ಈ ರಾಶಿಯವರಿಂದು ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿ, ನೆಮ್ಮದಿ ಇದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನ್ಯಾಯವಾದಿಗಳು ಸ್ವಪ್ರಯತ್ನದಿಂದ ಕಾರ್ಯದಲ್ಲಿ ಮುನ್ನಡೆ ಕಾಣುವಿರಿ. ಮಕ್ಕಳಿಂದಲೇ ವಾದ- ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ: 4

ವೃಷಭ: ಮುಕ್ತ ಭಾವದಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಬೆಂಬಲ ಸೂಚಿಸುವರು. ಶುಭಸಂಖ್ಯೆ: 7

ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ನಷ್ಟವನ್ನು ತಪ್ಪಿಸಿಕೊಳ್ಳುವಿರಿ. ಹಣದ ಒಳಹರಿವು ಸಾಮಾನ್ಯ. ಜಂಟಿ ವ್ಯವಹಾರ ಬೇಡ. ಶುಭಸಂಖ್ಯೆ:1

ಕಟಕ: ಪದೇಪದೆ ನಿರ್ಧಾರ ಬದಲಿಸುವುದಕ್ಕೆ ಕುಟುಂಬದಲ್ಲಿ ಅಸಹನೆ. ಕರಿದ ತಿಂಡಿ ಮಾರುವವರಿಗೆ, ಹೂವಿನ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ಸಿಂಹ: ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಸಾಮಾಜಿಕ ಕಾರ್ಯಗಳಲ್ಲಿ ಅವಕಾಶ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ. ಶುಭಸಂಖ್ಯೆ: 8

ಕನ್ಯಾ: ಸ್ನೇಹಿತರೊಂದಿಗೆ ವಿಚಾರವಿನಿಮಯ ಮಾಡುವಿರಿ. ಸಾಲ ಮರುಪಾವತಿ ಮಾಡುವಿರಿ. ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 4

ತುಲಾ: ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಪ್ರಯತ್ನಗಳನ್ನು ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ ಎದುರಾಗಬಹುದು. ಶುಭಸಂಖ್ಯೆ:1

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಒದಗುವ ಸಾಧ್ಯತೆ. ಬಾಹ್ಯಾಕಾಶ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 7

ಧನುಸ್ಸು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ. ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿ. ನೆಮ್ಮದಿಯಿದೆ. ಶುಭಸಂಖ್ಯೆ: 1

ಮಕರ: ಸತ್ಯಶೋಧದಿಂದ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಮಕ್ಕಳ ಆರೋಗ್ಯದ ಕಾಳಜಿ ಮುಖ್ಯ. ಶುಭಸಂಖ್ಯೆ:7

ಕುಂಭ: ಕೃಷಿ ಯಂತ್ರ ಹೊಂದಿರುವವರಿಗೆ ಹೆಚ್ಚಿನ ಆದಾಯ. ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ವಿದೇಶಿ ವ್ಯವಹಾರಸ್ಥರಿಗೆ ಮುನ್ನಡೆ. ಶುಭಸಂಖ್ಯೆ:1

ಮೀನ: ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಅತಿಯಾದ ಆತ್ಮೀಯತೆಯನ್ನು ತೋರಿಸುವವರ ಬಗ್ಗೆ ಎಚ್ಚರದಿಂದಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net