ಈ ರಾಶಿಯವರಿಂದು ಪ್ರೇಮದ ಬಲೆಯಲ್ಲಿ ಸಿಲುಕುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ರ ವ್ಯವಹಾರದಿಂದ ಅನುಕೂಲವಾಗುವುದು. ಮಾನಸಿಕ ವೇದನೆ ಕಾಡಲಿದೆ. ಕಾನೂನುಬಾಹಿರ ಧನ ಸಂಪಾದನೆಯ ಆಸೆ. ಶುಭಸಂಖ್ಯೆ: 7

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ ಬರುವುದು. ಅನಾರೋಗ್ಯ ಸಮಸ್ಯೆ ನಿವಾರಣೆಯಾಗಿ ನೆಮ್ಮದಿ. ಸ್ಥಿರಾಸ್ತಿ ಮೇಲೆ ಸಾಲ. ಶುಭಸಂಖ್ಯೆ: 1

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ ಸಾಧ್ಯತೆ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳ ಬೆಳವಣಿಗೆಯ ಬಗ್ಗೆ ಹೆಮ್ಮೆ. ಶುಭಸಂಖ್ಯೆ: 3

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಹಿತಶತ್ರುಗಳ ಕುರಿತು ಎಚ್ಚರ. ಗೌರವಕ್ಕೆ ಪಾತ್ರರಾಗುವಿರಿ. ಆಸೆ-ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ: 1

ಸಿಂಹ: ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ. ಪ್ರತಿಷ್ಠೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ: 9

ಕನ್ಯಾ: ಮೋಸದಿಂದಾಗಿ ನಷ್ಟ ಉಂಟಾಗುವುದು. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯವಾಗಲಿದೆ. ಶುಭಸಂಖ್ಯೆ: 5

ತುಲಾ: ಸುಲಲಿತವಾಗಿ ಧನ ಸಂಪಾದನೆಯಾಗಲಿದೆ. ಅನಿರೀಕ್ಷಿತ ಅದೃಷ್ಟ ಕೂಡಿಬರಲಿದೆ. ಕಳೆದುಕೊಂಡವಸ್ತು ದೊರಕುವುದು. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯದಲ್ಲಿ ಹೊಂದಾಣಿಕೆ. ಅವಕಾಶಗಳು ಕೈತಪ್ಪುವ ಸಾಧ್ಯತೆ. ವೈಯಕ್ತಿಕ ನಿಂದನೆ ಬೇಡ. ಸಾಲಭಾದೆ ನಿವಾರಣೆಗೆ ಯೋಚನೆ. ಶುಭಸಂಖ್ಯೆ: 7

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ. ಅಧಿಕ ಲಾಭ ಮತ್ತು ಪ್ರಗತಿ. ಅದೃಷ್ಟವಂತರಾಗುವಿರಿ. ಶುಭಸಂಖ್ಯೆ: 9

ಮಕರ: ದಾಂಪತ್ಯ ಸಮಸ್ಯೆ. ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸಗಾರರ ಬಗ್ಗೆ ಎಚ್ಚರ ವಹಿಸಿ. ಸೇವಾವೃತ್ತಿಯ ಉದ್ಯೋಗ ಲಾಭ. ಶುಭಸಂಖ್ಯೆ: 5

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಸಮಾಧಾನ. ಶುಭಸಂಖ್ಯೆ: 2

ಮೀನ: ಸಾಲ ಮಾಡುವ ಪರಿಸ್ಥಿತಿ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಜಯ ದೊರೆಯುವುದು. ಅಧಿಕ ಖರ್ಚು, ಆರ್ಥಿಕ ಅನುಕೂಲ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net