ಇಲ್ಲಿದೆ ನೋಡಿ ಹಾಲು ಕೊಡುವ ಗಂಡು ಮೇಕೆ, ಕೆಚ್ಚಲೂ ಇದೆ !..ವೈದ್ಯರು ಹೇಳ್ತಿರೋದೇನು?

Goat
Published on

ಗಂಡು ಪ್ರಾಣಿಗಳು ಹಾಲು ಕೊಡುವುದನ್ನು ಎಲ್ಲಾದರೂ ಕೇಳಿದ್ದೀರಾ? ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ್ದನ್ನು ಇಲ್ಲೊಂದು ಮೇಕೆ ಸತ್ಯ ಮಾಡಿದೆ.

ರಾಜಸ್ಥಾನ ಧೋಲ್ಪುರದಲ್ಲಿರುವ ಈ ಗಂಡು ಮೇಕೆ ಸದ್ಯ ಚರ್ಚೆಯಲ್ಲಿರುವ ಪ್ರಾಣಿ. ಕಾರಣವಿಷ್ಟೇ ಇದು ಹಾಲು ಕೊಡುತ್ತಿದೆ. ಸುತ್ತಲಿನ ಜನರಂತೂ ಆಶ್ಚರ್ಯ ಚಕಿತರಾಗಿ ಮೇಕೆಯನ್ನು ನೋಡಲು ದಂಡುದಂಡಾಗಿ ಬರುತ್ತಿದ್ದಾರೆ.

ಅಷ್ಟಕ್ಕೂ ಈ ಮೇಕೆ ಗಂಡಾಗಿದ್ದರೂ ಹೇಗೆ ಅದರ ದೇಹದಲ್ಲಿ ಹಾಲು ಉತ್ಪಾದನೆಯಾಗುತ್ತಿರಲು ಕಾರಣ ಹಾರ್ಮೋನ್​ಗಳ ಅಸಮತೋಲನ ಎಂದು ಪಶುವೈದ್ಯರು ಅಂದಾಜಿಸಿದ್ದಾರೆ.

ನಾವು ಈ ಮೇಕೆಯನ್ನು ಚಿಕ್ಕದಿದ್ದಾಗಲೇ ತಂದಿದ್ದೇವೆ. ಹಾಗೆ ಖರೀದಿಸಿ ತಂದ ಆರು ತಿಂಗಳ ಬಳಿಕ ಮೇಕೆಯಲ್ಲಿ ಕೆಚ್ಚಲುಗಳು ಬೆಳೆಯಲು ಶುರುವಾಯಿತು. ಅದರಲ್ಲೀಗ ಹಾಲೂ ಬರುತ್ತಿದೆ ಎಂದು ಮೇಕೆಯ ಮಾಲೀಕ ರಾಜೀವ್​ ಖುಷ್ವಾಹಾ ತಿಳಿಸಿದ್ದಾರೆ. ಪ್ರತಿದಿನವೂ ಈ ಗಂಡು ಮೇಕೆ 200ರಿಂದ 250 ಗ್ರಾಂ ಹಾಲು ಕೊಡುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ರಚನೆಯಾಯ್ತು ಇಂಡೋ ಇಸ್ಲಾಮಿಕ್​ ಕಲ್ಚರಲ್​ ಫೌಂಡೇಶನ್ ಟ್ರಸ್ಟ್​…

ಮೇಕೆಯ ಕೆಚ್ಚಲುಗಳಿಂದ ನಾನೂ ಕೂಡ ಹಾಲು ಹಿಂಡಿದ್ದೇನೆ ಎಂದು ರಾಜೀವ್ ಅವರ ನೆರೆಮನೆಯವರೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶುರೋಗ ಸರ್ಜನ್​ ಜ್ಞಾನ ಪ್ರಕಾಶ್ ಸಕ್ಸೇನಾ ಅವರು, ತಾಯಿ ಗರ್ಭದಲ್ಲಿ ಭ್ರೂಣ ನಿರ್ಣಯ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣಿನ ಹಾರ್ಮೋನುಗಳು ಸಮತೋಲನವಾಗಿದ್ದರೆ ಹೀಗೆ ಆಗುತ್ತದೆ. ಹುಟ್ಟಿದ ನಂತರವೂ ಗಂಡು ಮತ್ತು ಹೆಣ್ಣಿನ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ.

ಹಾಗೇ, ಇದು ತುಂಬ ಅಪರೂಪದ ಪ್ರಕರಣ. ಲಕ್ಷದಲ್ಲಿ ಒಂದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net