ಈ ರಾಶಿಯ ಪತಿ-ಪತ್ನಿಯರಲ್ಲಿ ಇಂದು ಸಂತೋಷ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದಾಂಪತ್ಯ ಸೌಖ್ಯ. ಸಂಧಾನದಲ್ಲಿ ಯಶ. ಸಮಾಜದಲ್ಲಿ ಸನ್ಮಾನ. ಷೇರು ವ್ಯವಹಾರಗಳಲ್ಲಿ ನಷ್ಟ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:8

ವೃಷಭ: ತರಕಾರಿ ವ್ಯಾಪಾರಿಗಳಿಗೆ ಅಲ್ಪ ಆದಾಯವಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು ಆಗಬಹುದು. ಮನಸ್ಸಿಗೆ ನೆಮ್ಮದಿ. ಶುಭಸಂಖ್ಯೆ:6

ಮಿಥುನ: ಅಪರಿಚಿತರಿಂದ ಸಹಾಯ. ಯೋಚಿಸಿ ಕೆಲಸ ಮಾಡಿ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ತಿರುಗಾಟ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 2

ಕಟಕ: ಸ್ನೇಹಿತರೊಡನೆ ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ. ಬಹುದಿನಗಳಿಂದ ನಿರೀಕ್ಷಿಸಿದ ಅದೃಷ್ಟ ಬರಲಿದೆ. ಆಭರಣ ಲಾಭ. ಶುಭಸಂಖ್ಯೆ: 6

ಸಿಂಹ: ಮಹಿಳೆಯರಿಗೆ ಶುಭದಾಯಕ ದಿನ. ಆಪ್ತ ಸ್ನೇಹಿತರ ಭೇಟಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಬಂಧುಗಳಿಂದ ಸಹಾಯ. ಶುಭಸಂಖ್ಯೆ: 1

ಕನ್ಯಾ: ಉದ್ಯೋಗದಲ್ಲಿ ಬಡ್ತಿ. ಬದುಕಿನಲ್ಲಿ ಆಕಸ್ಮಿಕ ತಿರುವು ಬರುವುದು. ಸಂಸಾರದಲ್ಲಿ ತಾಳ್ಮೆ ಅಗತ್ಯ. ಧಾರ್ವಿುಕ ವಿಷಯದತ್ತ ಆಸಕ್ತಿ. ಶುಭಸಂಖ್ಯೆ:4

ತುಲಾ: ಗೃಹೋಪಯೋಗಿ ಪೀಠೋಪಕರಣಗಳ ಖರೀದಿ. ಮಿತ್ರರಿಂದ ಸಹಾಯ. ವೈದ್ಯರಿಗೆ ಸವಾಲಿನ ದಿನ. ಗುರುಹಿರಿಯರ ಭೇಟಿ. ಶುಭಸಂಖ್ಯೆ:3

ವೃಶ್ಚಿಕ: ಮಗನ ವಿದೇಶ ವಿದ್ಯಾಭ್ಯಾಸದ ಕನಸಿನ ಸಾಕಾರ. ಮನಸ್ಸಿಗೆ ಶಾಂತಿ ಸಿಗಲಿದೆ. ತೀರ್ಥಯಾತ್ರೆಗೆ ನಿರ್ಧಾರ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 5

ಧನುಸ್ಸು: ಕೋರ್ಟ್ ವ್ಯವಹಾರದಲ್ಲಿ ತಕ್ಕಮಟ್ಟಿನ ಕಾರ್ಯಸಿದ್ಧಿ. ಜೇನುಕೃಷಿಯಲ್ಲಿ ಪ್ರಶಂಸೆ. ಮನಕ್ಲೇಷ. ಉನ್ನತವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ:9

ಮಕರ: ಆತ್ಮೀಯರ ವಿಯೋಗ ಸಾಧ್ಯತೆ. ವಾಹನ ಚಾಲಕರಿಗೆ ಕಿರುಕುಳ. ಹಿತಶತ್ರುಗಳಿಂದ ಅಪಪ್ರಚಾರ. ಪತಿ ಪತ್ನಿಯರಲ್ಲಿ ಸಂತೋಷ. ಶುಭಸಂಖ್ಯೆ: 3

ಕುಂಭ: ಪರಸ್ಥಳ ವಾಸ. ಶರೀರದಲ್ಲಿ ಅನಾರೋಗ್ಯ ಸಮಸ್ಯೆ. ಆಸ್ತಿಗೋಸ್ಕರ ದಾಯಾದಿ ಕಲಹ. ಇಲ್ಲ ಸಲ್ಲದ ಅಪವಾದ. ಕಾರ್ಯಸಾಧನೆ. ಶುಭಸಂಖ್ಯೆ:7

ಮೀನ: ಧಾರ್ವಿುಕ ಕಾರ್ಯ ಯಶ. ಅವಿವಾಹಿತರಿಗೆ ವಿವಾಹಯೋಗ. ಸಾಮಾಜಿಕ ಕಾರ್ಯದಲ್ಲಿ ಭಾಗಿ. ಸಾಫ್ಟ್​ವೇರ್​ನವರಿಗೆ ಆತಂಕ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net