

ಮೇಷ: ಅನಿವಾರ್ಯವಾಗಿ ದೂರ ಪ್ರಯಾಣ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಕೃಷಿ ಕೆಲಸಗಳಿಗಾಗಿ ಪರಿಶ್ರಮಪಡುವಿರಿ. ಶುಭಸಂಖ್ಯೆ: 4
ವೃಷಭ: ಕುಟುಂಬದಲ್ಲಿ ಅಭಿವೃದ್ಧಿಯಾಗಲಿದೆ. ಸಜ್ಜನರ ಸಹವಾಸದಿಂದ ಜ್ಞಾನವೃದ್ಧಿಯಾಗಲಿದೆ. ಸಾಲ ಮರುಪಾವತಿ ಮಾಡಿದ ಖುಷಿ. ಶುಭಸಂಖ್ಯೆ: 9
ಮಿಥುನ: ತಲೆನೋವು, ಮಾನಸಿಕ ಅಸ್ವಸ್ಥತೆಯಿಂದ ತೊಂದರೆಯಾಗುವುದು. ಅನಗತ್ಯ ವಿಚಾರಗಳ ಬಗ್ಗೆ ಜಾಸ್ತಿ ಗಮನಹರಿಸಬೇಡಿ. ಶುಭಸಂಖ್ಯೆ: 8
ಕಟಕ: ಅಧಿಕಾರಿ ವರ್ಗದಿಂದ ಪ್ರಶಂಸೆ. ಕ್ರಿಯಾತ್ಮಕ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶ. ದಾಂಪತ್ಯದ ಭಿನ್ನಾಭಿಪ್ರಾಯ ದೂರವಾಗುತ್ತದೆ. ಶುಭಸಂಖ್ಯೆ: 1
ಸಿಂಹ: ಸಂಶೋಧನಾ ಕ್ಷೇತ್ರದವರಿಗೆ ಶುಭದಾಯಕ ದಿನ. ಕುಟುಂಬದಲ್ಲಿ ಕಲಹ. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಮಾಡುವಿರಿ. ಶುಭಸಂಖ್ಯೆ: 6
ಕನ್ಯಾ: ಮಾನಸಿಕ ವೇದನೆ. ವಿಪರೀತ ಕೋಪ ಒಳ್ಳೆಯದಲ್ಲ, ನಿಯಂತ್ರಿಸಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಶುಭಸಂಖ್ಯೆ: 3
ತುಲಾ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ ಸಾಧ್ಯತೆ, ಹುಷಾರು. ಧರ್ಮ ಕಾರ್ಯಕ್ಕೆ ಇದ್ದ ಅಡೆತಡೆಗೆ ಪರಿಹಾರ. ಶುಭಸಂಖ್ಯೆ: 8
ವೃಶ್ಚಿಕ: ಮನೋ ನಿಯಂತ್ರಣ ಇಲ್ಲದಿರುವಿಕೆಯಿಂದ ಕಷ್ಟ. ಆರ್ಥಿಕ ನಷ್ಟ. ಅನಗತ್ಯ ಮಾತಿನಿಂದ ಉಂಟಾದ ಸಮಸ್ಯೆಗೆ ಅಂತೂ ಪರಿಹಾರ. ಶುಭಸಂಖ್ಯೆ: 8
ಧನುಸ್ಸು: ಸಹೋದರ ಸಹೋದರಿಯರಲ್ಲಿ ವಾಗ್ವಾದ. ಉದ್ಯೋಗ ವ್ಯಾಪಾರಗಳಲ್ಲಿ ಅಡೆತಡೆಯಾಗುವುದು. ಅಧಿಕ ಖರ್ಚು ಅನಿವಾರ್ಯ. ಶುಭಸಂಖ್ಯೆ: 4
ಮಕರ: ಉದ್ಯೋಗ ದೊರಕುವ ಸಂದರ್ಭ. ಅಧಿಕ ಒತ್ತಡದ ಜೀವನ. ನಿದ್ರಾಭಂಗ. ಧ್ಯಾನದ ಮೊರೆ ಹೋದರೆ ಸಮಾಧಾನ ಸಿಕ್ಕೀತು. ಶುಭಸಂಖ್ಯೆ: 5
ಕುಂಭ: ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು. ಉದ್ಯೋಗಸ್ಥರಿಗೆ ಅನುಕೂಲ. ಪ್ರಯಾಣದಲ್ಲಿ ನಿರಾಳಭಾವ. ಕೃಷಿಕರಿಗೆ ಅನನುಕೂಲ. ಶುಭಸಂಖ್ಯೆ: 9
ಮೀನ: ಮಗಳ ವೈವಾಹಿಕ ಜೀವನದಲ್ಲಿ ಏರುಪೇರು ಸಾಧ್ಯತೆ. ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ನಿರೀಕ್ಷಿತ ಮುನ್ನಡೆ. ಶುಭಸಂಖ್ಯೆ: 1