

ಮೇಷ: ದೇವತಾ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆ. ವಾಕ್ ಚಾತುರ್ಯದಿಂದ ಕೂಡಿದ ಕಾರ್ಯ ವೈಖರಿ. ಸರ್ಕಾರೀ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 9
ವೃಷಭ: ಧಾರ್ವಿುಕ ಕಾರ್ಯದ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ . ಹಿರಿಯರ ಪೋ›ತ್ಸಾಹ. ಆಸ್ತಿ ವಿಚಾರಗಳಲ್ಲಿ ಬೆಳವಣಿಗೆ. ಶುಭಸಂಖ್ಯೆ: 1
ಮಿಥುನ: ಸಹಾಯ ಮಾಡಲು ಹೋಗಿ ತೊಂದರೆ. ಧಾರ್ವಿುಕ ಕಾರ್ಯಗಳಿಗೆ ಧನವ್ಯಯ. ಆರ್ಥಿಕ ವಿಚಾರಗಳಲ್ಲಿ ಸಾಹಸ ಸಲ್ಲದು. ಶುಭಸಂಖ್ಯೆ: 5
ಕಟಕ: ಆರ್ಥಿಕ ವಿಚಾರದಲ್ಲಿ ಅಧಿಕ ಗಮನ. ಹೆಚ್ಚಿದ ಜನಸಂಪರ್ಕ. ಆಸ್ತಿ ವಿಚಾರದಲ್ಲಿ ಗೊಂದಲ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 9
ಸಿಂಹ: ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆಯಿಂದ ನಷ್ಟ ಸಂಭವ. ಗುರುಹಿರಿಯರಿಂದ ಸಂತೋಷ ವೃದ್ಧಿ. ಶುಭಸಂಖ್ಯೆ: 3
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ಅಭಿವೃದ್ಧಿ. ಗೌರವಾದರ ಲಭಿಸುವ ಅವಕಾಶ. ಜವಾಬ್ದಾರಿಯುತ ನಡೆಯಿಂದ ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ: 6
ತುಲಾ: ಪ್ರಯಾಣದಿಂದ ಧನಲಾಭವಾದರೂ ದೇಹಾಯಾಸ. ಉದ್ಯೋಗ ವ್ಯವಹಾರಗಳಲ್ಲಿ ಗಣ್ಯರ ಸಹಾಯ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 1
ವೃಶ್ಚಿಕ: ಸ್ಥಾನ ಸುಖಾದಿ ಪ್ರಾಪ್ತಿ. ಧನ ವೃದ್ಧಿ. ಅನ್ಯರ ಆಸ್ತಿ ವಿಚಾರದಲ್ಲಿ ಭಾಗಿಯಾಗುವ ಸಂಭವ. ಮಕ್ಕಳ ಪ್ರಗತಿ ನಿಮಿತ್ತ ಧನವ್ಯಯ. ಶುಭಸಂಖ್ಯೆ: 8
ಧನುಸ್ಸು: ಧೈರ್ಯ, ಸ್ವಾಭಿಮಾನದಿಂದ ಸಂದಭೋಚಿತ ಕಾರ್ಯ. ಗೌರವದಿಂದ ಕೂಡಿದ ಧನಾರ್ಜನೆ. ಸಂಗಾತಿ ಜತೆ ಸಣ್ಣ ಪ್ರಯಾಣ. ಶುಭಸಂಖ್ಯೆ: 8
ಮಕರ: ಬಹು ಜನರೊಂದಿಗೆ ಸಮಯ ವಿನಿಯೋಗ, ಜನಮನ್ನಣೆ. ವ್ಯವಹಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆ. ಆರ್ಥಿಕ ಶಿಸ್ತು ಅಗತ್ಯ. ಶುಭಸಂಖ್ಯೆ: 2
ಕುಂಭ: ಉದ್ಯೋಗದಲ್ಲಿ ಸ್ಥಿರ ಪ್ರದರ್ಶನ. ಗೌರವಾದಿ ವೃದ್ಧಿ. ಉತ್ತಮ ಧನ ಸಂಚಯನ. ನೆಮ್ಮದಿ. ಆಸ್ತಿ ವಿಚಾರದಲ್ಲಿ ದಾಕ್ಷಿಣ್ಯದಿಂದ ಕಷ್ಟ. ಶುಭಸಂಖ್ಯೆ: 8
ಮೀನ: ಆರೋಗ್ಯವನ್ನು ಕಡೆಗಣಿಸದಿರಿ. ಸ್ವಂತ ನಿರ್ಣಯದಿಂದ ಮಾಡುವ ಕೆಲಸದಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ, ಸುಖ ಲಭ್ಯ. ಶುಭಸಂಖ್ಯೆ:4