

ಮೇಷ: ಕೃಷಿ ಉಪಕರಣಗಳ ವರ್ತಕರಿಗೆ ಅನುಕೂಲ. ವಾಹನ ಬದಲಾವಣೆಗೆ ಮನಸ್ಸು. ತಂದೆ ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ಶುಭಸಂಖ್ಯೆ: 9
ವೃಷಭ: ಅನಿಯಂತ್ರಿತ ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಹಿತಶತ್ರುಗಳಿಂದ ತೊಂದರೆ. ಆತ್ಮವಿಶ್ವಾಸದಿಂದ ಕಾರ್ಯಸಿದ್ಧಿಗೆ ಪ್ರಯತ್ನಿಸಿ. ಶುಭಸಂಖ್ಯೆ: 6
ಮಿಥುನ: ಸಾಹಿತಿಗಳಿಗೆ, ಲೇಖಕರಿಗೆ ಅಧಿಕ ಲಾಭ. ವೈದ್ಯವೃತ್ತಿಯಲ್ಲಿ ಇರುವವರಿಗೆ ತೊಂದರೆ. ವಾಹನ ಖರೀದಿ. ಸಣ್ಣ ಮಾತಿನಿಂದ ಜಗಳ. ಶುಭಸಂಖ್ಯೆ: 2
ಕಟಕ: ತಾಂತ್ರಿಕ ಶಿಕ್ಷಣದಲ್ಲಿ ಮಕ್ಕಳ ಅಭಿವೃದ್ಧಿ. ಪುತ್ರಿಯ ವಿವಾಹದ ಪ್ರಸ್ತಾಪ. ಹಣಕಾಸು ಸಮಸ್ಯೆ. ರಿಯಲ್ ಎಸ್ಟೇಟ್ನವರಿಗೆ ಸೋಲು. ಶುಭಸಂಖ್ಯೆ: 7
ಸಿಂಹ: ಆಸ್ತಿ ಪತ್ರಗಳ ಕಾರ್ಯಗಳಲ್ಲಿ ಪ್ರಗತಿ. ಆಕಸ್ಮಿಕ ಘಟನೆ. ಗಾಯಕರು,ವಾದಕರಿಗೆ ವೇದಿಕೆ ಲಭ್ಯ. ಮನೆ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:4
ಕನ್ಯಾ: ಅನಿರೀಕ್ಷಿತವಾಗಿ ಸ್ವಗ್ರಾಮಕ್ಕೆ ಪ್ರಯಾಣ. ಮಹಿಳಾ ಉದ್ಯೋಗಿಗಳಿಗೆ, ಅಧಿಕಾರಿಗಳಿಗೆ ತೊಂದರೆ ವಸ್ತ್ರ ಖರೀದಿಯಲ್ಲಿ ಮೋಸ. ಶುಭಸಂಖ್ಯೆ:8
ತುಲಾ: ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ಅಶಾಂತಿ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ವಿಶೇಷ ದಿನ. ಸಂಗಾತಿಯೊಂದಿಗೆ ಮನಃಸ್ತಾಪ. ಶುಭಸಂಖ್ಯೆ: 2
ವೃಶ್ಚಿಕ: ಉಪನ್ಯಾಸಕ ವೃತ್ತಿಯವರಿಗೆ ವಿಶೇಷ ಪುರಸ್ಕಾರ. ನಂಬಿದ ಜನರಿಂದ ಮೋಸ ಹೋಗುವಿರಿ. ಪ್ರಭಾವಿ ವ್ಯಕ್ತಿಗಳೊಂದಿಗೆ ವಿರೋಧ. ಶುಭಸಂಖ್ಯೆ: 4
ಧನುಸ್ಸು: ಸಾರ್ವಜನಿಕ ರಂಗದಲ್ಲಿ ವಿಶೇಷ ಸನ್ಮಾನ. ಸಾಲ ಮಾಡುವ ಸಂಭವ. ಸರ್ಕಾರಿ ಕಾರ್ಯಗಳಲ್ಲಿ ಸಫಲ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 7
ಮಕರ: ಕಾರ್ಖಾನೆ ಉದ್ಯೋಗಿಗಳಿಗೆ ಕಷ್ಟ. ಮಿತ್ರರ ಅನಿರೀಕ್ಷಿತ ಭೇಟಿ. ವಿವಾಹ ಕಾರ್ಯದಲ್ಲಿ ಭಾಗಿ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:6
ಕುಂಭ: ಆದಾಯ ಕಡಿಮೆ. ಕುಟುಂಬದಲ್ಲಿ ಶುಭಕಾರ್ಯ. ತಿರುಗಾಟದಿಂದ ಅನಾರೋಗ್ಯ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸು ತೊಂದರೆ. ಶುಭಸಂಖ್ಯೆ: 8
ಮೀನ: ಸಂತಾನ ಅಪೇಕ್ಷಿತರಿಗೆ ಶುಭಸುದ್ದಿ. ಮಹಿಳಾ ಉದ್ಯೋಗಿಗಳಿಗೆ ಕೆಟ್ಟ ಮಾತುಗಳ ನಿಂದನೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 3