ಈ ರಾಶಿಯವರಿಗಿಂದು ರಾಜಕೀಯ ವ್ಯಕ್ತಿಗಳಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸಕಾಲ. ಆರ್ಥಿಕ ಸಂಕಷ್ಟ ಬಗೆಹರಿಯುವುದು. ಶುಭಸಂಖ್ಯೆ: 5

ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು. ಸಾಲದ ಸುಳಿಗೆ ಸಿಲುಕುವ ಸನ್ನಿವೇಶ. ರೋಗಬಾಧೆ. ಮಾನಸಿಕ ನೆಮ್ಮದಿ ಭಂಗವಾದೀತು. ಶುಭಸಂಖ್ಯೆ: 9

ಮಿಥುನ: ಧನವ್ಯಯವಾಗುವ ಸಂಭವ. ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ. ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುವವು. ಶುಭಸಂಖ್ಯೆ: 1

ಕಟಕ: ಅಧಿಕ ಲಾಭವಾಗಲಿದೆ. ಅಹಂಭಾವದ ಮಾತು ಆಡುವುದು ತರವಲ್ಲ. ಮಿತ್ರರಿಗೆ ನೋವು. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ: 6

ಸಿಂಹ: ಉದ್ಯೋಗ ಲಾಭವಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದೀತು. ಅಧಿಕ ಖರ್ಚು, ಉದ್ಯೋಗ ನಿಮಿತ್ತ ದೂರಪ್ರಯಾಣ. ಶುಭಸಂಖ್ಯೆ: 3

ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ದೊರೆಯಲಿದೆ. ನಷ್ಟದ ಆತಂಕ ಕಾಡಬಹುದು. ನಿದ್ರಾಭಂಗವಾದೀತು. ತಂದೆಯ ಮಿತ್ರರಿಂದ ಲಾಭ. ಶುಭಸಂಖ್ಯೆ: 9

ತುಲಾ: ಉದ್ಯೋಗದಲ್ಲಿ ತೊಂದರೆ. ಇರುವ ಉದ್ಯೋಗ ಬದಲಾವಣೆ ಮಾಡಬೇಕಾದೀತು. ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 7

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಅಡೆತಡೆಗಳ ನಿವಾರಣೆ. ಮನಸ್ಸಿನಲ್ಲಿ ಮಂದಹಾಸ. ಶುಭಸಂಖ್ಯೆ: 2

ಧನುಸ್ಸು: ಅಧಿಕಾರಿಗಳ ಭೇಟಿಯಾಗುವುದು. ಸಾಲಗಾರರಿಂದ ತೊಂದರೆ ಸಾಧ್ಯತೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಇಷ್ಟದೇವರ ಮೊರೆಹೋಗಿ. ಶುಭಸಂಖ್ಯೆ: 1

ಮಕರ: ಮಕ್ಕಳಿಂದ ಅವಘಡಗಳು. ಪೊಲೀಸ್ ಸ್ಟೇಷನ್ ಮತ್ತು ನ್ಯಾಯಾಲಯಕ್ಕೆ ಅಲೆದಾಟ. ಕಲ್ಪನೆ ಭಾವನೆಗಳಲ್ಲಿ ವಿಹರಿಸುವಿರಿ. ಶುಭಸಂಖ್ಯೆ: 5

ಕುಂಭ: ಆಸ್ತಿ ಮಾರಾಟದ ಆಲೋಚನೆ ಮಾಡುವಿರಿ. ಪ್ರಯಾಣದಲ್ಲಿ ವಸ್ತುಗಳ ಕಳವಾಗುವ ಭೀತಿಯಿದೆ. ಶತ್ರುಗಳು ಅಧಿಕವಾದಾರು. ಶುಭಸಂಖ್ಯೆ: 4

ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಆರೋಗ್ಯ ಸಮಸ್ಯೆ ಬಾಧಿಸೀತು. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net