

ಮೇಷ: ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ, ಮಹಿಳಾ ಪೊಲೀಸ್ರಿಗೆ ಒತ್ತಡ. ಕೈಗೊಂಡ ನಿರ್ಧಾರಗಳಿಗೆ ಬದ್ಧರಾಗಿರಿ. ಶುಭಸಂಖ್ಯೆ: 9
ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ. ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಸಾರಿಗೆ ವ್ಯವಸ್ಥೆ ವ್ಯವಹಾರ ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ: 6
ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಮಹಿಳೆಯರಿಗೆ ಶುಭದಾಯಕ ದಿನ. ನಿಂತ ಕಾರ್ಯಗಳು ಮುಂದುವರಿಕೆ. ಶುಭಸಂಖ್ಯೆ: 2
ಕಟಕ: ಕಾರ್ಯಸಿದ್ಧಿಯಾಗಿ ಬಹುದಿನದ ಕನಸು ನನಸು. ಬಂಧುಗಳ ಆಗಮನವಾಗುವುದು. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 4
ಸಿಂಹ: ಧನ ಲಾಭವಾಗಲಿದೆ. ಸಂಕಷ್ಟ ದೂರ. ಗ್ರಂಥ ರಚನೆಯಲ್ಲಿ ವಿಶೇಷ ಆಸಕ್ತಿ ತಾಳುವಿರಿ. ಭೂಮಿ ಖರೀದಿಸುವ ಯೋಗವಿದೆ. ಶುಭಸಂಖ್ಯೆ: 8
ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲವಾಗುವುದು. ಅಧಿಕ ಪ್ರಯಾಣ ಬೇಡ. ಕೆಲಸದ ಒತ್ತಡದಿಂದ ದೇಹಾಯಾಸ. ಶುಭಸಂಖ್ಯೆ: 7
ತುಲಾ: ಹಿರಿಯರಿಗೆ ಅಪಘಾತ ಸಂಭವ, ಹುಷಾರಾಗಿ ನೋಡಿಕೊಳ್ಳಿ. ಆರ್ಥಿಕಸ್ಥಿತಿಯಲ್ಲಿ ಚೇತರಿಕೆ, ಶಿಕ್ಷಕರಿಗೆ ಶುಭದಾಯಕ ದಿನ. ಶುಭಸಂಖ್ಯೆ: 3
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟವಾಗಿ ಬೇಸರ. ವಿದ್ಯೆಯಲ್ಲಿ ಅನಾಸಕ್ತಿ ಮೂಡುವುದು. ವೈರಾಗ್ಯ ಮನೋಭಾವ. ಧ್ಯಾನದಿಂದ ಸಮಾಧಾನ. ಶುಭಸಂಖ್ಯೆ: 7
ಧನುಸ್ಸು: ಬಂಧುಗಳೊಂದಿಗೆ ಜಗಳವಾಗಬಹುದು, ತಾಳ್ಮೆ ಕಳೆದುಕೊಳ್ಳಬೇಡಿ. ಮನಸ್ಸಿನಲ್ಲಿ ಅಶಾಂತಿ. ಸಮಾಜದಲ್ಲಿ ಅಪಕೀರ್ತಿ. ಶುಭಸಂಖ್ಯೆ: 2
ಮಕರ: ದಾಂಪತ್ಯದಲ್ಲಿ ವಿರಸ. ಸಮಾಧಾನದಿಂದ ಇರುವುದು ಕ್ಷೇಮಕರ. ಶತ್ರುಗಳೊಂದಿಗೆ ವಾಗ್ವಾದ. ಭೂಮಿ ವ್ಯಾಜ್ಯದಲ್ಲಿ ಸೋಲು. ಶುಭಸಂಖ್ಯೆ: 5
ಕುಂಭ: ಅಧಿಕಾರಿ ವರ್ಗದಿಂದ ತೊಂದರೆಯಿದೆ. ವಿವಾಹದ ವಿಚಾರದಲ್ಲಿ ಅಶುಭಸುದ್ದಿ. ಕೌಟುಂಬಿಕ ಖರ್ಚು ಜಾಸ್ತಿಯಾಗುವುದು. ಶುಭಸಂಖ್ಯೆ: 9
ಮೀನ: ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಹೃದಯ ಸಂಬಂಧಿ ರೋಗವಿದ್ದವರಿಗೆ ಉಲ್ಬಣ. ಒತ್ತಡದ ಬದುಕಿನಿಂದ ಹೊರಬನ್ನಿ. ಶುಭಸಂಖ್ಯೆ: 1