

ಮೇಷ: ಆರೋಗ್ಯ ಸಮಸ್ಯೆ ಉಂಟಾಗಬಹುದು. ವ್ಯಾಪಾರದಲ್ಲಿ ನಿರಾಸಕ್ತಿ ಕಾಣಿಸಲಿದೆ. ರಕ್ತದೊತ್ತಡ ಸಮಸ್ಯೆ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 8
ವೃಷಭ: ಆದಾಯದಲ್ಲಿ ಹೆಚ್ಚಳ. ಕೆಲಸ ಕಾರ್ಯಗಳಲ್ಲಿ ಹಿತಶತ್ರುಗಳಿಂದ ತೊಂದರೆ. ಆಸ್ತಿ ಖರೀದಿಸುವ ಕುರಿತು ಚಿಂತನೆ ನಡೆಸುವಿರಿ. ಶುಭಸಂಖ್ಯೆ: 9
ಮಿಥುನ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಹಳೆಯ ಸಾಲ ಮರುಪಾವತಿಗೆ ನಿರ್ಧಾರ. ಸಹವರ್ತಿಗಳಿಂದ ಅಪಾಯ. ಶುಭಸಂಖ್ಯೆ: 2
ಕಟಕ: ನೀರು ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಆದಾಯ. ರಫ್ತು ವ್ಯಾಪಾರದಲ್ಲಿ ಅಧಿಕ ಲಾಭ. ವೈದ್ಯರಿಗೆ ಕೆಲಸದೊತ್ತಡ, ಯಶಸ್ಸು. ಶುಭಸಂಖ್ಯೆ: 8
ಸಿಂಹ: ಸಹೋದ್ಯೋಗಿಗಳೊಂದಿಗೆ ವಿರಸ. ಕಾರ್ಖಾನೆ ಕೆಲಸಗಾರರಿಗೆ ನಷ್ಟವಾಗಬಹುದು. ಅನವಶ್ಯಕ ಕಿರಿಕಿರಿ ಅನುಭವಿಸುವಿರಿ. ಶುಭಸಂಖ್ಯೆ: 4
ಕನ್ಯಾ: ಕೃಷಿ ಕ್ಷೇತ್ರದವರಿಗೆ ಸಮಸ್ಯೆ. ರಾಜಕೀಯದಲ್ಲಿ್ಲ್ದವರಿಗೆ ಒತ್ತಡ ಹೆಚ್ಚಾಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ಆಧ್ಯಾತ್ಮಿಕ ಒಲವು. ಶುಭಸಂಖ್ಯೆ: 6
ತುಲಾ: ಪಾಲುದಾರಿಕೆ ವ್ಯವಹಾರಗಳಲ್ಲಿ ಶುಭ. ಒಳಾಂಗಣ ವಿನ್ಯಾಸಕಾರರಿಗೆ ಉತ್ತಮ ದಿನ. ಭೂ ಸಂಬಂಧಿತ ನಿರ್ಧಾರಗಳಲ್ಲಿ ಎಚ್ಚರಿಕೆ. ಶುಭಸಂಖ್ಯೆ: 9
ವೃಶ್ಚಿಕ: ಉದ್ಯೋಗದಲ್ಲಿ ಅಶುಭ. ಪ್ರಯಾಣದಲ್ಲಿ ವಿಘ್ನ ಉಂಟಾಗಬಹುದು. ಗಣೇಶನನ್ನು ಪೂಜಿಸಿ ಹೊರಡಿ. ಜನಪ್ರಿಯತೆ ಗಳಿಸುವಿರಿ. ಶುಭಸಂಖ್ಯೆ: 1
ಧನುಸ್ಸು: ಹಣಕಾಸಿನ ಸಂಸ್ಥೆಯವರಿಗೆ ನಷ್ಟ. ಶಿಕ್ಷಕರು ಉಪನ್ಯಾಸಕರಿಗೆ ಬಡ್ತಿ. ಕುಟುಂಬದಲ್ಲಿ ಕಾಣಿಸಿದ್ದ ಜಟಿಲ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 2
ಮಕರ: ಸ್ವಂತ ಗ್ರಾಮದಿಂದ ಅಶುಭ ಸಮಾಚಾರ ಕೇಳುವಿರಿ. ವಿನಾಕಾರಣ ಪ್ರಯಾಣಕ್ಕಾಗಿ ಖರ್ಚು. ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 5
ಕುಂಭ: ದುಡುಕು ಸ್ವಭಾವದಿಂದ ತೊಂದರೆ. ಮಕ್ಕಳಿಗೆ ಆರೋಗ್ಯ ವ್ಯತ್ಯಾಸ. ಬಂಧುಗಳೊಂದಿಗೆ ಜಗಳ. ದಿನಸಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 2
ಮೀನ: ತಾಯಿಯ ಆರೋಗ್ಯದಲ್ಲಿ ಎಚ್ಚರ ವಹಿಸುವುದು ತೀರ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 8