

ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ. ಶುಭಸಂಖ್ಯೆ: 1
ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯವಾಗಲಿದೆ. ಖರ್ಚು ವೆಚ್ಚಗಳು ಹೆಚ್ಚು. ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ: 9
ಮಿಥುನ: ರಾಜಕೀಯ ಕ್ಷೇತ್ರದವರಿಗೆ ಪ್ರಗತಿಯ ದಿನ. ಶಾರೀರಿಕವಾಗಿ ಗಾಯಗಳಾಗಬಹುದು, ಎಚ್ಚರ. ಅತಿಯಾದ ಸಿಟ್ಟು ಒಳ್ಳೆಯದಲ್ಲ. ಶುಭಸಂಖ್ಯೆ: 4
ಕಟಕ: ಕಾರ್ಯಸಿದ್ಧಿಯಾಗಲಿದೆ. ಬಂಧುಗಳ ಆಗಮನವಾಗಿ ಕುಟುಂಬದಲ್ಲಿ ಸಂತಸ. ನಿರೀಕ್ಷಿತ ಕಾರ್ಯಗಳು ಕೈಗೂಡಲಿವೆ. ಶುಭಸಂಖ್ಯೆ: 2
ಸಿಂಹ: ಧನಲಾಭವಾಗಿ ಬಹುದಿನಗಳ ಕಷ್ಟ ಬಗೆಹರಿಯಲಿದೆ. ಗ್ರಂಥ ರಚನೆಯಲ್ಲಿ ಆಸಕ್ತಿ. ಭೂಮಿ ಖರೀದಿಸುವ ಯೋಗವಿದೆ. ಶುಭಸಂಖ್ಯೆ: 6
ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ. ಈ ದಿನ ಅಧಿಕ ಪ್ರಯಾಣ ಮಾಡಬೇಡಿ. ಕೆಲಸದ ಒತ್ತಡದಿಂದ ದೇಹಾಯಾಸ. ಶುಭಸಂಖ್ಯೆ: 6
ತುಲಾ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗುವುದು. ಸ್ನೇಹಿತರೊಂದಿಗೆ ವಾದ ವಿವಾದ. ಸಾಲ ಮರುಪಾವತಿ ಕಷ್ಟ. ಶುಭಸಂಖ್ಯೆ:7
ವೃಶ್ಚಿಕ: ವ್ಯಾಪಾರಿಗಳಿಗೆ ಗೊಂದಲವಾಗಲಿದೆ. ಮಕ್ಕಳಿಂದ ಮಾನಸಿಕ ಕಿರಿಕಿರಿ ಅನುಭವಿಸುವಿರಿ. ತಲೆ ನೋವು ಬಾಧಿಸುವುದು. ಶುಭಸಂಖ್ಯೆ:2
ಧನುಸ್ಸು: ಪ್ರವಾಸದಿಂದ ಸಂತಸ ಅನುಭವಿಸುವಿರಿ. ಸಹೋದರಿಯರಿಂದ ಶುಭವಾರ್ತೆ ಬರಲಿದೆ. ಹಿರಿಯರಿಗೆ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ:3
ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಕಾಡಲಿದೆ. ತಾಯಿಯಿಂದ ಹಣ ಸಹಾಯ ಒದಗುವುದು. ಕೃಷಿ ಉತ್ಪನ್ನಗಳಿಂದ ಲಾಭ. ಶುಭಸಂಖ್ಯೆ: 1
ಕುಂಭ: ಚುರುಕುತನ ಪ್ರದರ್ಶಿಸುವಿರಿ. ವ್ಯಾಪಾರದಲ್ಲಿ ಮುನ್ನಡೆಯಾಗಲಿದೆ. ಮಾತಿನಲ್ಲಿ ಒರಟುತನ ಬೇಡ. ಸಮಾಧಾನದ ವರ್ತನೆ ಇರಲಿ. ಶುಭಸಂಖ್ಯೆ:9
ಮೀನ: ಸರ್ಕಾರಿ ಕೆಲಸಗಳಲ್ಲಿ ಶುಭವಾಗುವುದು. ಹೆಚ್ಚಿನ ಅವಕಾಶಗಳು ಹರಿದು ಬರಲಿದೆ. ಸ್ಥಿರಾಸ್ತಿ ಲಭ್ಯವಾಗುವ ಅವಕಾಶ ಇದೆ. ಶುಭಸಂಖ್ಯೆ: 5