ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಪ್ರಗತಿಯಾಗಿ ಮಾನಸಿಕ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದಲ್ಲಿ ಕಲಹ ಸಾಧ್ಯತೆ. ಸಮಾಧಾನ ಚಿತ್ತರಾಗಿರಿ. ವಾಹನ ಯೋಗ. ಸಹೋದರರೊಂದಿಗೆ ಆಸ್ತಿ ವಿಚಾರದ ಚರ್ಚೆ. ಶುಭಸಂಖ್ಯೆ: 8

ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಶುಭಸಂಖ್ಯೆ:1

ಮಿಥುನ: ಇಂಜಿನಿಯರ್​ಗಳಿಗೆ ಶುಭಸುದ್ದಿ. ಹಿತಶತ್ರುಗಳ ಕಾಟ ಜಾಸ್ತಿ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಋಣ ವಿಮೋಚನೆ. ಶುಭಸಂಖ್ಯೆ:3

ಕಟಕ: ತೈಲ ಮಾರಾಟಗಾರರಿಗೆ ಶುಭ ದಿನ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ:1

ಸಿಂಹ: ಸಹೋದ್ಯೋಗಿಗಳಿಂದ ತೊಂದರೆ. ಮಿತ್ರರ ಸಹಕಾರ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 3

ಕನ್ಯಾ: ಭುಜದಲ್ಲಿ ಸಮಸ್ಯೆ ಕಾಣಿಸಬಹುದು. ಹಣ ಹೂಡಿಕೆ ಮಾಡಲು ಸೂಕ್ತವಾದ ದಿನವಲ್ಲ. ಸ್ಥಿರಾಸ್ತಿ ಖರೀದಿಸಲು ಚಿಂತಿಸುವಿರಿ. ಶುಭಸಂಖ್ಯೆ:7

ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಮನೆ ಬದಲಾವಣೆಯ ಮಾತುಕತೆ. ದಾಂಪತ್ಯದಲ್ಲಿ ಕಲಹ. ಮಾತು ಹಿಡಿತದಲ್ಲಿರಲಿ. ಶುಭಸಂಖ್ಯೆ: 6

ವೃಶ್ಚಿಕ: ಹಣದ ವಿಷಯದಲ್ಲಿ ನಿರಾಸೆ ಉಂಟಾಗಬಹುದು. ಆರೋಗ್ಯದಲ್ಲಿ ಕ್ಷೀಣತೆ ಕಾಣಿಸಿಕೊಳ್ಳುವುದು. ಅಧಿಕ ಖರ್ಚು ಉಂಟಾದೀತು. ಶುಭಸಂಖ್ಯೆ:2

ಧನುಸ್ಸು: ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಮನಸ್ಸಿನಲ್ಲಿ ಅಶಾಂತಿ. ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ಅಧಿಕಾರಿಗಳಿಗೆ ಹೆಚ್ಚು ಶ್ರಮ. ಶುಭಸಂಖ್ಯೆ:7

ಮಕರ: ಮಹಿಳಾ ಉದ್ದಿಮೆದಾರರಿಗೆ ನಿರೀಕ್ಷಿತ ಲಾಭ. ಮಾನಸಿಕ ಭಯ ಕಾಡೀತು. ಅಧಿಕ ಅನಾರೋಗ್ಯ ಸಮಸ್ಯೆ, ಸಣ್ಣಪುಟ್ಟ ಅಪಘಾತ. ಶುಭಸಂಖ್ಯೆ:6

ಕುಂಭ: ಉದ್ಯೋಗದಲ್ಲಿ ಪ್ರಗತಿಯಾಗಿ ಮಾನಸಿಕ ನೆಮ್ಮದಿ. ಪ್ರಯಾಣದಿಂದ ಅನಾನುಕೂಲ ಜಾಸ್ತಿ. ಆಸ್ತಿ ಮಾರಾಟದಲ್ಲಿ ಹಿನ್ನಡೆ. ಶುಭಸಂಖ್ಯೆ: 5

ಮೀನ: ಪಾಲುದಾರಿಕೆಯಲ್ಲಿ ಅನುಕೂಲ. ಸ್ಥಿರಾಸ್ತಿಯಿಂದ ಉತ್ತಮ ಯೋಗ ಫಲ. ಮಕ್ಕಳಿಂದ ಹೆಚ್ಚಿನ ಅನುಕೂಲವಾಗುವ ದಿವಸ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net