ಸಮಾರಂಭದಲ್ಲಿ ಭಾಗಿ. ಮಿಶ್ರ ಫಲ, ದ್ರವ್ಯಲಾಭ. ಕುಲದೇವರ ಪೂಜೆಯಿಂದ ಶುಭ. ಶುಭಸಂಖ್ಯೆ: 5

ಸಿಂಹ: ಕೆಲಸಕಾರ್ಯಗಳಲ್ಲಿ ಮಂದಗತಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಹಿರಿಯರೊಂದಿಗೆ ಸಮಾಲೋಚನೆ ಮಾಡಿ. ಶುಭಸಂಖ್ಯೆ: 6

ಕನ್ಯಾ: ಧನಹಾನಿ. ರಫ್ತು ವ್ಯಾಪಾರದಿಂದ ನಷ್ಟ. ಅವಕಾಶ ಗಳು ಕೈ ತಪ್ಪುವ ಸಾಧ್ಯತೆ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 3

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ. ಚಂಚಲ ಮನಸ್ಸು. ಸಾಲಬಾಧೆ ಕಾಡಬಹುದು. ವಿಪರೀತ ವ್ಯಸನ. ರೋಗಬಾಧೆ ಕಾಡೀತು. ಶುಭಸಂಖ್ಯೆ: 6

ವೃಶ್ಚಿಕ: ಭೂ ವ್ಯವಹಾರದಲ್ಲಿ ಕಲಹ, ಶರೀರದಲ್ಲಿ ಆಯಾಸ. ಧನವ್ಯಯ. ವಿವಾಹ ಯೋಗ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 7

ಧನುಸ್ಸು: ಧನಾತ್ಮಕ ಚಿಂತೆಯಿಂದ ಯಶಸ್ಸು. ಧನಪ್ರಾಪ್ತಿ. ಯಾರನ್ನೂ ನಂಬಬೇಡಿ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1

ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ. ನೆಮ್ಮದಿ ಇಲ್ಲದ ಜೀವನ. ಇತರರ ಮಾತಿನಿಂದ ಕಲಹ ಉಂಟಾದೀತು. ವಾಹನ ಯೋಗ. ಶುಭಸಂಖ್ಯೆ: 9

ಕುಂಭ: ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ. ಮಾನಸಿಕ ನೋವು. ಸ್ತ್ರೀಯರಿಂದ ಸಮಾಧಾನ. ಹಳೆಯ ಗೆಳೆಯರ ಭೇಟಿ. ಶುಭಸಂಖ್ಯೆ: 5

ಮೀನ: ಧನಾತ್ಮಕ ಚಿಂತನೆಯಿಂದ ಯಶಸ್ಸು. ಕೋಪ ಜಾಸ್ತಿ ಬರಬಹುದು, ತಾಳ್ಮೆ ಕಾಪಾಡಿಕೊಳ್ಳಿ. ಧನಲಾಭವಾಗಲಿದೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net