ಈ ರಾಶಿಯವರಿಗಿಂದು ಕೌಟುಂಬಿಕ ಜೀವನದಲ್ಲಿ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಹಿಳಾ ಉದ್ಯಮಿಗಳಿಗೆ ಸಾಲಗಾರರ ತೊಂದರೆ. ಮಕ್ಕಳಿಂದ ಗೌರವ. ಆರ್ಥಿಕ ಸಂಕಷ್ಟ. ಪ್ರೀತಿ ಪ್ರೇಮದ ವಿಷಯಗಳಲ್ಲಿ ಆಸಕ್ತಿ. ಶುಭಸಂಖ್ಯೆ: 9

ವೃಷಭ: ಆಸ್ತಿ ಕಳೆದುಕೊಳ್ಳುವ ಸಂದರ್ಭ ಬರಬಹುದು, ಎಚ್ಚರ. ಆರ್ಥಿಕ ಸಹಾಯ ಸಿಗುವುದಿಲ್ಲ. ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6

ಮಿಥುನ: ಭೂ ಸಂಬಂಧಿತ ವ್ಯವಹಾರಗಳಲ್ಲಿ ಧನ ಲಾಭ. ದೂರ ಪ್ರಯಾಣ ಮಾಡಬೇಕಾಗುವುದು. ಪತ್ರ ವ್ಯವಹಾರಗಳಲ್ಲಿ ಸಮಸ್ಯೆ. ಶುಭಸಂಖ್ಯೆ: 4

ಕಟಕ: ಧನಾಗಮನ. ಶುಭಕಾರ್ಯಗಳಿಗೆ ಅಧಿಕ ಖರ್ಚು. ಅನಾರೋಗ್ಯ ಕಾಡಬಹುದು. ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿ. ಶುಭಸಂಖ್ಯೆ: 2

ಸಿಂಹ: ಶುಭ ಕಾರ್ಯಗಳಿಗೆ ಖರ್ಚು. ವ್ಯವಹಾರ ಸ್ಥಳದಲ್ಲಿ ಕಲಹ. ಆತ್ಮಗೌರವಕ್ಕೆ ಧಕ್ಕೆಯಾದೀತು. ನೆರೆಹೊರೆಯವರಿಂದ ಸಹಾಯ. ಶುಭಸಂಖ್ಯೆ: 5

ಕನ್ಯಾ: ದೂರ ಪ್ರಯಾಣಕ್ಕಾಗಿ ನಿರ್ಧಾರ. ಮಿತ್ರರಿಂದ ನಷ್ಟ. ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಉತ್ತಮ. ಕುಟುಂಬದ ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ:3

ತುಲಾ: ಕೆಲಸಕಾರ್ಯಗಳಲ್ಲಿ ಮುನ್ನಡೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಮಿತ್ರರಿಂದ ದುರುಪಯೋಗ ಆಗುವ ಸಾಧ್ಯತೆ ಇದೆ, ಎಚ್ಚರ. ಶುಭಸಂಖ್ಯೆ: 2

ವೃಶ್ಚಿಕ: ಸರ್ಕಾರಿ ಅಧಿಕಾರಿಗಳಿಗೆ ಒತ್ತಡ. ಮಿತ್ರರಿಂದ ಮಾರ್ಗದರ್ಶನ ದೊರೆಯುವುದು. ಅದೃಷ್ಟ ಕೈ ತಪ್ಪುವುದು. ಉದರ ಸಂಕಟ. ಶುಭಸಂಖ್ಯೆ: 2

ಧನುಸ್ಸು: ಬಂಧುಗಳಿಂದ ಬೇಸರ. ಸಾಲ ಮಾಡುವ ಸಂದರ್ಭ ಬರಬಹುದು. ಮಹಿಳಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭ. ಶುಭಸಂಖ್ಯೆ: 6

ಮಕರ: ದಾಂಪತ್ಯದಲ್ಲಿ ವಿರಸ ಸಾಧ್ಯತೆ, ಸಮಾಧಾನವಿರಲಿ. ಪಾಲುದಾರಿಕೆಯಲ್ಲಿ ಅಭಿವೃದ್ಧಿ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಶುಭಸಂಖ್ಯೆ: 2

ಕುಂಭ: ಸರ್ಕಾರಿ ಅಧಿಕಾರಿಗಳಿಂದ ಪರಿಶೀಲನೆ. ಗುಪ್ತ ಕಾರ್ಯಸಿದ್ಧಿ. ಭವಿಷ್ಯದ ಚಿಂತೆ. ಸೌಂದರ್ಯವರ್ಧಕ ವ್ಯಾಪಾರದಿಂದ ಲಾಭ. ಶುಭಸಂಖ್ಯೆ: 7

ಮೀನ: ಮಿತ್ರರು ಶತ್ರುಗಳಾದಾರು. ಹೆಣ್ಣುಮಕ್ಕಳಿಂದ ಧನಲಾಭ. ಕೋರ್ಟ್, ಪೊಲೀಸ್ ಠಾಣೆಗೆ ಅಲೆದಾಟ. ಸಂಗಾತಿ ಜತೆಗೆ ವಿಹಾರ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net