ಅಪಪ್ರಚಾರಕ್ಕೆ ಕಾಲವೇ ಉತ್ತರಿಸುವುದು, ಚಿಂತೆ ಬೇಡ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನಕರ ತಿರುವು. ಧಾರ್ವಿುಕ ಆಚರಣೆಗಳಿಂದ ಸಮಾಧಾನ. ಉದ್ಯೋಗದಲ್ಲಿ ಅತಂತ್ರತೆ. ಶುಭಸಂಖ್ಯೆ: 9

ವೃಷಭ: ಅಧಿಕ ಧನಲಾಭ ಒದಗಿಬಂದು ನೆಮ್ಮದಿ. ಬಂಧುಗಳ ಭೇಟಿಯಿಂದ ಸಂತಸ ಹೆಚ್ಚುವುದು. ಅನಾರೋಗ್ಯ ನಿವಾರಣೆ. ಶುಭಸಂಖ್ಯೆ: 1

ಮಿಥುನ: ವೃಥಾ ತಿರುಗಾಟ ಮಾಡಬೇಕಾಗಬಹುದು. ಸಂಗಾತಿಯೊಂದಿಗೆ ವಿರಸ, ಸಮಾಧಾನಚಿತ್ತರಾಗಿರಿ. ಭೂ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ:3

ಕಟಕ: ಕುಟುಂಬದಲ್ಲಿ ಆಹ್ಲಾದಕರ ವಾತಾವರಣ. ಸ್ನೇಹಿತನಿಂದ ಆರ್ಥಿಕ ಸಹಾಯ ದೊರೆಯಲಿದೆ. ವಿಶೇಷ ವಸ್ತು ಲಭ್ಯವಾಗಿ ಖುಷಿ. ಶುಭಸಂಖ್ಯೆ: 7

ಸಿಂಹ: ಮನೆಯಲ್ಲಿ ಸಹನೆಯಿಂದ ವರ್ತಿಸಿ. ಉದ್ಯೋಗ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ. ಉಪಕರಣ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8

ಕನ್ಯಾ: ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಆತ್ಮೀಯರ ಸಮಾಗಮ. ಮೇಲಧಿಕಾರಿಗಳಿಂದ ಕೆಲಸದ ಕುರಿತು ಒತ್ತಡ. ಆಯಾಸ. ಶುಭಸಂಖ್ಯೆ: 9

ತುಲಾ: ದುಂದುವೆಚ್ಚದಿಂದ ಆರ್ಥಿಕ ಮುಗ್ಗಟ್ಟು. ಕುಟುಂಬದಲ್ಲಿ ವಿರಸ. ಅಪಪ್ರಚಾರಕ್ಕೆ ಕಾಲವೇ ಉತ್ತರಿಸುವುದು, ಚಿಂತೆ ಬೇಡ. ಶುಭಸಂಖ್ಯೆ: 6

ವೃಶ್ಚಿಕ: ಕಾರ್ಯ ವಿಳಂಬವಾದರೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ. ಹಿತಶತ್ರುಗಳಿಂದ ತೊಂದರೆ. ಖಾಸಗಿ ಉದ್ಯೋಗಿಗಳಿಗೆ ಭೀತಿ. ಶುಭಸಂಖ್ಯೆ: 1

ಧನುಸ್ಸು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಕಾರ್ಯದ ಅಂತ್ಯ. ದೈಹಿಕ ಶ್ರಮ. ಅನಾರೋಗ್ಯ ಕಾಡಬಹುದು. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 5

ಮಕರ: ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ತೆಗೆದುಕೊಳ್ಳಿ. ತಾಯಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6

ಕುಂಭ: ದುಶ್ಚಟಗಳನ್ನು ನಿಯಂತ್ರಿಸಿ. ಕಚೇರಿಯಲ್ಲಿ ನಿಮ್ಮ ಧೋರಣೆಯಿಂದ ಅವಮಾನ. ಹೃದಯಸಂಬಂಧಿ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 8

ಮೀನ: ನಿವೇಶನ ಖರೀದಿಯಲ್ಲಿ ಮೋಸ. ಸಹೋದರಿಯರ ಸಲಹೆಯಂತೆ ಪಿತ್ರಾರ್ಜಿತ ಆಸ್ತಿ ಇತ್ಯರ್ಥ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net