

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಅಪಮಾನ, ನಿಂದನೆ. ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರ. ಶುಭಸಂಖ್ಯೆ: 9
ವೃಷಭ: ಬಂಧುಗಳೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 2
ಮಿಥುನ: ಪ್ರಯಾಣದ ವೇಳೆ ಅನಾರೋಗ್ಯ. ಪ್ರೇಮದ ವಿಷಯಗಳ ಪ್ರಸ್ತಾಪ. ಗುರುನಿಂದನೆ ಬೇಡ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3
ಕಟಕ: ನಂಬಿದವರಿಂದಲೇ ಆರ್ಥಿಕವಾಗಿ ಮೋಸ. ಭೂಮಿ, ವಾಹನ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಶುಭಸಂಖ್ಯೆ: 7
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ದೈಹಿಕ, ಮಾನಸಿಕ ತೊಂದರೆ. ಮಕ್ಕಳ ನಡವಳಿಕೆಯಿಂದ ಬೇಸರ. ಪ್ರೀತಿಯ ವಿಷಯದಲ್ಲಿ ಚಿಂತೆ. ಶುಭಸಂಖ್ಯೆ: 6
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೆಟ್ಟ ಕನಸುಗಳು, ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 5
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾಗಬಹುದು. ಆತ್ಮಗೌರವಕ್ಕೆ ಚ್ಯುತಿ ಉಂಟಾಗುವುದು. ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 9
ವೃಶ್ಚಿಕ: ದುರಾಲೋಚನೆಗಳು ದಾರಿತಪ್ಪಿಸಬಹುದು. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಶುಭಸಂಖ್ಯೆ: 1
ಧನುಸ್ಸು: ಆತ್ಮೀಯರಿಂದ ಸಾಲದ ಸಹಾಯ. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ವ್ಯಾಪಾರಸ್ಥರಿಗೆ ನಿಂದನೆಯ ಭೀತಿ. ಶುಭಸಂಖ್ಯೆ: 5
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ ಹೆಚ್ಚು ಕಾಡೀತು. ಪ್ರೀತಿಪಾತ್ರರು ದೂರ, ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 2
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆ, ಆತಂಕ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 4
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿಗಳು ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಸೂಕ್ತ ಲಾಭ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6