ಈ ರಾಶಿಯವರಿಗೆ ಇಂದು ಉತ್ತಮ ಧನಾಗಮ, ಪ್ರೀತಿಯಲ್ಲಿ ಯಶಸ್ಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ನೇಹಿತರಿಂದ ಧನಾಗಮನ. ತಂದೆಯಿಂದ ಲಾಭ. ಕೋರ್ಟ್ ಕೇಸ್​ಗಾಗಿ ಅಲೆದಾಟ. ಸಾಲ ಪಡೆಯುವ ಚಿಂತನೆ. ಶುಭಸಂಖ್ಯೆ: 9

ವೃಷಭ: ಮಕ್ಕಳಲ್ಲಿ ಪ್ರಗತಿ. ಆಕಸ್ಮಿಕ ಧನಲಾಭ. ಬಾಲಗ್ರಹ ದೋಷ. ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯಿಂದ ವಿಶ್ವಾಸ. ಶುಭಸಂಖ್ಯೆ:1

ಮಿಥುನ: ವ್ಯಾಪಾರದಲ್ಲಿ ತೊಂದರೆ. ಸಾಲ ಮಾಡುವ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 5

ಕಟಕ: ದೂರ ಪ್ರಯಾಣ. ರಾಜಯೋಗದ ದಿವಸ. ಉತ್ತಮ ಅವಕಾಶ. ಶುಭ ಹಾರೈಕೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ. ವಿದ್ಯಾಭ್ಯಾಸದಲ್ಲಿ ಅನುಕೂಲ. ಸ್ಥಿರಾಸ್ತಿ ವಾಹನ ಲಾಭ. ಧರ್ಮಕಾರ್ಯಗಳಲ್ಲಿ ತೊಡಕು. ಶುಭಸಂಖ್ಯೆ: 3

ಕನ್ಯಾ: ಅಧಿಕ ತಿರುಗಾಟ, ಉದ್ಯೋಗ ಬದಲಾವಣೆಯಿಂದ ಯಶಸ್ಸು. ಬಂಧು ಬಾಂಧವರಿಂದ ಭಾದೆ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ:1

ತುಲಾ: ತಂದೆಯಿಂದ ಅನುಕೂಲ. ಕಾರ್ಯಜಯ. ಅಧಿಕ ಖರ್ಚು. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ. ಶುಭಸಂಖ್ಯೆ: 7

ವೃಶ್ಚಿಕ: ಆಕಸ್ಮಿಕ ಧನಯೋಗ. ಮಾನಹಾನಿ. ಹಣ ಕಳವು. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಮಕ್ಕಳು ಪೆಟ್ಟು ಮಾಡಿಕೊಳ್ಳುವರು. ಶುಭಸಂಖ್ಯೆ: 6

ಧನುಸ್ಸು: ದೈವ ನಿಂದನೆ ಮಾಡಬೇಡಿ. ವೈವಾಹಿಕ ಜೀವನದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆ ಕನಸು. ವಿವಾದಗಳಿಗೆ ಸಿಲುಕುವಿರಿ. ಶುಭಸಂಖ್ಯೆ: 7

ಮಕರ: ಸಾಲ ದೊರೆಯುವುದು. ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು. ಶುಭಸಂಖ್ಯೆ:5

ಕುಂಭ: ಉತ್ತಮ ಧನಾಗಮ. ಮಕ್ಕಳಿಗೆ ಉತ್ತಮ ಯೋಗ. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಪ್ರಗತಿ. ಪ್ರೀತಿಯಲ್ಲಿ ಯಶಸ್ಸು. ಶುಭಸಂಖ್ಯೆ: 2

ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ. ಸ್ಥಿರಾಸ್ತಿ ವಾಹನ ಯೋಗ, ಗುಪ್ತ ವಿಷಯಗಳಿಗೆ ಬಲಿ. ಕೆಲಸ ಕಾರ್ಯಗಳಲ್ಲಿ ಆತ್ಮ ಸಂತೃಪ್ತಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net