ಮನೆಯಿಂದ ಹೊರಗೆ ಕಾಲಿಡುವ ಮುನ್ನ ಈ ರಾಶಿಯವರು ಭವಿಷ್ಯ ನೋಡುವುದು ಒಳಿತು..

NITYA BHAVISHYA
Published on

ಮೇಷ: ಬಹಳ ಬದಲಾವಣೆಗಳು ನಡೆಯಲಿವೆ. ನಿಮಗಾದ ಲಾಭ ನೋಡಿ ಹೊಟ್ಟೆಕಿಚ್ಚು ಪಡುವವರಿಗೆ ಕೊರತೆ ಇಲ್ಲ. ಅದೃಷ್ಟಸಂಖ್ಯೆ: 5

ವೃಷಭ: ವ್ಯಾಪಾರದಲ್ಲಿ ಲಾಭ. ಅವಿವಾಹಿತರಿಗೆ ವಿವಾಹ ನಿಶ್ಚಯದ ಮಾತುಕತೆ. ಪ್ರೇಮ ನಿವೇದನೆಗೆ ಇದು ಸಕಾಲ. ಅದೃಷ್ಟಸಂಖ್ಯೆ: 3

ಮಿಥುನ: ಯಾರಿಗೂ ಸಾಲ ಕೊಡಬೇಡಿ ಅಥವಾ ಕೊಡಿಸಬೇಡಿ. ವಸ್ತ್ರ ವ್ಯಾಪಾರಿಗಳಿಗೆ ಮಾತ್ರ ಸ್ವಲ್ಪ ಮಟ್ಟಿನ ಲಾಭವಿದೆ. ಅದೃಷ್ಟಸಂಖ್ಯೆ: 7

ಕಟಕ: ಬಹಳ ಎಚ್ಚರಿಕೆಯಿಂದ ಕೆಲಸಕಾರ್ಯಗಳನ್ನು ಮಾಡುತ್ತೀರಿ. ಮಾನಸಿಕ ನೆಮ್ಮದಿ ಕೂಡ ದೊರೆಯಲಿದೆ. ಅದೃಷ್ಟಸಂಖ್ಯೆ: 5

ಸಿಂಹ: ಕಾಲುನೋವು ಕಾಡುತ್ತದೆ. ವಾಹನ ಖರೀದಿಸುವ ಆಲೋಚನೆ ಇರುವವರು ಕೆಲವು ದಿನ ಕಾಯಬೇಕು. ಅದೃಷ್ಟಸಂಖ್ಯೆ: 1

ಕನ್ಯಾ: ಮಕ್ಕಳ ಚಲನವಲನಗಳತ್ತ ಹೆಚ್ಚು ಗಮನಿಸಿ. ಕೆಲವರು ನಿಮ್ಮನ್ನು ನಿಮ್ಮವರದೇ ವಿರುದ್ಧ ಪ್ರಚೋದಿಸಬಹುದು. ಅದೃಷ್ಟಸಂಖ್ಯೆ: 3

ತುಲಾ: ಕೆಲವು ದೂರಪ್ರಯಾಣಗಳು ಕಾರ್ಯಸಿದ್ಧಿ ತರುತ್ತವೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದಲ್ಲಿ ಒತ್ತಡವಿದೆ. ಅದೃಷ್ಟಸಂಖ್ಯೆ: 2

ವೃಶ್ಚಿಕ: ರೊಟ್ಟಿ ತಾನಾಗಿ ಜಾರಿ ತುಪ್ಪದಲ್ಲಿ ಬೀಳುವುದಿಲ್ಲ. ಆಲಸ್ಯ ಬಿಟ್ಟು ನೀವೇ ಪ್ರಯತ್ನಿಸಿ. ಯಶಸ್ಸು ಸಿಗಲಿದೆ. ಅದೃಷ್ಟಸಂಖ್ಯೆ: 2

ಧನುಸ್ಸು: ಬರಬೇಕಾದ ಹಣದ ವಿಚಾರದಲ್ಲಿ ಚಿಂತೆ ಹೆಚ್ಚಾಗುತ್ತದೆ. ಶಾರೀರಿಕವಾದ ದೊಡ್ಡ ಸಾಹಸಗಳಿಗೆ ಕೈ ಹಾಕಬೇಡಿ. ಅದೃಷ್ಟಸಂಖ್ಯೆ: 4

ಮಕರ: ಬಹಳ ದಿನಗಳಿಂದ ನಿಂತಿದ್ದ ಭೂಸಂಬಂಧಿ ವ್ಯಾಪಾರಗಳು ಚಿಗುರುವಂತೆ ಕಾಣುತ್ತದೆ. ಆದರೆ ಸಾಫಲ್ಯತೆ ಕಷ್ಟ. ಅದೃಷ್ಟಸಂಖ್ಯೆ: 1

ಕುಂಭ: ಕೆಲವು ಚಟುವಟಿಕೆಗಳಿಗೆ ಕೊನೆ ಹಾಡದಿದ್ದಲ್ಲಿ ತೊಂದರೆಗೆ ಸಿಲುಕುವ ಸಾಧ್ಯತೆ. ವಸ್ತ್ರ ಧರಿಸುವ ಮುನ್ನ ಪರೀಕ್ಷಿಸಿ. ಅದೃಷ್ಟಸಂಖ್ಯೆ: 9

ಮೀನ: ದೂರಪ್ರಯಾಣಗಳು ಸಮಸ್ಯೆ ಹಾಗೂ ನೋವು ತರುವ ಸಾಧ್ಯತೆ ಹೆಚ್ಚು. ಮನೆಯಲ್ಲಿಯೇ ಇದ್ದರೆ ಉತ್ತಮ. ಅದೃಷ್ಟಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net