ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಾಲುದಾರಿಕೆಯಲ್ಲಿ ಅನುಕೂಲವಾಗಲಿದೆ. ಅನಾರೋಗ್ಯ ಸಮಸ್ಯೆ ಕಾಡಬಹುದು. ಮಾತಿನಿಂದ ಸಮಸ್ಯೆ ಉಂಟಾದೀತು. ಶುಭಸಂಖ್ಯೆ: 9

ವೃಷಭ: ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಎಚ್ಚರದಿಂದ ಮುನ್ನಡೆಯುವುದು ಅಗತ್ಯ. ಉದ್ಯಮ ಕ್ಷೇತ್ರದಲ್ಲಿ ಅನುಕೂಲವಿದೆ. ಶುಭಸಂಖ್ಯೆ:1

ಮಿಥುನ: ಸಕಾಲಕ್ಕೆ ಸಾಲದ ನೆರವು ದೊರೆಯುವುದು. ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ. ಸ್ನೇಹಿತರೊಂದಿಗೆ ಮೋಜು ಮಸ್ತಿ. ಶುಭಸಂಖ್ಯೆ: 9

ಕಟಕ: ಸಾಲದ ಚಿಂತೆ. ಆರೋಗ್ಯ ವ್ಯತ್ಯಾಸ ಉಂಟಾಗು ವುದು. ವೈದ್ಯರ ಸಲಹೆ ಅನಿವಾರ್ಯ. ಮಿತ್ರರಿಂದ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 3

ಸಿಂಹ: ಉದ್ಯೋಗ ಲಾಭವಾಗಿ ಸಂತಸದ ಕ್ಷಣಗಳು. ಆದರೆ ನೆಮ್ಮದಿ ಭಂಗವಾಗುವ ಸಾಧ್ಯತೆ. ಇರುವ ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 4

ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ. ಉದ್ಯೋಗ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 7

ತುಲಾ: ಉದ್ಯೋಗ ಬದಲಾವಣೆಯಿಂದ ಅನುಕೂಲ. ಮಾತಿನಿಂದ ಸಮಸ್ಯೆಯಾಗದಿರಲು ಸಾರಾ ಸಾರ ಯೋಚಿಸಿ ಅಭಿಪ್ರಾಯ ಹೇಳಿ. ಶುಭಸಂಖ್ಯೆ: 9

ವೃಶ್ಚಿಕ: ತಂದೆಯಿಂದ ಧನಾಗಮನ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಆದೀತು. ಶುಭಸಂಖ್ಯೆ: 1

ಧನುಸ್ಸು: ಅನುಕೂಲಕರ ದಿವಸ. ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಅನುಭವಿಸುವಿರಿ. ಆರೋಗ್ಯ ಸಮಸ್ಯೆ ಕಾಡಬಹುದು, ಜಾಗೃತೆ. ಶುಭಸಂಖ್ಯೆ: 5

ಮಕರ: ಪಾಲುದಾರಿಕೆಯಲ್ಲಿ ನಷ್ಟ. ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು ಬೇಡ. ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ: 3

ಕುಂಭ: ಸಾಲದ ಸಹಾಯ ಲಭಿಸುವುದು. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಉತ್ತಮ ಅವಕಾಶ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 8

ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net