

ಮೇಷ: ಸಾರ್ವಜನಿಕ ಜೀವನದಲ್ಲಿ ಅಗೌರವ. ಮನಸ್ಸಿಗೆ ನಾನಾ ಚಿಂತೆ. ಗೆಳೆಯನಿಂದ ಸಹಾಯದ ಹಸ್ತ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 7
ವೃಷಭ: ಹೊಸ ಕೆಲಸ ಆರಂಭಿಸಿದಲ್ಲಿ ಸ್ಥಗಿತಗೊಳ್ಳಬಹುದು. ಸಮಾಜದಲ್ಲಿ ಗೌರವದ ಅನುಭವ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 1
ಮಿಥುನ: ಕುಟುಂಬದಲ್ಲಿ ಸಂತಸ. ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಹೊಸತನ್ನು ನೋಡುವಿರಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 3
ಕಟಕ: ಕೈಗೊಂಡ ಯೋಜನೆಗಳು ವಿಫಲವಾಗಬಹುದು. ಸರ್ಕಾರಿ ನೌಕರರಿಗೆ ಅಡ್ಡಿ-ಆತಂಕಗಳು. ಹಿತೈಷಿಗಳಿಂದ ಉತ್ತಮ ಸಹಕಾರ. ಶುಭಸಂಖ್ಯೆ: 7
ಸಿಂಹ: ವ್ಯಾಪಾರ ಉದ್ಯೋಗದಲ್ಲಿ ಮನಸ್ತಾಪ ಉಂಟಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದ ಅಸ್ಥಿರತೆ ಕಾಡಬಹುದು. ಶುಭಸಂಖ್ಯೆ: 5
ಕನ್ಯಾ: ಕುಟುಂಬದ ಸಹಕಾರ ಇಲ್ಲದಿದ್ದರೂ ಸ್ನೇಹಿತರ ಬೆಂಬಲದಿಂದ ಕಾರ್ಯಸಿದ್ಧಿ. ಹಣಕಾಸಿನ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 6
ತುಲಾ: ನಿಮ್ಮ ಆತ್ಮವಿಶ್ವಾಸ ಪ್ರವೃತ್ತಿ ಹಲವರಿಗೆ ದಾರಿದೀಪ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕುಟುಂಬದಲ್ಲಿ ಗೊಂದಲ. ಶುಭಸಂಖ್ಯೆ: 7
ವೃಶ್ಚಿಕ: ನಿಮ್ಮ ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಸುಖಜೀವನ. ಶುಭಸಂಖ್ಯೆ: 5
ಧನುಸ್ಸು: ಬಂಧು ಮಿತ್ರರು ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಅಂತರ್ಜಾಲ ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸು ವಿರೋಧಿಗಳ ಮುಖಭಂಗ. ಶುಭಸಂಖ್ಯೆ: 3
ಮಕರ: ನಿಮ್ಮ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಪ್ರಾಪ್ತಿಯಾಗಿ ಸಂತಸ. ಕಲಾವಿದರಿಗೆ ವಿಶೇಷ ಮನ್ನಣೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ಕುಂಭ: ನಿಮ್ಮ ಸಲಹೆಗೆ ಎಲ್ಲರಿಂದ ಮನ್ನಣೆ. ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಗೆ ದೂರು. ಮನೆಯಲ್ಲಿ ಧಾರ್ವಿುಕ ಆಚರಣೆ. ಶುಭಸಂಖ್ಯೆ: 7
ಮೀನ: ಮನಸ್ಸು ಉತ್ಸಾಹದಿಂದ ಇರುವುದು. ಸುಖ ಭೋಜನ ಪ್ರಾಪ್ತಿ. ವ್ಯವಹಾರದಲ್ಲಿ ಅನಿರೀಕ್ಷಿತ ಗೆಲುವು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 9