

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಮನೋವ್ಯಾಧಿ ಬಾಧಿಸೀತು. ಶುಭಸಂಖ್ಯೆ: 9
ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು. ಕುಟುಂಬದ ಉನ್ನತಿ ಬಗ್ಗೆ ಚಿಂತನೆ. ಬಂಧುಗಳಿಂದ ಆರ್ಥಿಕ ಸಹಾಯ ಒದಗಲಿದೆ. ಶುಭಸಂಖ್ಯೆ: 9
ಮಿಥುನ: ತಾಯಿಯಿಂದ ಅನುಕೂಲ. ಭೂಮಿ ಮತ್ತು ವಾಹನದಿಂದ ಧನಾಗಮನ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಪ್ರೀತಿ ಪ್ರೇಮದಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ನಷ್ಟ. ಸಂಗೀತ, ನಾಟ್ಯ ಕಲಾ ವಿದ್ಯಾರ್ಥಿಗಳಿಗೆ ಶುಭದಾಯಕ. ಶುಭಸಂಖ್ಯೆ: 7
ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ. ಸಾಲದ ಚಿಂತೆ ಮತ್ತು ನಿದ್ರಾಭಂಗ. ಆರೋಗ್ಯದಲ್ಲಿ ಏರುಪೇರು. ಮಾತಿನಿಂದ ತೊಂದರೆ ಆದೀತು. ಶುಭಸಂಖ್ಯೆ:1
ಕನ್ಯಾ: ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಸಮಾಜದಲ್ಲಿ ಮಾನ ಸನ್ಮಾನಗಳು ಸಿಗಲಿವೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 9
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ. ಆಕಸ್ಮಿಕ ಅವಕಾಶಗಳು ಲಭ್ಯ. ಹೆಣ್ಣುಮಕ್ಕಳಿಂದ ಸಮಸ್ಯೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 3
ವೃಶ್ಚಿಕ: ತಂದೆಯಿಂದ ಲಾಭ. ಪ್ರಯಾಣದಲ್ಲಿ ಅನುಕೂಲ. ಪೂರ್ವದಲ್ಲಿ ಮಾಡಿದ ಕರ್ಮ ಫಲ ಪ್ರಾಪ್ತಿ. ಮಿತ್ರರಿಂದ ಸಕಾಲಿಕ ಸಹಾಯ. ಶುಭಸಂಖ್ಯೆ: 5
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು. ಹಣಕಾಸಿನ ನೆರವು ಲಭಿಸುವುದು. ಕುಟುಂಬ ನಿರ್ವಹಣೆಗಾಗಿ ಸಾಲದ ಮೊರೆ ಹೋಗುವಿರಿ. ಶುಭಸಂಖ್ಯೆ: 8
ಮಕರ: ಮಿತ್ರರಿಂದ ಅನನುಕೂಲ. ಸಾಮಾಜಿಕ ಚರ್ಚೆಗಳಲ್ಲಿ ತೊಡಗುವಿರಿ. ಸಂಗಾತಿಯಿಂದ ಸಹಕಾರ. ಉದ್ಯೋಗನಿಮಿತ್ತ ಪ್ರಯಾಣ. ಶುಭಸಂಖ್ಯೆ: 2
ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ನಷ್ಟ ಮತ್ತು ಸಾಲದ ಸಮಸ್ಯೆ ಇದ್ದರೂ ಈ ದಿನ ಕಾರ್ಯಗಳಿಗೆ ಅನುಕೂಲಕರ. ಮಕ್ಕಳು ದೂರ. ಶುಭಸಂಖ್ಯೆ: 5
ಮೀನ: ಮಕ್ಕಳಿಂದ ನಿರೀಕ್ಷಿತ ಸಹಕಾರ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ. ಮಹಿಳೆಯರಿಂದ ಅನಿರೀಕ್ಷಿತ ಸಹಕಾರ. ಶುಭಸಂಖ್ಯೆ: 9