ಈ ರಾಶಿಯವರಿಗಿಂದು ಅನಿರೀಕ್ಷಿತ ಸ್ನೇಹಿತರ ಭೇಟಿಯಿಂದ ಸಂತಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕವಾಗಿ ಅನುಕೂಲಕರ. ಆರೋಗ್ಯ ಸಮಸ್ಯೆ ಬಾಧಿಸುವುದು. ವೈದ್ಯರ ಸಲಹೆ ಅನುಸರಿಸಿ. ಮಾನಸಿಕವಾಗಿ ನೋವು. ಶುಭಸಂಖ್ಯೆ: 1

ವೃಷಭ: ಅಧಿಕ ಖರ್ಚು ಮಾಡಬೇಕಾಗುವುದು. ಮಿತ್ರರೊಂದಿಗೆ ಮೋಜು-ಮಸ್ತಿಯಲ್ಲಿ ತೊಡಗುವಿರಿ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 8

ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆಯುವುದು. ವ್ಯವಹಾರದಲ್ಲಿ ಪ್ರಗತಿಯಿದೆ. ಮಿತ್ರರಿಂದ ಉದ್ಯೋಗ ಲಾಭವಾದೀತು. ಶುಭಸಂಖ್ಯೆ: 2

ಕಟಕ: ಅನವಶ್ಯಕವಾಗಿ ಅಧಿಕ ಖರ್ಚು ಉಂಟಾಗಿ ಬೇಸರ. ಉದ್ಯೋಗ ನಷ್ಟ ಭೀತಿ ಇದೆ. ಇಷ್ಟ ದೇವರನ್ನು ಮನಸಾ ಸ್ಮರಿಸಿ. ನಿದ್ರಾಭಂಗ. ಶುಭಸಂಖ್ಯೆ: 4

ಸಿಂಹ: ದೂರ ಪ್ರಯಾಣ ಮಾಡುವಿರಿ. ಪ್ರಯಾಣದಲ್ಲಿ ವಸ್ತುಗಳು ಕಳವಾದೀತು ಜಾಗ್ರತೆ. ಅಪಮಾನ, ಗೌರವಕ್ಕೆ ಧಕ್ಕೆ ಬಂದೀತು. ಶುಭಸಂಖ್ಯೆ: 6

ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿಯಿಂದ ಸಂತಸ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗಬಹುದು. ಪಾಲುದಾರಿಕೆಯಿಂದ ಅನುಕೂಲ. ಶುಭಸಂಖ್ಯೆ: 6

ತುಲಾ: ಮಹಿಳೆಯರಿಂದ ನೋವು. ದಾಂಪತ್ಯದಲ್ಲಿ ವೈಮನಸ್ಸು, ಸಮಾಧಾನದಿಂದಿರಿ. ನಿದ್ದೆಗೆಡಬೇಡಿ. ಭವಿಷ್ಯದ ಚಿಂತೆ ಕಾಡಬಹುದು. ಶುಭಸಂಖ್ಯೆ: 5

ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡದ ಕ್ಷಣಗಳು. ಸೌಂದರ್ಯವರ್ಧಕ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 3

ಧನುಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ ಮೇಲೆ ಸಾಲ ಪಡೆಯಲು ಯೋಚನೆ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ತಂದೆಯಿಂದ ಲಾಭವಿದೆ. ಶುಭಸಂಖ್ಯೆ: 7

ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ. ಪ್ರಯಾಣದಲ್ಲಿ ಅಡೆತಡೆ ಆಗಲಿದೆ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ ಸೃಷ್ಟಿ. ಶುಭಸಂಖ್ಯೆ:1

ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ಅಹಂ ಒಳ್ಳೆಯದಲ್ಲ. ಸ್ನೇಹಿತರಿಂದ ನೆರವು ದೊರೆಯುವುದು. ಶುಭಸಂಖ್ಯೆ: 8

ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ. ದರ್ಪದ ಮಾತಿನಿಂದ ಶತ್ರುಗಳು ಜಾಸ್ತಿಯಾಗುವರು. ವಾಹನಗಳಿಂದ ತೊಂದರೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net