

ಮೇಷ: ಮಹಾಗಣಪತಿಯ ಆರಾಧನೆಯಿಂದ ಕಾರ್ಯಗಳಲ್ಲಿ ವಿಜಯ. ಬಂಧುಗಳಿಂದಲೂ ಹೆಚ್ಚಿನ ಸಹಾಯ ಲಭ್ಯವಾಗಲಿದೆ. ಶುಭಸಂಖ್ಯೆ: 9
ವೃಷಭ: ಮಕ್ಕಳಿಂದ ಕಷ್ಟಗಳು ಎದುರಾಗಬಹುದು. ಅವರ ಮೇಲೆ ಕೋಪಿಸಿಕೊಳ್ಳುವುದರಿಂದ ಏನೂ ಪ್ರಯೋಜನವಾಗá-ವುದಿಲ್ಲ. ಶುಭಸಂಖ್ಯೆ: 8
ಮಿಥುನ: ಮಾಡುತ್ತಿರುವ ಕೆಲಸಗಳು ಯಶಸ್ಸಿನತ್ತ ತಿರುಗಲು ಸಾಧ್ಯವಾಗಲಿದೆ. ಶ್ರೀದೇವಿ ಭದ್ರಕಾಳಿಯ ಸ್ತುತಿ ಮಾಡಿ. ಶುಭಸಂಖ್ಯೆ: 2
ಕಟಕ: ಮನಸ್ಸನ್ನು ಗೊಂದಲದ ಗೂಡನ್ನಾಗಿ ಮಾಡಿಕೊಳ್ಳದೆ ಜೇನುಗೂಡಾಗಿ ಪರಿವರ್ತಿಸಿ. ಶಾಂತಿ ಸಮಾಧಾನ ಇರಲಿವೆ. ಶುಭಸಂಖ್ಯೆ: 1
ಸಿಂಹ: ಹಿತಶತ್ರುಗಳು ನಿಮಗೆ ಕಿರಿಕಿರಿ ಉಂಟುಮಾಡಲು ಸಿದ್ಧರಾಗಿದ್ದಾರೆ. ಬಾಳಸಂಗಾತಿ ನೀಡá-ವ ಸಲಹೆಯಿಂದ ಎಲ್ಲ ಕ್ಷೇಮ. ಶುಭಸಂಖ್ಯೆ: 7
ಕನ್ಯಾ: ವೃತ್ತಿ ಎಂದಮೇಲೆ ಕಷ್ಟನಷ್ಟಗಳು ಇದ್ದೇ ಇರುತ್ತವೆ. ಅವುಗಳಿಗೆ ಅಧೀರರಾಗದೆ, ಹಿಂಜರಿಯದೆ ಮುಂದಕ್ಕೆ ಸಾಗಿ. ಶುಭಸಂಖ್ಯೆ: 6
ತುಲಾ: ಜೀವನದ ಎಲ್ಲ ಏರಿಳಿತಗಳೂ ವಿಧಿಯ ಸಂಕಲ್ಪದಂತೆ ಆಗುತ್ತಿರುತ್ತವೆ. ಭಕ್ತಿಯಿಂದ ವಿಷ್ಣುಸಹಸ್ರನಾಮವನ್ನು ಪಠಿಸಿ. ಶುಭಸಂಖ್ಯೆ: 4
ವೃಶ್ಚಿಕ: ವಿರೋಧಿಗಳ ಜತೆಗೆ ಮಾತುಕತೆಗಳು ಬೇಡ. ಅವಿವೇಕಿಗಳಿಗೆ ಮಾತು ಅರ್ಥವಾಗದು. ನಿಮಗೇ ಜಯವಾಗಲಿದೆ. ಶುಭಸಂಖ್ಯೆ: 3
ಧನಸ್ಸು: ಅನ್ಯಲಿಂಗಿಗಳ ಜತೆ ವ್ಯವಹರಿಸುವಾಗ ಜಾಗ್ರತೆ. ಇಲ್ಲದಿದ್ದರೆ ನಾನಾ ರೀತಿಯ ತೊಂದರೆಗಳು ಬರಬಹುದು. ಶುಭಸಂಖ್ಯೆ: 5
ಮಕರ: ಇಷ್ಟಕ್ಕೆ ವಿರುದ್ಧದ ಕೆಲಸಗಳನ್ನೇ ಮಾಡಬೇಕಾಗಿ ಬರಬಹುದು. ಜಾಣತನದಿಂದ ಅದನ್ನು ನಿಭಾಯಿಸುವುದು ಉತ್ತಮ. ಶುಭಸಂಖ್ಯೆ: 9
ಕುಂಭ: ಅನೇಕ ಸ್ನೇಹಿತರು ನಿಮ್ಮ ಏಳಿಗೆಗಾಗಿ ನೆರವನ್ನು ನೀಡಲಿದ್ದಾರೆ. ಅವರನ್ನು ಪ್ರೀತಿ, ಗೌರವಗಳಿಂದ ಉಪಚರಿಸಿ. ಶುಭಸಂಖ್ಯೆ: 2
ಮೀನ: ಅಕ್ಕಪಕ್ಕದವರು ನಿಮ್ಮನ್ನು ಆತ್ಮೀಯತೆಯಿಂದ ಕಾಣುತ್ತಾರೆ. ನಿಮ್ಮ ನಾಯಕತ್ವದ ಗುಣಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 8